ಹಾಸ್ಟೆಲ್ ವಿದ್ಯಾರ್ಥಿನಿಗಳ ಕುಂದುಕೊರತೆ ಕೇಳಿದ ಮಹಿಳಾ ಆಯೋಗದ ಅಧ್ಯಕ್ಷರು..
ಸುಮಾರು ಎರಡು ಗಂಟೆ ವಿದ್ಯಾರ್ಥಿನಿಗಳೊಂದಿಗೆ ಸಂವಾದ ನಡೆಸಿದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ..
ವಿದ್ಯಾರ್ಥಿನಿಗಳಿಗೆ ಶೈಕ್ಷಣಿಕ ಜೀವನದ ನೈತಿಕ ಪಾಠ ಹೇಳಿದ ಅಧ್ಯಕ್ಷರು.
ಬೆಳಗಾವಿ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾದ ಡಾ, ನಾಗಲಕ್ಷ್ಮಿ ಚೌಧರಿ ಅವರು ಜಿಲ್ಲೆಯ ವಿವಿಧ ಕಡೆ ಸಂಚರಿಸಿ ಮಹಿಳೆಯರ ಸ್ಥಿತಿ ಗತಿ ಬಗ್ಗೆ ಹಾಗೂ ಅವರ ಸಮಸ್ಯೆ, ಅವರಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ಕೂಡಾ ನೀಡಿದ್ದಾರೆ..
ಸೋಮವಾರ ದಿನಾಂಕ 19/08/2024 ರಂದು ಸಂಜೆ 6, 30ಕ್ಕೆ ಬೆಳಗಾವಿಯ ಸದಾಶಿವ ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಬೇಟಿ ನೀಡಿದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು, ಸುಮಾರು 300 ವಸತಿ ನಿಲಯಗಳ ವಿದ್ಯಾರ್ಥಿನಿಯರೊಂದಿಗೆ ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಿದರು..

ಈ ವೇಳೆ ವಿದ್ಯಾರ್ಥಿನಿಗಳಿಗೆ ಯಾವುದಾದರೂ ಕುಂದುಕೊರತೆಗಳಿದ್ದರೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡಿದ್ದು, ಇಲಾಖಾ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ, ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು, ಸಮಸ್ಯೆಗಳಿಗೆ ಪರಿಹಾರಗಳನ್ನು ಕೈಗೊಳ್ಳಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿಗಳು, ಕೋಣೆಗಳ ಕೊರತೆ, ವೈದ್ಯಕೀಯ ಅಧ್ಯಯನದ ಪುಸ್ತಕಗಳು, ವೈಫೈ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿನಿಗಳು ಅಧ್ಯಕ್ಷರ ಬಳಿ ಹೇಳಿಕೊಂಡರು..

ಅದೇ ರೀತಿ ವಿದ್ಯಾರ್ಥಿನಿಯರು ಹೇಗೆ ಇರಬೇಕು? ಮೊಬೈಲ್ ಎಷ್ಟು ಒಳ್ಳೆಯದು ಹಾಗೂ ಎಷ್ಟು ಅಪಾಯಕಾರಿ, ಪ್ರೀತಿ, ಪ್ರೇಮ ಪ್ರಕರಣಗಳಿಂದ ಹೆಣ್ಣುಮಕ್ಕಳು ಯಾವ್ಯಾವ ಸಂಕಷ್ಟ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು ಎಳೆ ಎಳೆಯಾಗಿ ತಿಳಿಸಿ ತಾಯಿ ಮಗುವಿಗೆ ಹೇಳಿದಂತೆ ಹೇಳಿದರು, ನಾನು ದಿನಾ ಎಷ್ಟೋ ಪ್ರಕರಣಗಳನ್ನು ಕೇಳುತ್ತೇನೆ, ಹುಡುಗರಿಂದ ಹುಡುಗಿಯರು ಎಷ್ಟು ಅನ್ಯಾಯಕ್ಕೆ ಒಳಗಾಗುತ್ತಾರೆ, ಮೊದಲೆಲ್ಲ ಚೆನ್ನಾಗಿಯೇ ಇರುತ್ತೆ, ನಂತರ ಹೆಣ್ಣು ಮಕ್ಕಳ ಬಾಳು ತುಂಬಾ ಕಷ್ಟಕರ ಆಗುತ್ತದೆ, ಅದಕ್ಕೆ ತಾವು ಅವಕಾಶ ಮಾಡಿ ಕೊಡದೇ, ತಾವು ಉತ್ತಮ ಶಿಕ್ಷಣ ಪಡೆದು, ಆರ್ಥಿಕವಾಗಿ ಸಬಲರಾಗಿ, ಸಮಾಜಕ್ಕೆ ನಿಮ್ಮ ಮನೆತನಕ್ಕೆ ಮಾದರಿಯಾಗಿ, ಸಮಯ ಬಂದಾಗ ಈ ಪ್ರೀತಿ, ಮದುವೆ ಎಲ್ಲಾ ಆಗುತ್ತೆ ಎಂದು ಕಿವಿ ಮಾತು ಹೇಳಿ, ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಿದರು..
ಮಹಿಳಾ ಆಯೋಗದ ಅಧ್ಯಕ್ಷರ ಮಾತಿಗೆ ತುಂಬಾ ಸಂತಸಗೊಂಡ ವಿದ್ಯಾರ್ಥಿನಿಯರು, ಪ್ರತಿಯೊಬ್ಬರೂ ಆತ್ಮೀಯತೆಯಿಂದ ಮಾತನಾಡಿ, ತಮ್ಮಿಂದ ಇಂದು ನಮಗೆ ಹೊಸ ದೈರ್ಯ ಬಂದಿದೆ ಎಂದು ಕೃತಜ್ಞತಾ ನುಡಿಗಳನ್ನು ಆಡಿ, ಅಧ್ಯಕ್ಷರ ಹಿತನುಡಿಗಳನ್ನು ಪಾಲಿಸುವದಾಗಿ ಭರವಸೆ ನೀಡಿದರು…

ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಕಚೇರಿಯ, ವಸತಿ ನಿಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..