ಹಿಂದುಳಿದ ವರ್ಗಗಳ ಸಿಬ್ಬಂದಿಗಳ ಕುಂದುಕೊರತೆ ಸಭೆ..

ಹಿಂದುಳಿದ ವರ್ಗಗಳ ಸಿಬ್ಬಂದಿಗಳ ಕುಂದುಕೊರತೆ ಸಭೆ..

ಹುಕ್ಕೇರಿ : ಸೋಮವಾರ ದಿನಾಂಕ 11/11/2024ರಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳ ಕುಂದುಕೊರತೆ ಸಭೆಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಪ್ರಿಯಾ ಕಡೇಚೂರ ನಡೆಸಿದ್ದಾರೆ.

ಸಭೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಒಳಪಡುವ ಗೋಕಾಕ್, ಚಿಕ್ಕೋಡಿ, ಅಥಣಿ ರಾಯಬಾಗ್ ಹಾಗೂ ಹುಕ್ಕೇರಿ ತಾಲೂಕಿನ ಎಲ್ಲಾ ತಾಲೂಕು ಕಲ್ಯಾಣ ಅಧಿಕಾರಿಗಳು, ವಿಸ್ತರನಾಧಿಕಾರಿಗಳು ನಿಲಯ ಪಾಲಕರು ಹಾಗೂ ನಿಲಯ ಮೇಲ್ವಿಚಾರಕರ ಕುಂದು ಕೊರತೆಗಳನ್ನು ಆಲಿಸಲಾಗಿದ್ದು, ಪರಿಹಾರೋಪಾಯದ ಬಗ್ಗೆ ಚರ್ಚಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ..

ಸಭೆಯು ಸಕಾರಾತ್ಮಕವಾಗಿ ಜರುಗಿದ್ದು, ಸಿಬ್ಬಂದಿಗಳು ಮಾಡಿದಂತಹ ವಿಶೇಷ, ಉತ್ತಮ ಕಾರ್ಯಗಳಿಗೆ ಮೆಚ್ಚಿಗೆ ಸೂಚಿಸಲಾಸಗಿದ್ದು, ಮುಂದೆಯೂ ಕೂಡಾ ವಿದ್ಯಾರ್ಥಿ ಸ್ನೇಹಿಯಾದ ಕಾರ್ಯಗಳನ್ನು ಮಾಡುವ ಮೂಲಕ ಇಲಾಖೆಗೆ ಉತ್ತಮ ಹೆಸರು ತರುವಂತ ಕಾರ್ಯ ಎಲ್ಲರಿಂದ ಆಗಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಸಗಿದೆ.