ಬೆಳಗಾವಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಅದ್ದೂರಿ ಚಾಲನೆ..

ಸರ್ಕಾರದ ಯೋಜನೆಯ ಲಾಭವನ್ನು ಸರಿಯಾಗಿ ಬಳಸಿಕೊಳ್ಳಿ..

ಸಚಿವ ಸತೀಶ ಜಾರಕಿಹೋಳಿ ಹೇಳಿಕೆ..

ಬೆಳಗಾವಿ : ಶನಿವಾರ ರಾಜ್ಯಾದ್ಯಂತ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ ಚಾಲನೆ ದೊರಕಿದ್ದು, ಬೆಳಗಾವಿಯಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಂದ ಅದುರಿ ಚಾಲನೆ ದೊರಕಿದೆ..

ಪ್ರಾಸ್ತಾವಿಕ ನುಡಿಗಳನ್ನು ಆಡಿದ ಹೆಸ್ಕಾಂ ಅಧಿಕಾರಿಯಾದ ಪ್ರಕಾಶ ವಿ ಅವರು, ಘನ ರಾಜ್ಯಸರ್ಕಾರದ ಮಹತ್ವದ ಯೋಜನೆಯಾದ ಗೃಹ ಜ್ಯೋತಿ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆ ಅತ್ಯಂತ ಪರಿಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು,

ಜಿಲ್ಲೆಯಲ್ಲಿ ಈವರೆಗೆ ಹತ್ತೂವರೆ ಲಕ್ಷ ಗ್ರಾಹಕರನ್ನು ಗುರ್ತಿಸಿ, ಯೋಜನೆಯ ಲಾಭ ನೀಡಲಾಗಿದೆ, ಇನ್ನೂ ಅಲ್ಪಸ್ವಲ್ಪ ಉಳಿದವರನ್ನು ಈ ಯೋಜನೆಗೆ ಸೇರಿಸುವ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ ಎಂದರು..

ಈ ಗೃಹ ಜ್ಯೋತಿ ಯೋಜನೆಯ ಮೊತ್ತವನ್ನು, ಪ್ರತಿ ತಿಂಗಳು 43 ಕೋಟಿ ರೂಪಾಯಿಗಳನ್ನು ನಮ್ಮ ಜಿಲ್ಲೆಗೆ, ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದಿಂದ ಇಲಾಖೆಗೆ ಒದಗುವಂತೆ ಮಾಡುತ್ತಿದ್ದಾರೆ, ಇದಕ್ಕೆ ಸರ್ಕಾರಕ್ಕೆ ಇಲಾಖೆಯಿಂದ ಧನ್ಯವಾದ ಎಂದರು..

ಇದಾದ ನಂತರ ಪಾಲಾನುಭವಿಗಳಿಗೆ ಗಣ್ಯರಿಂದ ಜೀರೋ ಬಿಲ್ ಪ್ರಮಾಣ ಪತ್ರ ವಿತರಿಸಲಾಯಿತು..

ನಂತರ ಉದ್ಘಾಟಕ ನುಡಿಗಳನ್ನು ಆಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಈಗಾಗಲೇ ಚುನಾವಣಾ ಪೂರ್ವದಲ್ಲಿ ನಾವು ಜನತೆಗೆ ನೀಡಿದ ಭರವಸೆಗಳನ್ನು ಕೆಲವೇ ದಿನಗಳಲ್ಲಿ ಪ್ರಾರಂಭಿಸಿ, ಮೂರೇ ತಿಂಗಳಲ್ಲಿ ಅವುಗಳನ್ನು ಸಾಧಿಸಿ ತೋರಿಸಿದ್ದೇವೆ ಅದು ನಮ್ಮ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು..

ಬಹಳ ಜನರಿಗೆ ಆತಂಕ ಇತ್ತು, ಇವರು ಈ ಆರ್ಥಿಕ ಹೊರೆ ಹೇಗೆ ನಿಭಾಯಿಸುತ್ತಾರೆ ಎಂದು, ಕೆಲವು ಜನರು ಇದನ್ನು ವಿರೋಧಿಸಿದ್ದರು, ಆದರೆ ನಮ್ಮ ಸರ್ಕಾರ ಬಡವರ ಪರವಾಗಿದ್ದು, ಮುಖ್ಯ ಮಂತ್ರಿಗಳನ್ನು ಅದನ್ನು ಸಾಧಿಸಿ ತೋರಿಸಿದ್ದಾರೆ..

ಜಿಲ್ಲೆಯಲ್ಲಿ ಸುಮಾರು 80 ರಷ್ಟು ಪ್ರಮಾಣದಲ್ಲಿ ನೋಂದಣಿ ಕಾರ್ಯ ಮಾಡಿದ್ದಾರೆ, ಒಟ್ಟು ಜಿಲ್ಲೆಯಲ್ಲಿ 10. 40 ಲಕ್ಷ ಗ್ರಾಹಕರು ಇದ್ದಿದ್ದು, ಅವರ ವಿಧ್ಯುತ್ ವೆಚ್ಚವನ್ನು ನೇರ ಸರ್ಕಾರವೇ ಭರಿಸುತ್ತದೆ ಎಂದರು..

