2023 24ರ ಪ್ರಥಮ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ..
ಬೆಳಗಾವಿ: ಸೋಮವಾರ ನಗರದ ಸುವರ್ಣ ವಿಧಾನ ಸೌಧದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾಡಳಿತದ ಅಡಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರ ಅಧ್ಯಕ್ಷತೆಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿದೆ..
ಮೊದಲಿಗೆ ಸಚಿವರಿಗೆ ಸತ್ಕಾರದ ಸ್ವಾಗತವಾಗಿ ಜಿಲ್ಲಾ ಪಂಚಾಯತಿ ಮತ್ತು ಆಹಾರ ನಾಗರಿಕ ಪೂರೈಕೆ ಇಲಾಖೆಗಳ ವಿವಿಧ ಯಶಸ್ವಿ ಯೋಜನೆಗಳ ಬಗ್ಗೆ ಅಭಿನಂದಿಸಿ, ಸಭೆಯನ್ನು ಪ್ರಾರಂಭಿಸಲಾಯಿತು..
ಮೊದಲಿಗೆ ಶಾಸಕ ದುರ್ಯೋಧನ ಐಹೊಳೆ ಅವರು ಕೇಳಿದ ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯನ್ನು ಉಸ್ತುವಾರಿ ಸಚಿವರು ಪ್ರಸ್ತಾಪಿಸಿದಾಗ, ಇಲಾಖಾ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿದರು..
ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿಗಳ ಸುರಕ್ಷತೆಯ ಕ್ರಮದ ಬಗ್ಗೆ ಮಾಹಿತಿ ಕೇಳಿದ ಉಸ್ತುವಾರಿ ಸಚಿವರು, ಅವರ ಭದ್ರತೆಗಾಗಿ ಇನ್ನೂ ಹಲವಾರು ಯೋಜನೆ ಹಾಕಿಕೊಳ್ಳಲು ಸಲಹೆ ನೀಡಿದರು, ಲಘು ಅಪಘಾತ, ಪ್ರಾಣ ಹಾನಿ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಆದಷ್ಟೂ ಬೇಗ ಪರಿಹಾರ ವಿತರಣೆ ಮಾಡಬೇಕೆಂದು ಸಲಹೆ ನೀಡಿದರು..
ಕೆಡಿಪಿಯ ಪ್ರಗತಿಯ ಮಾಹಿತಿ ಪುಸ್ತಿಕೆ ಎರಡು ವಿಧದಲ್ಲಿ ಮುದ್ರಣ ಮಾಡಿದ ಜಿಲ್ಲಾ ಪಂಚಾಯತಿಯನ್ನು ತರಾಟೆಗೆ ತೆಗೆದುಕೊಂಡ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ಅವರ ಕೋಪಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದರು, ನಂತರ ಮಧ್ಯಪ್ರವೇಶಿಸಿದ ಸತೀಶ ಜಾರಕಿಹೋಳಿ ಅವರು ಪರಿಸ್ಥಿತಿ ತಿಳಿಗೊಳಿಸಿದರು..
ಅಂಬೇಡ್ಕರ ಭವನಗಳ ಅವ್ಯವಸ್ಥೆಗಳ ಬಗ್ಗೆ ಕಿಡಿ ಕಾರಿದ ಪ್ರಕಾಶ ಹುಕ್ಕೇರಿಯವರು ಶೀಘ್ರ ಸುಧಾರಣೆ ಆಗೋವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು..
ಕಿತ್ತೂರು ಶಾಸಕರು ಕೇಳಿದ ವಿಕಲಚೇತನರ ಇಲಾಖೆಯ ಪುನರ್ವಸತಿ ಕೇಂದ್ರಗಳ ಪ್ರಶ್ನೆಗೆ, ಹೆಚ್ಚಿನ ಕೇಂದ್ರಗಳು ಆಗಬೇಕೆಂದು ಮನವಿ ಸಲ್ಲಿಸಿದ್ದರು, ಕಿತ್ತೂರು ಕ್ಷೇತ್ರದಲ್ಲಿ ಕೇವಲ 4 ಪುನರ್ವಸತಿ ಕೇಂದ್ರಗಳು ಇರುವುದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ, ಸಚಿವ ಸತೀಶ ಜಾರಕಿಹೊಳಿ ಅವರು, ಇಷ್ಟು ಕಡಿಮೆ ಏಕೆ? ನಮ್ಮ ಕ್ಷೇತ್ರದಲ್ಲಿ 35 ರಿಂದ 40 ಪುನರ್ವಸತಿ ಕೇಂದ್ರಗಳಿವೆ ಅಲ್ಲಿ ಏಕೆ ಕಡಿಮೆ ಎಂದು ರೇಗಿದರು..
