ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ನೀಡಬೇಕು..

ಹೊರಗುತ್ತಿಗೆ ನೌಕರರಿಗೆ ಸರ್ಕಾರ ನಿಗದಿ ಮಾಡಿರುವ ಕನಿಷ್ಠ ವೇತನ ನೀಡಬೇಕು..

ಜಲಮಂಡಳಿಯ ವಾಲ್ ಮೆನ್ ಹಾಗೂ ಕೂಲಿ ಕಾರ್ಮಿಕರ ಪಟ್ಟು..

ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿ ಅಧೀನದಲ್ಲಿ ಸುಮಾರು ಜನ ಕಾರ್ಮಿಕರು 1998 ರಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, ಸದರಿ ಕಾರ್ಮಿಕರನ್ನು 2006ರಿಂದ 2021ರ ವರೆಗೆಕರ್ನಾಟಕ ಜಲಮಂಡಳಿಯಲ್ಲಿ ಕಾರ್ಯ ನಿರ್ವಹಿಸಲು ಆದ್ದೇಶಿಸಿದ್ದರು, ತದನಂತರ ಎಲ್ ಅಂಡ್ ಟಿ ಕಂಪನಿಗೆ ಈ ಕಾರ್ಮಿಕರನ್ನು ಹಸ್ತಾಂತರ ಮಾಡಿದ್ದು 2021 ರಿಂದ 2026 ಅಂದರೆ ಇಲ್ಲಿಯವರೆಗೆ ಸುಮಾರು 365 ಹೊರಗುತ್ತಿಗೆ ಕಾರ್ಮಿಕರು ಎಲ್ ಅಂಡ್ ಟಿ ಸಂಸ್ಥೆಯ ಅಡಿಯಲ್ಲಿ ಕಾರ್ಯ ಮಾಡುತ್ತಿದ್ದು ಸರ್ಕಾರದಿಂದ ಯಾವ ಸೌಲಭ್ಯವು ಸಿಗುತ್ತಿಲ್ಲ ಎಂದು ಮನವಿ ನೀಡಿದ್ದಾರೆ.

ಬೆಂಗಳೂರಿನ ಕೆಯುಐಡಿಎಫ್ ಸಿ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡ ಕಾರ್ಮಿಕರು, ಕಾರ್ಮಿಕ ಇಲಾಖೆಯ ನಿಯಮಾವಳಿಗಳ ಅನುಗುಣವಾಗಿ ಕನಿಷ್ಠ ವೇತನ ಹಾಗೂ ಶಾಸನಬದ್ದ ಕಠಾವುಗಳ ಮೊತ್ತವನ್ನು ಕಡ್ಡಾಯವಾಗಿ ಕಾರ್ಮಿಕರಿಗೆ ಸಿಗುವಂತೆ ಮಾಡಬೇಕು, ಬೀದರ ಜಿಲ್ಲಾಧಿಕಾರಿಗಳ ಪ್ರಕಾರ ಬೆಳಗಾವಿಯ ಜಿಲ್ಲಾಧಿಕಾರಿಗಳು ಹೊರಗುತ್ತಿಗೆ ನೌಕರರ ಕನಿಷ್ಠ ಸೌಲಭ್ಯಗಳನ್ನು ಜಾರಿಯಾಗುವಂತೆ ಮಾಡಬೇಕು ಎಂದು ಸಂಬಂದಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಈ ವೇಳೆ ಜಿಲ್ಲಾ ಎಸ್ಸಿ ಎಸ್ಟಿ ದೌರ್ಜನ್ಯ ಸಮಿತಿ ಸದಸ್ಯ ಹಾಗೂ ದಲಿತ ಮುಖಂಡರಾದ ಮಲ್ಲೇಶ ಚೌಗುಲೆ, ಮಹಾನಗರ ಪಾಲಿಕೆ ಬೆಳಗಾವಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾದ ಸುಬ್ರಮಣ್ಯo ಫ ಕಾಂಬಳೆ, ದಲಿತ ಸಮುದಾಯದ ಮುಖಂಡರು ಹಾಗೂ ಹತ್ತಾರು ಹೊರಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *