ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ಹತ್ಯೆ ಖಂಡಿಸಿದ ಜಗದೀಶ್ ಶೆಟ್ಟರ್…

ರಾಜ್ಯದಲ್ಲಿ ಜಿಹಾದಿ ಕೃತ್ಯಗಳು ನಡೆಯಬಾರದು..

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ಹತ್ಯೆ ಖಂಡಿಸಿದ ಜಗದೀಶ್ ಶೆಟ್ಟರ್..

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಅತೀವ ಓಲೈಕೆಯಿಂದ ರಾಜ್ಯದಲ್ಲಿ ಜಿಹಾದಿ ಕೃತ್ಯಗಳು ನಡೆಯುತ್ತಿದೆ, ಇದು ಜನರಲ್ಲಿ ಆತಂಕವನ್ನು ಉಂಟುಮಾಡಿದೆ.

ಹುಬ್ಬಳ್ಳಿಯ ಪ್ರತಿಷ್ಠಿತ ಬಿವಿಬಿ ಕಾಲೇಜಿನಲ್ಲಿ ಹುಬ್ಬಳ್ಳಿ-ಧರವಾಡ ಮಹಾನಗರ ಪಾಲಿಕೆ ಕಾರ್ಪೊರೇಟರ್ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಎಂಬುವವರನ್ನು ಕಾಲೇಜಿನ ಆವರಣದಲ್ಲಿಯೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಈ ಕೃತ್ಯ ಖಂಡನೀಯ.‌

ಈ ರೀತ ಘಟನೆಗಳು ನಡೆಯದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಕ್ರಮ ಕೈಗೊಳ್ಳಬೇಕು, ಈ ಘಟನೆ ಸಂಭಂದ ಸೂಕ್ತ ತನಿಖೆ ಆಗಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಆಗ್ರಹಿಸಿದ್ದಾರೆ.

ವರದಿ ಪ್ರಕಾಶ್ ಕುರಗುಂದ..