ಒಂಬತ್ತು ತಿಂಗಳು ಕಳೆದರೂ ಮುಗಿಯದ ಶೌಚಾಲಯ ಕಾಮಗಾರಿ..
ಅಗಸಗೆ ಪ್ರಾಥಮಿಕ ಶಾಲೆ ಮಕ್ಕಳ-ಶಿಕ್ಷಕರ ಗೋಳು ಕೇಳುವರಿಲ್ಲ..
ಶೌಚಾಲಯ ಆರಂಭಿಸದಿದ್ದರೆ ಬೀಗ ಒಡೆಯುವ ಎಚ್ಚರಿಕೆ..
ಬೆಳಗಾವಿ : ತಾಲೂಕಿನ ಅಗಸಗೆ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶೌಚಾಲಯ ನಿರ್ಮಾಣ ಮಾಡಲು ಹಳೆಯ ಶೌಚಾಲಯ ಕೆಡವಿ ಸುಮಾರು ಒಂಬತ್ತು ತಿಂಗಳು ಕಳೆದರೂ ಇಂದಿಗೂ ಶೌಚಾಲಯ ಕಾಮಗಾರಿ ಪೂರ್ಣ ಮುಕ್ತಾಯಗೊಂಡಿಲ್ಲ.
ಕಳೆದ 2023ರ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಅಗಸಗೆ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ಉದ್ಯೊಗ ಖಾತ್ರಿ ಯೋಜನೆಯಡಿ ನಿರ್ಮಾಣ ಮಾಡಲು ಕೆಡವಲಾಗಿತ್ತು, ಅಂದಾಜು ಸುಮಾರು ಎಂಟು(8) ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ, ಆನೆಯಷ್ಟು ಅನುದಾನವಿದ್ದರೂ ಶೌಚಾಲಯ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿತ್ತು.
ಈ ಕಾಮಗಾರಿಗೆ ಮೊದಲಿನಿಂದಲೂ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು, ಆದರೂ ಹೇಗೋ ಕಾಮಗಾರಿ ಮುಗಿದಿದೆ, ಕಾಮಗಾರಿ ಮುಗಿದು ತಿಂಗಳುಗಳು ಉರುಳಿದರು ಗುತ್ತಿಗೆದಾರರು ಇದನ್ನು ಶಾಲೆಗೆ ಹಸ್ತಾಂತರ ಮಾಡಿಲ್ಲ, ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ.
ಆಶ್ಚರ್ಯಕರ ಸಂಗತಿಯೆಂದರೆ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಕಲ್ಲು ನಿಲ್ಲಿಸಲಾಗಿದೆ, ಅದರಲ್ಲಿ ಕಾಮಗಾರಿ ಆರಂಭದ ದಿನಾಂಕ ಮಾತ್ರ ನಮೂದಿಸಿ, ಮುಕ್ತಾಯದ ದಿನಾಂಕಕ್ಕೆ ಯಾವೂದೇ ಕಾಲದ ಮಿತಿ ಇಲ್ಲ. ಹೀಗಾದಲ್ಲಿ ಶೌಚಾಲಯ ಕಾಮಗಾರಿಗೆ ಎಷ್ಟು ವರ್ಷ ಬೇಕು? ಎಂಬ ಪ್ರಶ್ನೆ ಪ್ರಜ್ನಾವಂತರನ್ನು ಕಾಡುತ್ತಿವೆ.

ಶಾಲಾ ಮಕ್ಕಳ-ಶಿಕ್ಷಕರ ಗೋಳು ಕೇಳುವವರಿಲ್ಲ..
ಅಗಸಗೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಸುಮಾರು ಎರಡು ನೂರಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು, ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಎರಡೂ ಶಾಲೆಗಳಿಗೆ ಪ್ರತ್ಯೇಕ ಶೌಚಾಲಯವಿದ್ದವು ಆದರೆ ಕನ್ನಡ ಶಾಲೆಯ ಕಾಮಗಾರಿ ಪ್ರಗತಿಯಲ್ಲಿದ್ದ ಕಾರಣ ಎರಡೂ ಶಾಲೆಯ ಸುಮಾರು ನಾಲ್ಕು ನೂರು ವಿದ್ಯಾರ್ಥಿ ಹಾಗೂ ಶಾಲಾ ಸಿಬ್ಬಂದಿ ಒಂದೇ ಶೌಚಾಲಯ ಉಪಯೊಗಿಸುವಂತಾಗಿದೆ.
