ಹೊಸ ಅಧ್ಯಕ್ಷರಿಂದ ಪಾಲಿಕೆಯ ಎಸ್ಸಿ, ಎಸ್ಟಿ, ನೌಕರರ ಸಂಘಕ್ಕೆ ಆನೆಬಲ…

ಹೊಸ ಅಧ್ಯಕ್ಷರಿಂದ ಪಾಲಿಕೆಯ ಎಸ್ಸಿ, ಎಸ್ಟಿ, ನೌಕರರ ಸಂಘಕ್ಕೆ ಆನೆಬಲ..

ಪಾಲಿಕೆಯ ಉಪಾಯುಕ್ತರಿಗೆ
(ಆಡಳಿತ) ಒಲಿದು ಬಂದ ಅಧಿಕೃತ ಅಧ್ಯಕ್ಷ ಸ್ಥಾನ…

ಸಣ್ಣ ಪುಟ್ಟ ಗೊಂದಲಗಳಿಗೆ ತೆರೆ ಎಳೆದ ಸಂಘದ ಸದಸ್ಯರು..

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯು ಇಡೀ ರಾಜ್ಯದಲ್ಲಿಯೇ ತನ್ನ ವಿಶೇಷ ಕಾರ್ಯ ಚಟುವಟಿಕೆಗಳಿಂದ ಆಗಾಗ ಚರ್ಚೆಯಲ್ಲಿದ್ದು, ಮಹಾನಗರ ಆಡಳಿತದಲ್ಲಿ ತನ್ನದೇ ಛಾಪು ಮೂಡಿಸಿದೆ, ಇಂತಹ ಪಾಲಿಕೆಯಲ್ಲಿ ಎಸ್ಸಿ ಎಸ್ಟಿ ಸಮುದಾಯದ ಸದಸ್ಯರು ಬಹು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕ್ಷೇಮೋಭಿವೃದ್ದಿಗಾಗಿ ತಮ್ಮದೇ ಆದ ಸಂಘಟನೆಯನ್ನು ಮಾಡಿಕೊಂಡಿದ್ದಾರೆ..

2007ರಲ್ಲಿ ಸ್ಥಾಪನೆಯಾದ ಈ ಸಂಘಟನೆಯು ಸಮುದಾಯದ ನೌಕರರ ಸಮಸ್ಯೆಗಳನ್ನು ಹೋಗಲಾಡಿಸಿ, ಅವರ ಸಾಮಾಜಿಕ ಹಾಗೂ ವೃತ್ತಿಪರ ಕ್ಷೆಯೋಭಿವೃದ್ದಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡು, ಅದರಲ್ಲಿ ಯಶಸ್ವಿಯಾಗಿ, ಸದಸ್ಯರ ಸಂಘಟನೆ ಮಾಡುವುದರ ಮೂಲಕ ಕಚೇರಿ ಹಾಗೂ ಇಲಾಖೆಯಲ್ಲಿ ಗುಣಮಟ್ಟದ ಕಾರ್ಯಸಾಧನೆಗೆ ಕಾರಣವಾಗಿದೆ..

ಈ ರೀತಿಯ ಫಲಪ್ರದವಾದ ಕಾರ್ಯ ಮಾಡುತ್ತಿರುವ ಪಾಲಿಕೆಯ ಎಸ್ಸಿ ಎಸ್ಟಿ ಸಂಘಟನೆಯ ಹಿಂದಿನ ಅಧ್ಯಕ್ಷರಾಗಿದ್ದ ಮಂಜುಶ್ರೀ ಎಂ ಅವರ ವರ್ಗಾವಣೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಳೆದ ಎರಡು ದಿನಗಳ ಹಿಂದೆ, ಪಾಲಿಕೆಯ ಉಪಾಯುಕ್ತ (ಆಡಳಿತ)ರಾದ ಉದಯಕುಮಾರ ತಳವಾರ ಅವರನ್ನು ಎಲ್ಲರ ಸಹಮತದೊಂದಿಗೆ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

ಈ ಮೂಲಕ ಹೊಸ ಅಧ್ಯಕ್ಷರ ಆಗಮನದಿಂದ ಸಂಘದಲ್ಲಿ ನವಚೈತನ್ಯ ಮೂಡಿ, ಸದಸ್ಯರು ಅತ್ಯಂತ ಉತ್ಸಾಹದಿಂದ ಕಾರ್ಯಪ್ರವರ್ತರಾಗಿದ್ದರೆಂಬ ಮಾಹಿತಿ ಒದಗಿದ್ದು, ಹೊಸ ಅಧ್ಯಕ್ಷರಾದ ಉದಯಕುಮಾರ ತಳವಾರ ಅವರ ಕಾರ್ಯಕ್ಷಮತೆ, ಸಮರ್ಥ ನಾಯಕತ್ವ, ಪಾರದರ್ಶಕ ಆಡಳಿತ, ಸ್ನೇಹಮಯ ಗುಣದ ಕಾರಣ ಸಂಘದ ಸದಸ್ಯರ, ಪದಾಧಿಕಾರಿಗಳ ಹಾಗೂ ನೌಕರರಲ್ಲಿ ಮಂದಹಾಸ ಮೂಡಿದ್ದು, ಸಂಘಕ್ಕೆ ಆನೆಬಲ ಬಂದಂತಾಗಿದೆ..

ಈ ಮೊದಲು ಸಂಘದ ಅಧ್ಯಕ್ಷ ಸ್ಥಾನದ ಬಗ್ಗೆ ಕೆಲ ಗೊಂದಲಗಳು ಕಂಡುಬಂದಿದ್ದು, ಸದಸ್ಯರು ತಮ್ಮಲ್ಲಿ ಚರ್ಚಿಸಿದ ಬಳಿಕ, ಎಲ್ಲರ ಸಮ್ಮತಿಯೊಂದಿಗೆ, ಅಧಿಕೃತವಾಗಿ ಅಧ್ಯಕ್ಷರನ್ನು ನೇಮಕ ಮಾಡಿದ್ದು, ಬರುವ ದಿನಗಳಲ್ಲಿ ಸಂಘದ ಸದಸ್ಯರ ಜೊತೆಗೆ ಇಲಾಖೆಗೂ ಉತ್ತಮ ಹೆಸರು ಬರುವಂತಹ ಕಾರ್ಯಗಳು ಸಂಘದಿಂದ ನಡೆಯಲಿ ಎಂಬುದು ಎಲ್ಲರ ಆಶಯ..

ವರದಿ ಪ್ರಕಾಶ್ ಕುರಗುಂದ..