ಜಿಲ್ಲೆಯ ಇಬ್ಬರೂ ಸಚಿವರು ತಮ್ಮ ತಮ್ಮ
ರೈತರನ್ನು ರಸ್ತೆಗೆ ತಂದು ನಿಲ್ಲಿಸುವ ಕಾರ್ಯ ರಾಜ್ಯಸರ್ಕಾರ ಮಾಡುತ್ತಿದೆ..
ಜಿಲ್ಲೆಯ ಇಬ್ಬರೂ ಸಚಿವರು ತಮ್ಮ ತಮ್ಮ ಚುನಾವಣೆಯಲ್ಲಿ ನಿರತರಾಗಿದ್ದಾರೆ..
ಬೆಳೆ ಪರಿಹಾರ ಹಾಗೂ ಖರೀದಿ ಕೇಂದ್ರಗಳ ಸ್ಥಾಪನೆ ಆಗಬೇಕು..
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ..
ಬೆಳಗಾವಿ : ಕಳೆದ ಆಗಸ್ಟ್ ತಿಂಗಳಿನಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗಿದ್ದು ಜೊತೆಗೆ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗಿ ನಮ್ಮ ನದಿ ಪ್ರವಾಹಗಳನ್ನು ಉಂಟುಮಾಡಿದ್ದು, ಸುಮಾರು 106 ಮಿಲಿಮಿಟರ್ ಅಧಿಕ ಪ್ರಮಾಣದ ಮಳೆಯಾಗಿದೆ, ಸುಮಾರು 60 ಸಾವಿರ ಹೆಕ್ಟೇರದಷ್ಟು ಬೆಳೆ ಹಾನಿ ಆಗಿದ್ದರೂ ರಾಜ್ಯ ಸರ್ಕಾರ ಹಾಗೂ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳು ಎಲ್ಲಿಯೂ ಬೇಟಿ ನೀಡದೇ ಇದ್ದಿದ್ದು ರೈತರ ಬಗ್ಗೆ ಇವರಿಗಿರುವ ಅಸಡ್ಡೆಯನ್ನು ತೋರಿಸುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ
ಕಡಾಡಿ ಕಿಡಿ ಕಾರಿದ್ದಾರೆ.
ಶನಿವಾರ ದಿನಾಂಕ 27/09/2025 ರಂದು ಬಿಜೆಪಿ ಮಹಾನಗರ ಬೆಳಗಾವಿ ವತಿಯಿಂದ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು,
ಮಳೆ ಹಾನಿಯಾದ ಪ್ರದೇಶಗಳಿಗೆ ಬೇಟಿ ನೀಡುವ ಹಾಗೂ ಅವರಿಗೆ ಪರಿಹಾರ ಒದಗಿಸುವ ಯಾವುದೇ ಚಟುವಟಿಕೆಗಳು ಈ ಸರ್ಕಾರದಿಂದ ನಡೆಯುತ್ತಿಲ್ಲ ಎಂಬುದು ಅತ್ಯಂತ ಶೋಚನೀಯ ಸಂಗತಿ ಎಂದಿದ್ದಾರೆ, ಸರ್ಕಾರ ಕೇವಲ ಜಾತಿ ಜನಗಣತಿ ಹಿಂದೆ ಬಿದ್ದಿದೆ, ಅದರಲ್ಲಿಯೂ ಸಮೀಕ್ಷೆಯ ಸಿಬ್ಬಂದಿಗಳಿಗೆ ಅನೇಕ ತೊಂದರೆ ಹಾಗೂ ಸಮಸ್ಯೆಗಳಿವೆ, ಹಬ್ಬಗಳು ಬೇರೆ, ಅಂತಹದರಲ್ಲಿ ಅಕ್ಟೋಬರ್ ಏಳನೇ ತಾರೀಖಿಗೆ ಜಾತಿಸಮೀಕ್ಷೆ ಮುಗಿಸಲೇ ಬೇಕು ಎಂಬ ಹಠಕ್ಕೆ ಮುಖ್ಯಮಂತ್ರಿಗಳು ಬಿದ್ದಿದ್ದು ಎಷ್ಟು ಸರಿ ಎಂದಿದ್ದಾರೆ.

ರೈತರ ಬೆಳೆಹಾನಿ, ಪ್ರವಾಹ ಪೀಡಿತರಾಗಿ ಸಂಕಷ್ಟದಲ್ಲಿ ಇರುವಾಗ ಸರ್ಕಾರ ಅವರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕು ಹೊರತು ಹಠಕ್ಕೆ ಬಿದ್ದವರಂತೆ ಸಮೀಕ್ಷೆ ಹಿಂದೆ ಬೀಳಬಾರದು, ಇನ್ನೊಂದು ಕಡೆ, ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳನ್ನು ಖರೀದಿ ಮಾಡಬೇಕು ಎಂದು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದರೂ ಇನ್ನು ನೀವು ಜಿಲ್ಲೆಯಲ್ಲಿ ಒಂದು ಬೆಂಬಲ ಬೆಲೆಯ ಖರೀದಿ ಕೇಂದ್ರವನ್ನು ಪ್ರಾರಂಭ ಮಾಡಿಲ್ಲ ಎಂಬುದು ಮತ್ತೊಂದು ದುರಂತ, ಬೆಂಬಲ ಬೆಲೆಯ ಕೇಂದ್ರಗಳನ್ನು ತೆರೆದಾಗ ಮಾರುಕಟ್ಟೆಗಳಿಗಿಂತ ನೇರವಾಗಿ ರೈತರಿಗೆ ಲಾಭವಾಗುವ ಅವಕಾಶಗಳು ಹೆಚ್ಚಿವೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಇಬ್ಬರೂ ಒಂದೊಂದು ಸಹಕಾರಿ ರಂಗದ ಚುನಾವಣೆಯಲ್ಲಿ ನಿರತರಾಗಿದ್ದಾರೆ, ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ, ಸರ್ಕಾರ ಇಷ್ಟು ಆರ್ಥಿಕವಾಗಿ ದಿಕ್ಕೆಟ್ಟು ಹೋಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ, ಈ ಸರ್ಕಾರ ರಾಜ್ಯದಲ್ಲಿ ರೈತರನ್ನು ಬೀದಿಯಲ್ಲಿ ಬಿಟ್ಟು “ತಬ್ಬಲಿ ನೀನಾದೆ ಮಗೇನೆ” ಎನ್ನುವಂತಾಗಿದೆ ಎಂದಿದ್ದಾರೆ.
ಮುಂಬರುವ ದಿನಗಳಲ್ಲಿ ಸಂತ್ರಸ್ತ ರೈತರಿಗೆ ಪರಿಹಾರ, ಬೆಂಬಲ ಬೆಲೆ ಕೇಂದ್ರ ಸ್ಥಾಪನೆ ಹಾಗೂ ಮನೆ ಕಳೆದುಕೊಂಡ ಜನರಿಗೆ ಸೂಕ್ತ ಪರಿಹಾರ ನೀಡಬೇಕು, ಸರಕಾರ ಎಚ್ಚೆತ್ತುಕೊಳ್ಳದೆ ಹೋದರೆ ರೈತರ ಪರವಾಗಿ ಉಗ್ರ ಹೋರಾಟವನ್ನು ಮಾಡುವುದಾಗಿ ಮಾಧ್ಯಮದ ಮುಖಾಂತರ ಒತ್ತಾಯ ಮಾಡುತ್ತೇವೆ ