ಹಳೇ ವಂಟಮುರಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿ…

ಹಳೇ ವಂಟಮುರಿ ಗ್ರಾಮದಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಜಿಲ್ಲಾಧಿಕಾರಿಗಳಿಗೆ ಮನವಿ..

ರೈತರ ಹಿತಾಸಕ್ತಿ ಹಾಗೂ ಪರಿಸರ ಸಂರಕ್ಷಣೆ ಮಾಡುವದು ಅಧಿಕಾರಿಗಳ ಕರ್ತವ್ಯ..

ಅಕ್ರಮಕ್ಕೆ ಸ್ಥಳೀಯ ಪೊಲೀಸ್ ಹಾಗೂ ಕಂದಾಯ ಸಿಬ್ಬಂದಿಯ ಪ್ರೋತ್ಸಾಹದ ಸಂಶಯ..

ಬೆಳಗಾವಿ : ಕೆಲ ಪ್ರಭಾವಿ ದುಷ್ಟರು, ಸ್ವಾರ್ಥಿಗಳು ತಮ್ಮ ಅತಿಯಾಸೆಗಾಗಿ, ಕಾನೂನುಬಾಹಿರ ದಾರಿಯಲ್ಲಿ ಸಾಗಿ ಬೇಗ ಕುಬೇರಾರಾಗಬೇಕು ಎಂದು ಜನ್ಮ ನೀಡಿದ ಭೂತಾಯಿಯ ಒಡಲು ಅಗೆಯುವ ನೀಚ ಕಾರ್ಯ ಮಾಡಿ, ವಾಮಮಾರ್ಗದಲ್ಲಿ ಬದುಕೀರುತ್ತಾರೆ..

ಅದೇ ರೀತಿ ಬೆಳಗಾವಿ ಜಿಲ್ಲೆಯ, ಹುಕ್ಕೇರಿ ತಾಲೂಕಿನ ವಂಟಮುರಿ ಗ್ರಾಮದಲ್ಲಿಯೂ ಕೂಡಾ ಅಕ್ರಮ ಮರಳು ಸಾಗಣೆ ಪ್ರತಿನಿತ್ಯ ನಡೆಯುತ್ತಿದ್ದು, ದಿನಾಲೂ 20 ರಿಂದ 25 ಟಿಪ್ಪರುಗಳ ಮಾಲೀಕರು ಮರಳು ಸಾಗಣೆ ಮಾಡುತ್ತಿದ್ದು, ಸ್ಥಳೀಯ ರೈತರ ಹಿತಾಸಕ್ತಿ ಹಾಗೂ ಪರಿಸರವನ್ನು ನಾಶ ಮಾಡುವ ದುಷ್ಕೃತ್ಯವನ್ನು ಮಾಡುತ್ತಿದ್ದಾರೆ ಎಂದು ಇದೇ ಗ್ರಾಮದ ನಿವಾಸಿ ಹಾಗೂ ಕರುನಾಡು ರಕ್ಷಣಾ ವೇದಿಕೆಯ ರಾಜ್ಯ ಉಸ್ತುವಾರಿ ಅಧ್ಯಕ್ಷರಾದ ನಿಂಗಪ್ಪ ಬಾಲದಿಂಡಿ ಆರೋಪಿಸಿದ್ದಾರೆ..

ಸದರಿ ಗ್ರಾಮದ ನಮ್ಮ ಸ್ವಂತ ಜಮೀನುಗಳಾದ ಸರ್ವೇ ಸಂಖ್ಯೆ, 25, 26 ಜಮೀನುಗಳಲ್ಲಿ, ಕೆಲವರು ಅಕ್ರಮವಾಗಿ ಮರಳು ತಗೆದು ಸಾಗಣೆ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ನಾವು ಎಷ್ಟೋ ಸಲ ಹೇಳಿದರೂ ಕೂಡಾ ರಾತ್ರಿ ಹಗಲು ಎನ್ನದೇ ಸಾಗಣೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ಕುರಿತಾಗಿ ಸ್ಥಳೀಯ ಪೊಲೀಸರಿಗೆ ಹಾಗೂ ಕಂದಾಯ ಸಿಂಬ್ಬಂದಿಗೆ ತಿಳಿಸಲಾಗಿದೆ ಅವರೂ ಏನು ಕ್ರಮ ಜರುಗಿಸದೇ ಸುಮ್ಮನೆ ಇರುವದನ್ನು ನೋಡಿದರೆ, ಅವರು ಇದರಲ್ಲಿ ಭಾಗಿಯಾಗಿ, ಇವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತದೆ ಎಂದರು..

ಮಾನ್ಯ ಜಿಲ್ಲಾಧಿಕಾರಿಗಳಿಗೆ ಈ ಅಕ್ರಮ ಮರಳು ಸಾಗಣೆ ತಡೆಯಲು ಈಗ ಮನವಿ ನೀಡುತ್ತಿದ್ದು, ಅವರಾದರೂ ಈ ಅವ್ಯವಹಾರ ತಡೆದು, ಸಾರ್ವಜನಿಕರಿಗೆ, ರೈತರಿಗೆ, ಪರಿಸರಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು..

ಈ ಸಂದರ್ಭದಲ್ಲಿ ಕರವೇ ಪದದಿಕಾರಿಯಾದ ಸತೀಶ್ ನಾಯಕ, ಬಾಬು ಕೊಡಗನ್ನವರ, ಸತ್ಯಪ್ಪ ನಾಯಿಕ, ಮತ್ತಿತರ ಸ್ಥಳೀಯ ನಿವಾಸಿಗಳು ಭಾಗಿಯಾಗಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..