ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಿಬ್ಬಂದಿಗಳಿಗೆ ಮೂರು ದಿನಗಳ ವಿಶೇಷ ಕಾರ್ಯಾಗಾರ..
ಆರೋಗ್ಯ ತಪಾಸಣೆ ಜೊತೆಗೆ ಕಾರ್ಯಕ್ಷಮತೆ ವೃದ್ಧಿಯ ಉಪನ್ಯಾಸ ಶಿಬಿರ..
ವೈಯಕ್ತಿಕ ಹಾಗೂ ಇಲಾಖೆಯ ಸುಧಾರಣೆಗೆ ಇಂತಹ ಕಾರ್ಯಾಗಾರ ಅವಶ್ಯಕ..
ಹರ್ಷ ಎಸ್, ಉಪನಿರ್ದೇಶಕರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ..
ಬೆಳಗಾವಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸುಮಾರು 700 ಸಿಬ್ಬಂದಿಗಳಿಗೆ ಮೂರು ದಿನಗಳ ಅವಧಿಯ “ವಿಶೇಷ ಪುನಶ್ಚೇತನ ಕಾರ್ಯಾಗಾರವನ್ನು” ಏರ್ಪಡಿಸಿದ್ದು ಇದರಿಂದ ಇಲಾಖೆಯ ಸಿಬ್ಬಂದಿಗಳ ಕಾರ್ಯಕ್ಷಮತೆ ಹೆಚ್ಚುವುದರ ಜೊತೆಗೆ ವಿಧ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೂ ಇಂತಹ ಕಾರ್ಯಾಗಾರ ಅನುಕೂಲ ಆಗುತ್ತದೆ ಎಂದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಹರ್ಷ ಎಸ್ ತಿಳಿಸಿದ್ದಾರೆ.

ಬುಧವಾರ ನಗರದ ಸುವರ್ಣ ವಿಧಾನ ಸೌಧದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಾವುದೇ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಇಂತಹ ಪುನಶ್ಚೇತನ ಕಾರ್ಯಾಗಾರಗಳ ಅವಶ್ಯ ಇರುತ್ತದೆ, ಇದರಿಂದ ಸಿಬ್ಬಂದಿಗಳ ವೈಯಕ್ತಿಕ ಕಾರ್ಯಕ್ಷಮತೆ ಹೆಚ್ಚುವದರ ಜೊತೆಗೆ ಇಲಾಖೆಯ ಪ್ರಗತಿಯು ಆಗುತ್ತದೆ ಎಂದಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಾಗಾರಕ್ಕೆ ಸಿಬ್ಬಂದಿಗಳು ಉತ್ತಮ ಸ್ಪಂದನೆ ನೀಡಿದ್ದು, ಹುಮ್ಮಸ್ಸಿನಿಂದ ಎಲ್ಲರೂ ಭಾಗಿಯಾಗಿದ್ದಾರೆ, ನಮ್ಮ ಸಿಬ್ಬಂದಿಗಳು ಉತ್ತಮ ಕಾರ್ಯ ಮಾಡುತ್ತಾ ಇಲಾಖೆಗೆ ಒಳ್ಳೆಯ ಹೆಸರು ತಂದಿದ್ದಾರೆ, ಇದೇ ರೀತಿ ಮುಂದೆಯೂ ತಮ್ಮ ಉತ್ತಮ ಕಾರ್ಯದ ಮೂಲಕ ವಸತಿ ನಿಲಯಗಳ ವಿಧ್ಯಾರ್ಥಿಗಳಿಗೆ ಉತ್ತಮ ಊಟ ವಸತಿ ಪೂರೈಸಿ ವಿಧ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ನಡೆಸಿಕೊಂಡು ಹೋಗಬೇಕು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯಪಾಲಕರು, ನಿಲಯ ಮೇಲ್ವಿಚಾರಕರು, ಕಿರಿಯ ನಿಲಯ ಮೇಲ್ವಿಚಾರಕರು, ಅಡುಗೆಯವರು ಮತ್ತು ಅಡುಗೆ ಸಹಾಯಕರಿಗೆ ಅವರ ಸಮರ್ಪಕ ಕಾರ್ಯ ನಿರ್ವಹಣೆಗೆ ಆಯೋಜನೆ ಮಾಡಿರುವ ಈ ವಿಶೇಷ ಕಾರ್ಯಾಗಾರಕ್ಕೆ ಅವಕಾಶ ಮಾಡಿ, ಪ್ರೋತ್ಸಾಹ ನೀಡಿದ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ..

ಇನ್ನು ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಎಲ್ಲಾ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆದಿದ್ದು, ಬಿಪಿ, ಶುಗರ್, ಮತ್ತಿತರ ಪರೀಕ್ಷೆಗಳನ್ನು ಮಾಡಿಕೊಂಡು ಆರೋಗ್ಯ ಸಿಬ್ಬಂದಿಗಳ ಸಲಹೆ ಪಡೆದುಕೊಂಡಿದ್ದು, ವೇದಿಕೆ ಕಾರ್ಯಕ್ರಮದಲ್ಲಿ ವಸತಿ ನಿಲಯದ ಸಿಬ್ಬಂದಿಗಳಿಗೆ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರದ ಪಾತ್ರ, ಗುಣಮಟ್ಟದ ಆಹಾರ ಪದಾರ್ಥಗಳ ಸರಬರಾಜು ಶೇಖರಣೆ, ಆಹಾರ ತಯಾರಿಕೆ, ವಯಕ್ತಿಕ ಹಾಗೂ ನಿಲಯಗಳ ಸ್ವಚ್ಛತೆ, ಮಕ್ಕಳ ಹಕ್ಕುಗಳ, ಪೋಸ್ಕೋ ವಿಷಯಗಳ, ಸಮಯಪ್ರಜ್ಞೆ ಪಾಲನೆ, ಅಗ್ನಿ ಅವಘಡಗಳನ್ನು ತಡೆಯುವುದು ಇಂತಹ ವಿಷಯಗಳ ಕುರಿತಾಗಿ ವಿವಿಧ ಇಲಾಖೆಗಳ ನುರಿತ ತಜ್ಞರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು.

ಈ ವಿಶೇಷ ಕಾರ್ಯಾಗಾರದಲ್ಲಿ ಉಪನಿರ್ದೇಶಕರ ಜೊತೆ, ಎಲ್ಲಾ ತಾಲೂಕಿನ ತಾಲೂಕು ಅಧಿಕಾರಿಗಳು, ನಿಲಯಪಾಲಕರು, ಮೇಲ್ವಿಚಾರಕರು, ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಗಳು ಭಾಗಿಯಾಗಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