ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಸಾಹಸಸಿಂಹ ವಿಷ್ಣುವರ್ಧನರಿಂದ ವಿಶೇಷ ಉಡುಗೊರೆ..
ತಮಿಳುನಾಡು ಸಿಎಂ ಎಂಜಿಆರ್ ವಿಷ್ಣುದಾದಾಗೆ ನೀಡಿದ ವಿಶೇಷ ಗಿಫ್ಟ್..
ಶಿವರಾಜಕುಮಾರ ಕೈಗೆ ಬಂದ ರೋಚಕ ಕಥೆ..
ಬೆಂಗಳೂರು : ಕನ್ನಡ ಚಿತ್ರರಂಗ ಒಂದು ಕುಟುಂಬ ಇದ್ದಂತೆ ಎಂದು ಡಾ ರಾಜ್ ಹಿಂದೆಯಿಂದಲೂ ಹೇಳುತ್ತಿದ್ದರು, ಅದೇ ರೀತಿಯ ಭಾವನೆಯಲ್ಲಿ ಚಿತ್ರರಂಗದ ಎಲ್ಲಾ ಕಲಾವಿದರೂ ತಂತ್ರಜ್ಞರು ಇದ್ದರೂ ಕೂಡಾ, ಕೆಲ ಪೂರ್ವಾಗ್ರಹ ಪೀಡಿತ ಮನಸುಗಳು ಹಾಗೂ ವೈಯಕ್ತಿಕ ದ್ವೇಷಹೊಂದಿದ ಮನುಷ್ಯರು ಮಾಡಿದ ಕಿತಾಪತಿಗಳಿಂದ ಕನ್ನಡ ಚಿತ್ರರಂಗದಲ್ಲಿ ಗುಂಪುಗಾರಿಕೆ ಹಾಗೂ ರಾಜ್ ಹಾಗೂ ವಿಷ್ಣು ಮಧ್ಯ ಎಲ್ಲವೂ ಸರಿಯಿಲ್ಲ ಎಂದು ಬಿಂಬಿಸುವ ವಾತಾವರಣ ಸೃಷ್ಟಿ ನಿರ್ಮಾಣವಾಗಿತ್ತು..

ಆದರೆ ವಾಸ್ತವವಾಗಿ ಇವೆಲ್ಲ ವದಂತಿಗಳಿಗೆ, ವದಂತಿ ಮಾಡುವ ಜನಗಳ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ್ ಮತ್ತು ವಿಷ್ಣು ಅವರ ಭಾಂದವ್ಯ ವಿಶ್ವಾಸದಿಂದ ಅನ್ಯುನ್ಯವಾಗಿಯೇ ಇತ್ತು ಎಂಬುದಕ್ಕೆ ಅನೇಕ ಕುರುಹುಗಳಿದ್ದು, ಮುಂದುವರೆದಂತೆ ವಿಷ್ಣುವರ್ಧನ್ ಹಾಗೂ ಶಿವಣ್ಣ ಅವರ ಆತ್ಮೀಯತೆಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
1982 – 83 ವರ್ಷದಲ್ಲಿ ಡಾ ವಿಷ್ಣುವರ್ಧನ ಅವರು ತಮಿಳುನಾಡಿನ ಖ್ಯಾತ ನಟ ಹಾಗೂ ಮುಖ್ಯಮಂತ್ರಿ ಎಂಜಿಆರ್ ಅವರನ್ನು ಭೇಟಿ ಮಾಡುವ ಸಂದರ್ಭ ಕೂಡಿ ಬಂದಿರುತ್ತೆ, ಆ ಭೇಟಿಯಲ್ಲಿ ಎಂಜಿಆರ್ ಅವರು ವಿಷ್ಣು ಸರ್ ಮಾಡುತ್ತಿರುವ ಚಿತ್ರಗಳ ಬಗ್ಗೆ, ಅವುಗಳ ಯಶಸ್ಸುಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ, ಅಂದು ವಿಷ್ಣು ಸರಗೆ ನೆನಪಿನ ಕಾಣಿಕೆಯಾಗಿ ಒಂದು ವಿಶೇಷ ವಾಚ್ ಅನ್ನು ಕಾಣಿಕೆಯಾಗಿ ನೀಡಿ ಗೌರವಿಸುವರು..