ಆಗ ಅಧಿಕಾರಿಗಳು ಅದು ತಮ್ಮ ಅನುದಾನದಲ್ಲಿ ತಮ್ಮ ಆಸಕ್ತಿಯಿಂದ ನಡೆದ ಕಾರ್ಯ ಎಂದರು..
ತೋಟಗಾರಿಕೆ ಇಲಾಖೆಯ ಪಾಲಿಹೌಸ್ scst ಸೌಲಭ್ಯ ವಿತರಣೆಯಲ್ಲಿ 38 ಘಟಕಗಳ ಅವ್ಯವಹಾರ ಆಗಿದ್ದರ ಬಗ್ಗೆ ಪ್ರಶ್ನೆ ಕೇಳಿದ ಶಾಸಕ ಹಾಗೂ ಸಚಿವರು, ಅಧಿಕಾರಿಗಳ ಉತ್ತರ ತೃಪ್ತಿ ಆಗದ ಕಾರಣ, ಅದರ ಬಗ್ಗೆ ತೀವ್ರ ತನಿಖೆ ಆಗಬೇಕೆಂದು ಆದೇಶ ನೀಡಿದರು..
ಇನ್ನೂ ಇದೆ ವೇಳೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಆದಂತಹ ಮಳೆಯ ನೀರಿನ ಜಲಾಶಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು ಜಿಲ್ಲೆಗೆ ಇನ್ನು ಕೂಡಾ ಆಗಬೇಕಾದಷ್ಟು ಮಳೆ ಆಗಿಲ್ಲ, ಈಗಿನ ಅಂದಾಜಿನ ಪ್ರಕಾರ ಇನ್ನು -7% ಕಡಿಮೆ ಮಳೆ ಇದೆ, ಆದರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು ಸಮಸ್ಯ ಆಗಲಾರದು ಎಂಬ ಮಾಹಿತಿ ನೀಡಿದರು..
ಇನ್ನೂ ಮಳೆಯಿಂದ ಜಿಲ್ಲೆಯಲ್ಲಿ ಆದಂತ ಅನಾಹುತ ಹಾಗೂ ನಷ್ಟದ ಬಗ್ಗೆ ಮಾಹಿತಿ ನೀಡಿದ ಅವರು, ಪರಿಹಾರೋಪಾಯಗಳನ್ನು ನೀಡುತ್ತಿದ್ದೇವೆ, ಸಂಭದಪಟ್ಟ ಇಲಾಖೆಯವರ ಸಹಕಾರದಿಂದ ಸಮಸ್ಯೆಗಳನ್ನು ಪರಿಹಾರ ಮಾಡುತ್ತಿದ್ದೇವೆ ಎಂದರು.
ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಬಗ್ಗೆ ಹಲವು ಕ್ಷೇತ್ರಗಳ ಶಾಸಕರ ದೂರು ಇದ್ದು, ತಮ್ಮ ಅಸಮಾಧಾನ ಹೊರಹಾಕಿದರು, ಇದಕ್ಕೆ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿಗಳು ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಮರು ಸರ್ವೇ ಮಾಡಿ, ಮತ್ತೆ ಪ್ರಾಮಾಣಿಕ ಪಲಾನುಭವಿಗಳು ಉಳಿದಿದ್ದರೆ ಆಯ್ಕೆ ಮಾಡುತ್ತೇವೆ ಎಂದರು.
ಇನ್ನೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಮಾತನಾಡಿ ರೈತರಿಗಾಗಿ ಇಲಾಖೆಯಿಂದ ಇರುವ ಯೋಜನೆಗಳ ಹಾಗೂ ಅವುಗಳ ಹಂಚಿಕೆಯ ಬಗ್ಗೆ ಮಾಹಿತಿ ನೀಡಿದರು..
