ಹೋರಾಟಕ್ಕೆ ಆನೆಬಲ ತಂದ ಪ,ಪಂ,ವಾಲ್ಮೀಕಿ ರಾಜ್ಯ ಯುವ ಘಟಕ..

ವಾಲ್ಮೀಕಿ ಸಮುದಾಯದ ನ್ಯಾಯಯುತ ಬೇಡಿಕೆಗಾಗಿ ಧರಣಿ..

ಹೋರಾಟಕ್ಕೆ ಆನೆಬಲ ತಂದ ಪ,ಪಂ,
ವಾಲ್ಮೀಕಿ ರಾಜ್ಯ ಯುವ ಘಟಕ..

ರಾಯಚೂರು : ನಗರದಲ್ಲಿ ನಡೆಯುತ್ತಿರುವ ವಾಲ್ಮೀಕಿ ನಾಯಕ ಸಮುದಾಯದ ನ್ಯಾಯಯುತವಾದ 15 ಬೇಡಿಕೆಗಳಿಗಾಗಿ ಕಳೆದ 37 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು ನಿನ್ನೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ (ರಿ) ಸಂಘಟನೆಯಿಂದ ಬೆಂಬಲ ವ್ಯಕ್ತಪಡಿಸಲಾಯಿತು.

ವಾಲ್ಮೀಕಿ ನಾಯಕ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಳೆಎಳೆಯಾಗಿ ತಿಳಿಸಿ ಸರ್ಕಾರದ ವಿರುದ್ಧ ತೋಡೆತಟ್ಟುವ ಹೋರಾಟ ಆಗಬೇಕು ಎಂದು, ಪ್ರಭಾವಿ ರಾಜಕಾರಣಿಗಳ ಬೆನ್ನು ಹತ್ತುವುದನ್ನು ಬಿಟ್ಟು ವಾಲ್ಮೀಕಿ ನಾಯಕ್ ಸಮುದಾಯದ ಎಳಿಗೆಗಾಗಿ, ಅಭಿವೃದ್ದಿಗಾಗಿ ನಮ್ಮವರ ರಕ್ಷಣೆಗೆ ನಿಲ್ಲೋಣ ನಮ್ಮತನವನ್ನು ನಮ್ಮವರನ್ನು ಸಮುದಾಯವನ್ನು ರಕ್ಷಿಸುವಲ್ಲಿ ಕಾರ್ಯಪ್ರವರ್ತರಾಗೋಣ ಎಂದು
ಮಹೇಶ ಶಿಗೀಹಳ್ಳಿ (ರಾಜ್ಯಾಧ್ಯಕ್ಷರು) ಅವರು ತಿಳಿಸಿದ್ದಾರೆ..

ಈ ಸಂದರ್ಭದಲ್ಲಿ ಬೆಳಗಾವಿ ನಗರ ಅಧ್ಯಕ್ಷ ಮಂಜು ತಳವಾರ, ಬೆಳಗಾವಿ ಜಿಲ್ಲೆ ಸಂಚಾಲಕ ಜಾನೇಶ, ಜಿಲ್ಲೆಯ ವಿವಿಧ ನಾಯಕರು ಮತ್ತು ಹೊರ ರಾಜ್ಯದ ವಾಲ್ಮೀಕಿ ಸಮುದಾಯದ ನಾಯಕರು, ಬಂಧುಗಳು ಹಾಗೂ ರಾಯಚೂರು ಹೋರಾಟದ ಮೂಲ ಕರ್ತೃ ವೆಂಕಟೇಶ್ ಅಸಕಿಹಳರವರು, ವಾಲ್ಮೀಕಿ ನಾಯಕ ಸಮುದಾಯದ ಸಮಸ್ತ ನಾಯಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..