ಹಾಡು, ಡೊಳ್ಳು, ಕುಣಿತ ಜಯಘೋಷಗಳೊಂದಿಗೆ ಗಣೇಶನ ಆಗಮನ…

ಹಾಡು, ಡೊಳ್ಳು, ಕುಣಿತ ಜಯಘೋಷಗಳೊಂದಿಗೆ ಗಣೇಶನ ಆಗಮನ…

ಬೆಳಗಾವಿಯ ಖಡಕಗಲ್ಲಿಯ ರಾಜಾ ಗಣೇಶನನ್ನು ಸ್ವಾಗತಿಸಿದ ಅನಿಲ್ ಬೆನಕೆ..

ಬೆಳಗಾವಿ : ಬುಧವಾರ ದಿನಾಂಕ 04/09/2024ರಂದು ನಗರದ ಖಡಕ್ ಗಲ್ಲಿಯ ಶ್ರೀ ಗಣೇಶ ಮೂರ್ತಿಯ ಆಗಮನ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು, ಮಾಜಿ ಶಾಸಕ ಅನಿಲ್ ಬೇನಕೆ ಅವರು ಶೃದ್ಧಾ ಭಕ್ತಿಯಿಂದ ಖಡಕ ಗಲ್ಲಿಯ ರಾಜಾ ಗಣಪನ ಮೂರ್ತಿಯ ಸ್ವಾಗತ ಮಾಡಿದ್ದಾರೆ.

ನಗರದ ಬೋಗಾರ್ವೆಯ್ಸ ವೃತ್ತದ ಬಳಿ, ಮಾಜಿ ಶಾಸಕ ಅನಿಲ ಬೇನಕೆ ಅವರು ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದು, ಮೆರವಣಿಗೆಯಲ್ಲಿ ಸುಮಾರು 25 ಡೋಲುಗಳು, 10ತಾಶೆಗಳು, 5 ಧ್ವಜಗಳು ಅತ್ಯುತ್ತಮ ಉತ್ಸಾಹದಿಂದ ಭಾಗಿಯಾಗಿದ್ದರು..

ಈ ಆಗಮನ ಸಮಾರಂಭದಲ್ಲಿ ಎಸ್ ಪಿ ಸೌಂಡ್, ವ್ಹಿ ಸಿ ಲೈಟ್ ಸೌಂಡ್ ಸಿಸ್ಟಮ್, ಹಾಗೂ ಹಲಗಿ ವಾದಕಗಳು ಭಾಗಿಯಾಗಿ ಗಣೇಶನಿಗೆ ಗೌರವ ವಂದನೆ ಸಲ್ಲಿಸಿದರು..

ಈ ಗಜರಾಜನ ಆಗಮನದ ಸ್ವಾಗತದ ವೇಳೆ ಮುಖ್ಯ ಅತಿಥಿಗಳಾಗಿ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕರಾದ ಅನಿಲ ಬೇನಕೆ, ಮುರುಗೆಂದ್ರಗೌಢ ಪಾಟೀಲ, ರಾಹುಲ ಜಾಧವ, ರಾಜನ್ ಜಾಧವ, ನಾಮದೇವ ಬಿರ್ಜೆ ಸೇರಿದಂತೆ, ಖಡಕ ಗಲ್ಲಿಯ ಪಂಚರು, ಸಲಹೆಗಾರ ಮಂಡಳಿ, ಹಿರಿಯರು, ಯುವಕರು ಹಾಗೂ ಸಾವಿರಾರು ಭಕ್ತರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..