ಬೀಜ ಮತ್ತು ಗೊಬ್ಬರದ ವಿತರಣೆಯ ಹಾಗೂ ರೈತರ ಬೆಳೆ ವಿಮೆಯ ಬಗ್ಗೆ ಪ್ರಶ್ನೆ ಮಾಡಿದ ಶಾಸಕರು, ಇಲಾಖೆಯ ಸಿಬ್ಬಂದಿಗಳ ಕೊರತೆಯಿಂದ ರೈತರ ಸಮಸ್ಯ ಪರಿಹಾರ ಆಗುತ್ತಿಲ್ಲ ಎಂದು ಕಿಡಿ ಕಾರಿದರು, ಮುಂದಿನ ದಿನಗಳಲ್ಲಿ ಸಮಸ್ಯ ಬಗೆಹರಿಸುವ ಭರವಸೆ ಅಧಿಕಾರಿಗಳು ನೀಡಿದರು..
ಇನ್ನೂ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮಾತನಾಡಿ, ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದಾಗ, ಶಾಸಕ ರಾಜು ಕಾಗೆ ಅವರು ಪ್ರಶ್ನೆ ಮಾಡಿ, ತಮ್ಮ ಕಾಗವಾಡ ಕ್ಷೇತ್ರದಲ್ಲಿ ಮೇವಿನ ಸಮಸ್ಯ ಇಲ್ಲಾ ಎಂಬ ತಪ್ಪು ಮಾಹಿತಿ ನೀಡಿರುವ ನಿಮ್ಮ ನಡೆ ಎಷ್ಟು ಸರಿ ಎಂದರು, ಸರಿಯಾದ ಪರಿಸ್ಥಿತಿ ಅರ್ಥ ಮಾಡಿಕೊಂಡು ಹೇಳಬೇಕಲ್ಲ, ನಮ್ಮ ರೈತರು ಮಹಾರಾಷ್ಟ್ರಕ್ಕೆ ಹೋಗಿ ಮೇವು ತರುತ್ತಾರೆ, ನಮಗೆ ಮೇವಿನ ಸಮಸ್ಯ ತುಂಬಾ ಇದೆ ಎಂದರು, ಅದಕ್ಕೆ ಜಿಲ್ಲಾಧಿಕಾರಿಗಳು ನಾವೇ ಬಂದು ಪರಿಶೀಲನೆ ಮಾಡಿ ನೋಡುತ್ತೇವೆ ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿ ತಮ್ಮ ಇಲಾಖೆಯ ಸಮಸ್ಯ ಬಗ್ಗೆ ಮಾತನಾಡಿ, ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ಮಾತನಾಡಿದರು..
ಔಷಧಿಗಳ ಶೇಖರಣೆ ಇದ್ದರೂ ಜನರಿಗೆ ಯಾಕೆ ಔಷಧಿ ಸಿಗುತ್ತಿಲ್ಲ, ಔಷಧಿ ಇದ್ದರೂ ಯಾಕೆ ಸರಿಯಾದ ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ ಎಂದು ಬೈಲಹೊಂಗಲ ಶಾಸಕರು ಪ್ರಶ್ನೆ ಮಾಡಿ ತಮ್ಮ ಅಸಮಾಧಾನ ಹೊರ ಹಾಕಿದರು..
ಬೆಳಗಾವಿ ಉತ್ತರದ ಶಾಸಕರು ಜಿಲ್ಲೆಯ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ತುಂಬಾ ಇದೆ, ಅದಕ್ಕಾಗಿ ಹಲವಾರು ಸಮಸ್ಯ ಎದ್ದು ಕಾಣುತ್ತಿವೆ, ಇದರ ಪರಿಹಾರ ಯಾವಾಗ ಎಂದು, ಜನರಿಗೆ ಆರೋಗ್ಯ ಸೇವೆ ಎಂದು ಸಿಗುವದು ಎಂಬ ಪ್ರಶ್ನೆ ಮಾಡಿದರು,,
ಇನ್ನೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಮಾತನಾಡಿ ಇಲಾಖೆಯ ಪಕ್ಷಿನೋಟ ನೀಡಿದರು, ಇದಕ್ಕೆ ಸಂಬಂಧಿಸಿದಂತೆ, ಸಚಿವೆ ಹೆಬ್ಬಾಳ್ಕರ್ ಅವರು ಮಾತನಾಡಿ ಬಾಡಿಗೆ ಅಂಗನವಾಡಿ ಕಟ್ಟಡಗಳು ಇದ್ದರೆ ಅಂಥವುಗಳನ್ನು ನೇರವಾಗಿ ಸರ್ಕಾರಿ ಶಾಲೆ, ಪಂಚಾಯತಿ ಕಟ್ಟಡ, ಸಮುದಾಯ ಭವನ, ಶಾಲಾ ಆವರಣ, ದಾನಿಗಳಿಂದ, ಸ್ವಯಂ ಸೇವಕರಿಂದ ಕೇಂದ್ರಗಳನ್ನು ಪಡೆದು ನಡೆಸಲಾಗುತ್ತಿದೆ ಎಂದರು..
ಇನ್ನೂ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಮಹತ್ವದ ಯೋಜನೆಯಾದ ಗ್ರಹಲಕ್ಷ್ಮಿ ಯೋಜನೆ ಬಗ್ಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್ ಅವರು, ಅದರಲ್ಲಿ ಸರಿಯಾಗಿ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು, ಪ್ರಜಾಪ್ರತಿನಿಧಿಗಳಾದ ಶಾಸಕರಿಗೂ ಈ ಯೋಜನೆಯನ್ನು ಯಶಸ್ವಿಗೊಳಿಸಲು ವೇಗವಾಗಿ ಕೆಲಸ ಮಾಡಿ ಎಂದು ಹೇಳಿದಾಗ, ಬೈಲಹೊಂಗಲ್ ಶಾಸಕರು ನಾವು ಅಧಿವೇಶನದಲ್ಲಿ ಇದ್ದು, ಅಲ್ಲಿಂದಲೇ ಜನರಿಗೆ ಮಾಹಿತಿ ನೀಡಿದ್ದೇವೆ, ಈಗ ಬಂದಿದ್ದೇವೆ, ಇನ್ನೂ ಸಮಯವಿದೆ ಮಾಡುತ್ತೇವೆ ಸ್ವಲ್ಪ ತಾಳ್ಮೆ ಇರಲಿ ಎಂದು ಹೇಳಿದಾಗ, ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವೆ ಹೆಬ್ಬಾಳ್ಕರ್ ಅವರು ಗ್ರಹಜ್ಯೋತಿ ಇಷ್ಟೊಂದು ವೇಗವಾಗಿ ದಾಖಲೆ ಪ್ರಮಾಣದಲ್ಲಿ ಅರ್ಜಿ ಬಂದಿದ್ದು, ನಮ್ಮ ಗೃಹಲಕ್ಷ್ಮಿ ಯೋಜನೆ ಹಿಂದುಳಿಯಬಾರದು ಎಂಬ ತಮ್ಮ ಕಳವಳ ಹೇಳಿಕೊಂಡು, ಇಂತಾ ಮಹತ್ವದ ಯೋಜನೆಯನ್ನು ಎಲ್ಲರೂ ಸೇರಿ ಆದಷ್ಟೂ ಯಶಸ್ವಿ ಗೊಳಿಸಿ ಎಂದರು..
ಇನ್ನೂ ಖಾನಾಪುರ ಶಾಸಕರು ಅಂಗನವಾಡಿ ಸಿಬ್ಬಂದಿಗಳ ವಿದ್ಯಾರ್ಹತೆಯ ಬಗ್ಗೆ ಹಾಗೂ ಭಾಷಾ ವಿಷಯದ ಸಮಸ್ಯ ಬಗ್ಗೆ ಮಾಡಿದ ಪ್ರಶ್ನೆಗೆ ಅಧಿಕಾರಿ ಹಾಗೂ ಸಚಿವರು ಸ್ಪಷ್ಟ ಉತ್ತರ ನೀಡಿದರು..
ಅಂಗನವಾಡಿ ಆಹಾರದ ವಿಷಯದಲ್ಲಿ ಯಾವುದೇ ಕೊರತೆ ಇಲ್ಲದಿದ್ದರೂ, ಹಾಲು ಪೂರೈಕೆ ಮಾತ್ರ ಸರಿಯಾಗಿ ಆಗುತ್ತಿಲ್ಲ ಎಂದರು..
ಇನ್ನೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ಇಲಾಖೆಯ ಅಭಿವೃದ್ದಿ ಕಾರ್ಯಗಳ ಮಾಹಿತಿ ನೀಡಿದ್ದು, ಶಾಸಕರ ಹಾಗೂ ಪರಿಷತ್ ಸದಸ್ಯರ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಅಧಿಕಾರಿಗಳು ಪರದಾಡಿದರು..
ವರದಿ ಪ್ರಕಾಶ ಕುರಗುಂದ..