ತಮಿಳುನಾಡಿನ ಒಬ್ಬ ಶ್ರೇಷ್ಠ ನಟ, ರಾಜ್ಯದ ಮುಖ್ಯಮಂತ್ರಿ ಒಬ್ಬ ಕನ್ನಡದ ನಟನಿಗೆ ದುಬಾರಿ ವಾಚ್ ಕಾಣಿಕೆಯಾಗಿ ನೀಡಿದ್ದಾರೆ ಎಂದರೆ, ಆ ಕನ್ನಡದ ನಟನ (ವಿಷ್ಣು ಸಾರ್) ಸಾಧನೆ ಎಂತದ್ದು ಎಂದು ತಿಳಿಯುತ್ತದೆ, ಆ ಕಾಣಿಕೆಯನ್ನು ವಿಷ್ಣುದಾದ ಅಭಿಮಾನದಿಂದ ಸುಭದ್ರವಾಗಿ ಇಟ್ಟುಕೊಂಡಿರುತ್ತಾರೆ.
ಆದರೆ 1986 ರಲ್ಲಿ ಶಿವರಾಜಕುಮಾರ್ ನಾಯಕ ನಟನಾಗಿ ನಟಿಸಿದ ಪ್ರಥಮ ಚಿತ್ರ ಆನಂದ ಬಿಡುಗಡೆ ಆಗಿ ದೊಡ್ಡ ಓಪನಿಂಗ್ ಪಡೆದುಕೊಳ್ಳುತ್ತದೆ, ಅಷ್ಟೇ ಅಲ್ಲದೇ 35 ವಾರ ಅಂದರೆ ಸುಮಾರು 245ದಿನಗಳ ಪ್ರದರ್ಶನ ಕಾಣುತ್ತದೆ, ವರ್ಷದ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದು ದಾಖಲೆ ಮಾಡುತ್ತದೆ, ಅದೇ ರೀತಿ ಆ ಸಿನಿಮಾದಿಂದ ಅತೀ ಹೆಚ್ಚು ಫ್ಯಾನ್ ಪಾಲೋವಿಂಗ್ ಪಡೆದ ನಟ ಶಿವರಾಜಕುಮಾರ್ ಎಂದು ದಾಖಲೆ ಆಗುತ್ತದೆ..

ಆನಂದ ಸಿನಿಮಾದ ಯಶಸ್ಸು ಡಾ ರಾಜಕುಮಾರ ಮನೆತನಕ್ಕೆ ಎಷ್ಟು ಸಂತಸ ತಂದಿತ್ತೋ ಅಷ್ಟೇ ಸಂತೋಷವನ್ನು ವಿಷ್ಣುವರ್ಧನ ಸರ ಅವರ ಕುಟುಂಬಕ್ಕೂ ತಂದಿತು, ಅದೇ ಕಾರಣಕ್ಕೆ ಆನಂದ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ವಿಷ್ಣುದಾದ ತಮಗೆ ಎಂಜಿಆರ್ ಅವರಿಂದ ಕಾಣಿಕೆಯಾಗಿ ಬಂದಂತ ವಾಚ್ ಅನ್ನು ಶಿವರಾಜಕುಮಾರ ಅವರಿಗೆ ಗಿಫ್ಟ್ ಆಗಿ ನೀಡಿ, ಯಶಸ್ಸಿಗೆ ಶುಭ ಹಾರೈಸುತ್ತಾರೆ..
ತಮಗೆ ಒಬ್ಬ ದೊಡ್ಡ ನಟನಿಂದ ದೊರಕಿರುವ ಕಾಣಿಕೆಯನ್ನು ಮತ್ತೊಬ್ಬ ಉದಯೋನ್ಮುಖ ನಟನಿಗೆ ನೀಡುತ್ತಾರೆ ಎಂದರೆ, ಆ ನಟನ ಬಗ್ಗೆ ಎಷ್ಟು ಪ್ರೀತಿ ಆತ್ಮೀಯತೆ ಇದ್ದಿರಬೇಕು ಎಂದು ಅರ್ಥವಾಗುತ್ತದೆ, ಅದೇ ಕಾರಣಕ್ಕೆ ಎಂಜಿಆರ್ ಅವರಂತೆ ವಿಷ್ಣುಸರ್, ವಿಷ್ಣು ಸರ್ ಅವರಂತೆ ಶಿವಣ್ಣ, ಚಿತ್ರರಂಗದಲ್ಲಿ ಯಶಸ್ಸು ಹೊಂದುತ್ತಾ ಮಿಂಚುತ್ತಿದ್ದಾರೆ ಎನ್ನಬಹುದು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..