ಇದರಿಂದ ಶೌಚಕ್ಕೆ ಎರಡೂ ಶಾಲೆ ಮಕ್ಕಳು ಒಮ್ಮೆಲೆ ಹೊರಗೆ ಬರುವುದರಿಂದ ವಿದ್ಯಾರ್ಥಿಗಳ ಓದಿಗೂ ತೊಂದರೆಯಗುತ್ತಿದೆ. ಅಷ್ಟೂ ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ ಸಕಾಗುತ್ತಿಲ್ಲ,ಇದು ಶಾಲಾ ಮಕ್ಕಳ ಹಾಗೂ ಶಿಕ್ಷಕರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ.
ನಾಳೆವರೆಗೆ ಶೌಚಾಲಯ ತೆರೆಯದಿದ್ದರೆ ಬೀಗ ಒಡೆಯುತ್ತೇವೆ..
ಅಗಸಗೆ ಹಿರಿಯ ಕನ್ನಡ ಹಾಗೂ ಮರಾಠಿ ಪ್ರಾಥಮಿಕ ಶಾಲೆಯಲ್ಲಿ ಇಷ್ಟೊಂದು ಮಕ್ಕಳು ಇದ್ದರೂ ಶೌಚಾಲಯ ಕಾಮಗಾರಿ ಮುಗಿಸುವಲ್ಲಿ ಗುತ್ತಿಗೆದಾರ ವಿಳಂಭ ಮಾಡಿದ್ದಾರೆ. ಈಗ ಕಾಮಗಾರಿ ಮುಗಿದರೂ ಅದನ್ನು ಬಳಕೆ ಮಾಡಲು ಬಿಡುತ್ತಿಲ್ಲ. ಬುಧವಾರ ಅಗಸಗೆ ಗ್ರಾಮ ಪಂಚಾಯತಿ ಪಿಡಿಓ ಎನ್.ಎ ಮುಜಾವರ ಅವರನ್ನು ಭೇಟಿ ಮಾಡಿದ ಸೇಫ್ ವಾರ್ಡ್ ಸಂಸ್ಥೆ ಅಧ್ಯಕ್ಷ ಸಂತೋಷ ಮೇತ್ರಿ ಪಿಡಿಒ ಜೊತೆ ಮಾತುಕತೆ ನಡೆಸಿದರು.
ಒಂದು ವೇಳೆ ಇವತ್ತೇ ಶೌಚಾಲಯ ಬಳಕೆಗೆ ಅನುಮತಿ ಕೊಡದಿದ್ದರೆ ನಾಳೆ ನಾನೇ ಕೀಲಿ ಮುರಿದು ಶಾಲಾ ಮಕ್ಕಳಿಗೆ ಶೌಚಾಲಯ ಬಳಕೆಗೆ ಅನುವು ಮಾಡಿಕೊಡುತ್ತೇನೆ. ನನ್ನ ಮೇಲೆ ಯಾವುದೇ ರೀತಿಯ ದೂರು ದಾಖಲಿಸಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಎನ್.ಎ ಮುಜಾವರ ಅವರು ಆದಷ್ಟು ಬೇಗ ಶೌಚಾಲಯ ಬಳಕೆಗೆ ಕೀಲಿ ತೆಗೆಸಿಕೊಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಮೃತ ಮುದ್ದೇನ್ನವರ, ಸದಸ್ಯ ಅಪ್ಪಯ್ಯಗೌಡ ಪಾಟೀಲ, ಗುಂಡು ಕುರೆನ್ನವರ, ಗ್ರಾಮಸ್ಥರಾದ ಲಗಮಾ ಸನದಿ, ಭರಮಾ ಸನದಿ ಇತರರು ಇದ್ದರು.
ಸಂತೋಷ ಮೇತ್ರಿ, ಜೊತೆ ಪ್ರಕಾಶ ಬಸಪ್ಪ ಕುರಗುಂದ..