184 ಸಿಬ್ಬಂದಿಗೆ ಅನುಮೋದನೆ ನೀಡುವ ಮೂಲಕ ಸೇವಾ ಭದ್ರತೆ ನೀಡುತ್ತಿದ್ದೇವೆ.
ಸರ್ಕಾರ 659 ನಿವೃತ್ತ ಸಿಬ್ಬಂದಿಗಳಿಗೆ ಇಡುಗಂಟು ನೀಡುವ ಮೂಲಕ ರಕ್ಷಣೆ ನೀಡಿದೆ..
ಈ ಆದೇಶದಿಂದ ತಮಗೆ ಸರ್ಕಾರಿ ಸೌಲಭ್ಯದೊಂದಿಗೆ ತಮಗಿರುವ ಆತಂಕ ದೂರ ಆಗುತ್ತದೆ.
ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಜವಾನ ಸ್ವಚ್ಚತಾಗಾರ ನಿರುಗಂಟೆಗಳು ಅಂತ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಹತೆ ಹೊಂದಿಲ್ಲದ ಸಿಬ್ಬಂದಿಗಳಿಗೆ ಇಂದು ಜಿಲ್ಲಾ ಪಂಚಾಯತಿ ಹಾಗೂ ಸರ್ಕಾರದ ಕಡೆಯಿಂದ ಅನುಮೋದನೆ ಪತ್ರ ವಿತರಿಸುವ ಮೂಲಕ ಆ ಎಲ್ಲಾ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಒದಗಿಸಿ, ಅವರ ಆತಂಕವನ್ನು ದೂರ ಮಾಡಿದಂತಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ.

ಬುಧವಾರ ದಿನಾಂಕ 04/06/2025 ರಂದು ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಏರ್ಪಡಿಸಿದ್ದ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ 60 ವರ್ಷಗಳ ವಯೋನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಯವರಿಗೆ ಇಡುಗಂಟು ವಿತರಿಸುವ ಹಾಗೂ ಗ್ರಾಮ ಪಂಚಾಯತಿಗಳಿಂದ ನೇಮಕಗೊಂಡ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತಿ ಕಡೆಯಿಂದ ಅನುಮೋದನೆ ಆದೇಶ ಪತ್ರ ವಿತರಣೆಯನ್ನು ಮಾಡಿ, ಮಾತಾಡಿದ ಸಚಿವರು ರಾಜ್ಯ ಸರ್ಕಾರ, ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳ ಏಳಿಗೆಗಾಗಿ ಅನೇಕ ಯೋಜನೆಗಳನ್ನು ತಂದಿದೆ ಎಂದಿದ್ದಾರೆ.
ಇಂದು ಎರಡು ಕಾರ್ಯಕ್ರಮ ಜರುಗಿದ್ದು, ಅಕ್ಷರ ದಾಸೋಹದಲ್ಲಿ ಕೆಲಸ ಮಾಡಿದ ಸುಮಾರು 659 ಜನ ಸಿಬ್ಬಂದಿಗಳು ತಮ್ಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಅವರ ರಕ್ಷಣೆಗೆ ನಮ್ಮ ಸರ್ಕಾರ 30 ಸಾವಿರ (ಹದಿನೈದು ವರ್ಷ ಒಳಗೆ ಸೇವೆ ಸಲ್ಲಿಸಿದವರಿಗೆ) 40 ಸಾವಿರ (15 ವರ್ಷಗಳಿಗಿಂತ ಅಧಿಕ ಸೇವೆ ಸಲ್ಲಿಸಿದವರಿಗೆ) ಅಂತ ಅವರಿಗೆ ಇಡುಗಂಟು ರೂಪದಲ್ಲಿ ಹಣ ನೀಡಿ, ಅವರ ಅವಶ್ಯಕತೆಗಳಿಗೆ ಬಳಸಿಕೊಳ್ಳಲು ನಮ್ಮ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ ಎಂದಿದ್ದಾರೆ.

ಇನ್ನು ಮುಖ್ಯವಾಗಿ ಹಿಂದೆ ವಿದ್ಯಾರ್ಹತೆ ಇಲ್ಲದೆ ಕೆಲ ಸಿಬ್ಬಂದಿಗಳನ್ನು ಗ್ರಾಮ ಪಂಚಾಯತಿ ಕಾರ್ಯಗಳಿಗೆ ಸರ್ಕಾರ ನೇಮಿಸಿತ್ತು, ಈಗ ಅದನ್ನು ಸರಳೀಕರಣ ಮಾಡುವ ಮೂಲಕ ತಮಗೆ ಸೇವಾ ಭದ್ರತೆ ನೀಡುವಂತಹ ಮುಖ್ಯ ನಿರ್ಣಯವನ್ನು ಜಿಲ್ಲಾ ಪಂಚಾಯತಿ ಹಾಗೂ ಸರ್ಕಾರ ತಗೆದುಕೊಂಡಿರುವದು ಆ ಮೂಲಕ 184 ಸಿಬ್ಬಂದಿಗಳಿಗೆ ಇಂದು ಅನುಮೋದನೆ ಪತ್ರ ನೀಡುತ್ತಿದ್ದೇವೆ.
ಇದರಿಂದ ಸಾಕಷ್ಟು ಸರ್ಕಾರಿ ಸೌಲಭ್ಯಗಳು, ಸೇವಾ ಭದ್ರತೆ ಹಾಗೂ ಸರ್ಕಾರದ ಅನುಕೂಲತೆಗಳು ಇದರಲ್ಲಿವೆ, ಈ ಆದೇಶದಿಂದ ತಮ್ಮ ಆತಂಕ ದೂರ ಆಗಿದೆ.
ನಮ್ಮ ಸರ್ಕಾರ ತಮ್ಮ ರಕ್ಷಣೆಗೆ ಇದೆ ಎಂಬು ನಾವು ಹೆಮ್ಮೆಯಿಂದ ಹೇಳುತ್ತೇವೆ, ಇಂತಹ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಅವರ ಸರ್ಕಾರ ತಮಗಾಗಿ ಮಾಡುತ್ತಿದೆ, ಗ್ಯಾರೆಂಟಿ ಯೋಜನೆಗಳ ಮೂಲಕ ಜನರಿಗೆ ಶಕ್ತಿ ತುಂಬುವ ಕಾರ್ಯ ಆಗಿದೆ, ಈ ಎರಡು ಕಾರ್ಯಕ್ರಮಕ್ಕೆ ತಾವು ಆಗಮಿಸಿ ಸರ್ಕಾರಿ ಸೌಲಭ್ಯ ಪಡೆಯುತ್ತಿದ್ದೀರಿ, ಮತ್ತಷ್ಟು ಸಿಬ್ಬಂದಿಗಳಿಗೆ ಇಂತಹ ಅವಕಾಶ ಲಭಿಸಲಿ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರದ ಶಾಸಕ ಆಸಿಫ್ (ರಾಜು) ಸೇಠ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಉಪ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ, ಯೋಜನಾಧಿಕಾರಿ ಬಂಗಾರಪ್ಪ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಅಧಿಕಾರಿಗಳು, ಸಿಬ್ಬಂದಿಗಳು, ಅಕ್ಷರ ದಾಸೋಹದ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಎರಡೂ ಇಲಾಖೆಗಳ ಪಲಾನುಭವಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ.