ಹಿರೇಬಾಗೇವಾಡಿಯಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ 2025..
ಸಹಕಾರ ಸಂಸ್ಥೆಗಳು ಗ್ರಾಮಗಳ ಅಭಿವೃದ್ದಿಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ..
ಮಾಜಿ ಶಾಸಕ ಸಂಜಯ ಪಾಟೀಲ್..
ಬೆಳಗಾವಿ : ರಾಜ್ಯದಲ್ಲಿ ಸಹಕಾರಿ ಕ್ಷೇತ್ರಕ್ಕೆ ಮತ್ತಷ್ಟು ಶಕ್ತಿ ತುಂಬುವ ಕಾರ್ಯ ಆಗಬೇಕು, ಸಹಕಾರ ಕ್ಷೇತ್ರ ಬೆಳೆದರೆ ಗ್ರಾಮ ಅಭಿವೃದ್ಧಿ ಆಗುವವು, ಆದ್ದರಿಂದ ಬಲಿಷ್ಟವಾಗಿ ಬೆಳೆದು, ರೈತರಿಗೆ ಮತ್ತಷ್ಟು ಅನುಕೂಲಕ ಆಗುವ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು ಜೊತೆಗೆ ಸಹಕಾರಿ ರಂಗವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಮಾಜಿ ಶಾಸಕ ಸಂಜಯ ಪಾಟೀಲ್ ಹೇಳಿದ್ದಾರೆ.
ರವಿವಾರ ದಿನಾಂಕ 16/11/2025 ರಂದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ಅವರ ಸಂಯುಕ್ತಾಶ್ರಯದಲ್ಲಿ ಜರುಗಿದ, 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ತುಂಬಾ ಮುಖ್ಯವಾಗಿದೆ, ಸಹಕಾರ ಸಂಸ್ಥೆಗಳು ಸಬಲವಾಗಿದ್ದರೆ ಗ್ರಾಮೀಣ ಬದುಕಿನ ಸರ್ವತೋಮುಖ ಬೆಳವಣಿಗೆ ಆಗುತ್ತದೆ ಎಂದಿದ್ದಾರೆ..

ರಾಜಕೀಯ ಮಾಡುವಾಗ ರಾಜಕೀಯ ಮಾಡೋಣ ಆದರೆ ರೈತರ ವಿಷಯ ಬಂದಾಗ ನಾವೆಲ್ಲಾ ಒಂದಾಗಿ ಸಹಕಾರ ತತ್ವದಡಿ ಕೆಲಸ ಮಾಡಬೇಕು ಆ ಮೂಲಕ ರೈತ ಸಮುದಾಯದ ಅಭಿವೃದ್ಧಿ ಆಗಬೇಕು ಎಂದರು.
ಸಹಕಾರಿ ಬ್ಯಾಂಕ್‌ಗಳಲ್ಲಿ ರೈತ ಸಮುದಾಯಕ್ಕೆ ಹೆಚ್ಚಿನ ರೀತಿಯಲ್ಲಿ ಸಾಲ ಸೌಲಭ್ಯ ಸಿಗುವಂತೆ ಆಗಬೇಕು, ಇದರಿಂದ ಗ್ರಾಮೀಣ ಜನತೆಗೆ ಅನುಕೂಲವಾಗುತ್ತದೆ, ಸಣ್ಣ ಪುಟ್ಟ ಉದ್ದಿಮೆ ಮಾಡಲು ಸಹಕಾರಿಯಾಗುತ್ತದೆ ಇದರಿಂದ ಗ್ರಾಮದ ಅಭಿವೃದ್ಧಿ ಆಗುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳಾದ ಯುವರಾಜ್ ಜಾಧವ, ಚೇತನ ಅಂಗಡಿ, ಸಂತೋಷ ಅಂಗಡಿ, ಮಹಾಂತೇಶ್ ಅಲಾಬಾದಿ, ರಾಮನಗೌಡ ಪಾಟೀಲ್, ರಾಮಣ್ಣ ಗುಳ್ಳಿ, ರಘು ಪಾಟೀಲ್, ಭರಮಪ್ಪ ಸಿಗಿಹಳ್ಳಿ, ರುದ್ರಪ್ಪ ಹುಬ್ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..