ಹುದಲಿಯಲ್ಲಿ ಗ್ರಾಮ ಪಂಚಾಯತಿಯ ನೂತನ ಪದಾಧಿಕಾರಿಗಳಿಗೆ ಸಚಿವರಿಂದ ಸನ್ಮಾನ..!!!

ಹುದಲಿಯಲ್ಲಿ ಗ್ರಾಮ ಪಂಚಾಯತಿಯ ನೂತನ ಪದಾಧಿಕಾರಿಗಳಿಗೆ ಸಚಿವರಿಂದ ಸನ್ಮಾನ..!!!

ಹೋರಾಟ ಮಾಡಿಯೇ ನಮ್ಮ ಹಕ್ಕು ಪಡೆದುಕೊಳ್ಳುವ ಪರಿಸ್ಥಿತಿ ಇಂದಿಗೂ ಇದ್ದಿದ್ದು ವಿಪರ್ಯಾಸ..!!!

ಬುದ್ಧ, ಬಸವ, ಅಂಬೇಡ್ಕರ ಅವರ ಆದರ್ಶಗಳನ್ನು ಉಳಿಸಿ ಬೆಳೆಸಿರಿ..!!!

ಬೆಳಗಾವಿ : ನಗರದ ಸಮೀಪ ಇರುವ ಹುದಲಿ ಗ್ರಾಮದಲ್ಲಿ, ಹುದಲಿ ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಾನ್ಯ ಜಿಲ್ಲಾ ಸಚಿವರಾದ ಸತೀಶ ಜಾರಕಿಹೋಳಿ ಅವರು ಅಭಿನಂದನಾ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ..

ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಯುವ ನಾಯಕರಾದ ರಾಹುಲ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದ ಹುದಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಅಭಿನಂದಿಸಿದ ನಂತರ ಮಾತನಾಡಿದ ಸಚಿವರು, ರಾಜಕೀಯದಲ್ಲಿ ವಿರೋಧಿಗಳು ಹಾಗೂ ವಿರೋಧ ಪಕ್ಷ ಇರಬೇಕು, ಆಗ ಮಾತ್ರ ನಾವು ಜಾಗರೂಕರಾಗಿ, ತಪ್ಪು ಮಾಡದೇ ಇರಬೇಕಾಗುತ್ತದೆ ಎಂದರು..

ಬುದ್ಧ, ಬಸವ, ಅಂಬೇಡ್ಕರ ಅವರ ತತ್ವ, ಆದರ್ಶ, ಸಿದ್ಧಾಂತಗಳ ಮೂಲಕ ನಾವು ಸಮಾನತೆಯ, ಸಹೋದರತೆಯ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು, ಇಲ್ಲಿ ಹೋರಾಟ ಮಾಡದೇ ಏನೂ ಸಿಗುವದಿಲ್ಲ, ನಮ್ಮ ಹಕ್ಕಿಗಾಗಿ ಹಿಂದಿನಿಂದಲೂ ನಮ್ಮವರು ಹೋರಾಟ ಮಾಡಿಕೊಂಡೇ ಬಂದಿರುವರು, ಸಂವಿಧಾನ, ಸಮಾನತೆ, ಸಹೋದರತೆಗೆ ದಕ್ಕೆ ತರುವ ಹಾಗೂ ಸರ್ವಾಧಿಕಾರಿ ಶಕ್ತಿಗಳ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕು ಎಂದರು..

ನೂತನ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿದ ಸಚಿವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯತ್ತ ಕೆಲಸ ಮಾಡಿ, ಆಗ ನೀವು ಜನರ ಮನಸಲ್ಲಿ ಉಳಿದು, ಜನಾಶಿರ್ವಾದ ನಿಮ್ಮ ಮೇಲಿರುತ್ತೆ ಎಂದರು..

ಈ ಸಂದರ್ಭದಲ್ಲಿ ಮಾನ್ಯ ಸಚಿವರೊಂದಿಗೆ ಸಚಿವರ ಸೂಪುತ್ರರಾದ ರಾಹುಲ್ ಜಾರಕಿಹೊಳಿ ಅವರು, ಜಿಲ್ಲಾ ಮತ್ತು ತಾಲೂಕು ಪಂಚಾಯತ ಸದಸ್ಯರು, ಬ್ಲಾಕ ಕಾಂಗ್ರೆಸ್ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಚಿವರ ಆಪ್ತ ಸಹಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ ಪ್ರಕಾಶ ಕುರಗುಂದ..