ಇದರಿಂದ ಉಳಿತಾಯ ಆದ ಹಣ, ನಿಮ್ಮ ಮಕ್ಕಳ, ಮನೆಯ, ಪರಿಸ್ಥಿತಿ ಸುಧಾರಣೆಗಾಗಿ ಉಪಯೋಗಿಸಿ, ಉಳಿತಾಯ ಹಣವನ್ನು ದುರುಪಯೋಗ ಮಾಡಬೇಡಿ, ಸಾರಾಯಿ, ಕರ್ಪೂರ, ತೆಂಗಿನಕಾಯಿಗೆ ಖರ್ಚು ಮಾಡದೇ ನಿಮ್ಮ ಮಕ್ಕಳ ಶಿಕ್ಷಣಕ್ಕಾಗಿ ವ್ಯಯ ಮಾಡಿ, ಕದಿಯಲಿಕ್ಕೆ ಆಗದೇ ಇರುವ ಒಂದೇ ಒಂದು ಆಸ್ತಿ ಎಂದರೆ ಅದು ಶಿಕ್ಷಣ, ಆ ಶಿಕ್ಷಣ ನಿಮ್ಮ ಮಗು ಪಡೆಯಬೇಕು ಅದು ಯಾವ ರೀತಿ ಇರಬೇಕೆಂದರೆ, ಬಡವರ ಪರ, ಸಮಾಜದ ಸುಧಾರಣೆಗೆ, ಬಸವ ಬುದ್ಧರ, ವಿಚಾರಗಳ ಅನುಕರಣೆಗಾಗಿ ಉಪಯೋಗ ಆಗುವಂತೆ ಇರಬೇಕು ಎಂದರು..

ಸರ್ಕಾರ ನೀಡುವಂತ ಇಂತಹ ಯೋಜನೆ ಸಾರ್ವಜನಿಕರು ಸರಿಯಾಗಿ ಉಪಯೋಗ ಮಾಡಿಕೊಳ್ಳಿ, ಸರ್ಕಾರ ನಿಮಗಾಗಿ ನೀಡಿರುವ ಸೌಲಭ್ಯ ಮರೆಯಬೇಡಿ, ಸರ್ಕಾರಕ್ಕೆ ತಮ್ಮ ಸಹಕಾರ ಇರಲಿ, ನಮ್ಮ ಸರ್ಕಾರ ಯಾವತ್ತೂ ಜನರಿಗಾಗಿ, ಜನಪರ ಕಾರ್ಯ ಮಾಡುತ್ತದೆ ಎಂದರು..

ಇನ್ನು ಬೆಳಗಾವಿಯ ಉತ್ತರ ಮತಕ್ಷೇತ್ರದ ಶಾಸಕ ರಾಜು ಶೇಟ್ ಅವರು ಮಾತನಾಡಿ, ಇಷ್ಟು ವರ್ಷಗಳ ಬೆಲೆ ಹೆಚ್ಚಳದಿಂದ ಸಾಮಾನ್ಯ ಜನರು ಬಳಲಿ ಬೆಂಡಾಗಿದ್ದರು, ಆದರೆ ನಮ್ಮ ಸರ್ಕಾರ ಜನರ ಕಷ್ಟ ಅರಿತು ಇದೇ ಬೆಳಗಾವಿಯಲ್ಲಿ ಈ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿತ್ತು, ಅದನ್ನು ಇಂದು ಲೋಕಾರ್ಪಣೆ ಮಾಡಲಿಕ್ಕೆ ತುಂಬಾ ಸಂತಸ ಆಗುತ್ತಿದೆ ಎಂದರು..

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ, ಶಾಸಕರಾದ ರಾಜು ಶೆಟ್, ವಿಶ್ವಾಸ ವೈದ್ಯ, ಬಾಬಾಸಾಹೇಬ ಪಾಟೀಲ್, ಎಂಎಲಸಿ ಚನ್ನರಾಜ್ ಹಟ್ಟಿಹೊಳಿ, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು, ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗಳು, ಪಾಲಿಕೆಯ ಆಯುಕ್ತರು, ಪಾಲಿಕೆಯ ನಗರ ಸೇವಕರು, ಗೃಹಲಕ್ಷ್ಮಿ ಯೋಜನೆಯ ಪಾಲನುಭವಿಗಳು, ಸಾವಿರಾರು ಸಾರ್ವಜನಿಕರು ಭಾಸಿಯಾಗಿದ್ದು..

ವರದಿ ಪ್ರಕಾಶ ಕುರಗುಂದ..