65 ಪ್ರಕರಣಗಳಲ್ಲಿ ಜಪ್ತಾದ ಬ್ರಹತ್ ಪ್ರಮಾಣದ ಮಾದಕ ವಸ್ತುಗಳ ನಾಶ..
ವಿವಿಧ ಜಿಲ್ಲಾ ಅಬಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ನಿಯಮಾನುಸಾರ ನಾಶ..
ಬೆಳಗಾವಿ : ಬೆಳಗಾವಿ ಧಾರವಾಡ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಒಟ್ಟು 65 ಪ್ರಕರಣಗಳಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಜಪ್ತಿ ಮಾಡಲಾದ ಹಾಗೂ ಪೊಲೀಸ್ ಇಲಾಖೆಯಿಂದ ಹಸ್ತಾಂತರ ಆದ ಬ್ರಹತ ಮಾದಕ ವಸ್ತುಗಳನ್ನು ಬೆಳಗಾವಿ ಅಬಕಾರಿ ಇಲಾಖೆಯಿಂದ ನಿಯಮಾನುಸಾರವಾಗಿ ನಾಶ ಪಡಿಸಲಾಗಿದೆ..

ಮಂಗಳವಾರ ದಿನಾಂಕ 14/10/2025 ರಂದು ಬೆಳಗಾವಿ ತಾಲೂಕಿನ ಎಸ್ ವಿಪಿ ಕೆಮಿಕಲ್ ಪ್ರೈವೆಟ್ ಲಿ, ಜಾಂಬೊಟಿ ರಸ್ತೆ ನಾವಗೆ ಗ್ರಾಮದಲ್ಲಿ ಪರಿಸರಕ್ಕೆ ಹಾನಿ ಆಗದಂತೆ ಬೆಳಿಗ್ಗೆ 11 ರಿಂದ ಮದ್ಯಾಹ್ನ 2ರ ವರೆಗೆ ನಿಯಮಾನುಸಾರ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ ಎಂಬ ಮಾಹಿತಿಯು ಬೆಳಗಾವಿ ಅಬಕಾರಿ ಇಲಾಖೆಯಿಂದ ಲಭ್ಯವಾಗಿದೆ.

ಬೆಳಗಾವಿ ಧಾರವಾಡ ಬಿಜಾಪುರ್ ಬಾಗಲಕೋಟೆ ಈ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 65 ಪ್ರಕರಣಗಳಲ್ಲಿ 1213.146 ಕೆಜಿ ಗಾಂಜಾ, 101 ಗಾಂಜಾ ಗಿಡಗಳು, 37,100 ಪೊಪ್ಪಿ ಬೀಜಗಳು, 50, 414 ಕೆಜಿ ಆಫೀಮು, 9.602 ತಂಬಾಕು, 11.56ಕೆಜಿ ಹೆರೋಯಿನ್, 3.439 ಕೆಜಿ ಹಶೀಶ ಮಧ್ಯಾಮಾಲನ್ನು ನಾಶಮಾಡಿರುವ ಮಾಹಿತಿ ಇದೆ..

ಮಾದಕ ವಸ್ತುಗಳ ನಾಶ ಮಾಡಿದ ಈ ಕಾರ್ಯವು ಬೆಳಗಾವಿ ವಿಭಾಗದ (ಜಾರಿ ಮತ್ತು ತನಿಖೆ) ಅಬಕಾರಿ ಜಂಟಿ ಆಯುಕ್ತರಾದ ಎಫ್ ಎಚ್ ಛಲವಾದಿ, ಅವರ ಅಧ್ಯಕ್ಷತೆಯಲ್ಲಿ ಜರುಗಿದ್ದು, ಡ್ರಗ್ ಡೀಸಪೋಸಲ್ ಕಮಿಟಿ ಸದಸ್ಯರು ಹಾಗೂ ಬೆಳಗಾವಿ ದಕ್ಷಿಣದ ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಎಂ, ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿಯ ಅಬಕಾರಿ ಉಪ ಆಯುಕ್ತರಾದ ಸಪ್ನಾ ಆರ್ ಎಸ್, ಧಾರವಾಡ ಅಬಕಾರಿ ಉಪ ಆಯುಕ್ತರಾದ ರಮೇಶಕುಮಾರ ಎಚ್ ಬಾಗಲಕೋಟೆಯ ಉಪ ಆಯುಕ್ತರಾದ ಹನುಮಂತಪ್ಪ ಭಜಂತ್ರಿ, ವಿಜಯಪುರದ ಅಬಕಾರಿ ಉಪ ಆಯುಕ್ತರಾದ ಮುರಳಿಧರ ಎಚ್ ಓ ಒಳಗೊಂಡಂತೆ ಎಲ್ಲಾ ಜಿಲ್ಲೆಯ ಅಬಕಾರಿ ಉಪ ಆಯುಕ್ತರು, ಅಬಕಾರಿ ಅಧಿಕ್ಷಕರು, ವಿಭಾಗ ವ್ಯಾಪ್ತಿಯ ಅಬಕಾರಿ ಉಪ ಅಧಿಕ್ಷಕರು, ವಲಯಗಳ ಅಬಕಾರಿ ನೀರಿಕ್ಷಕರು ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲೇ ಬ್ರಹತ್ ಪ್ರಮಾಣದ ಮಾದಕ ವಸ್ತುಗಳನ್ನು ನಾಶ ಮಾಡಲಾಗಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..