ಹಿಡಕಲ್ ಡ್ಯಾಮ್ ನಲ್ಲಿ ಹಿರಿಯ ನಾಗರೀಕರಿಗಾಗಿ ಉಚಿತ ಆಪ್ತ ಸಮಾಲೋಚನೆ..
ಹುಕ್ಕೇರಿ : ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ (NMT) ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ, ಬೆಳಗಾವಿ ಇವರ ಸಹಯೋಗದಲ್ಲಿ ಇದೇ ಅಕ್ಟೋಬರ್ 8, 2025ರಂದು ಹಿಡಕಲ್ ಡ್ಯಾಮ್ ಸಮೀಪದ ಶ್ರೀ ಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಹಿರಿಯ ನಾಗರೀಕರಿಗಾಗಿ ಉಚಿತ ಆಪ್ತ ಸಮಾಲೋಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಹಿರಿಯರಿಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ “ಎಲ್ಡರ್ ಲೈನ್” (Elder Line) – 14567 ಕುರಿತು ಜಾಗೃತಿ ಮೂಡಿಸಲಾಗುವುದು. ಈ ಸಹಾಯವಾಣಿಯ ಮೂಲಕ ಹಿರಿಯರು ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳ ಮಾಹಿತಿ, ಕೋವಿಡ್ ಸಂಬಂಧಿತ ನೆರವು, ಶೋಷಣೆ, ಮೋಸ ಹಾಗೂ ಕಿರುಕುಳ ಪ್ರಕರಣಗಳಲ್ಲಿ ಹಸ್ತಕ್ಷೇಪ, ಪರಿತ್ಯಜಿತ ಹಿರಿಯ ನಾಗರಿಕರ ರಕ್ಷಣೆ ಹಾಗೂ ಪುನರ್ವಸತಿ, ಕಾನೂನು ಸಹಾಯ, ಪಿಂಚಣಿ ಹಾಗೂ ಜೀವಂತ ಪ್ರಮಾಣಪತ್ರ ಪಡೆಯಲು ಮಾರ್ಗದರ್ಶನ, ಕುಂದುಕೊರತೆ ಪರಿಹಾರ ಹಾಗೂ ಇವುಗಳ ಜೊತೆಗೆ, ಹಿರಿಯರಿಗೆ ಆಪ್ತ ಸಮಾಲೋಚನೆ ಮತ್ತು ಭಾವನಾತ್ಮಕ ಬೆಂಬಲ ಸಹ ಒದಗಿಸಲಾಗುವುದು..
ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಾಯಿಸಲು 9164577143 ಈ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.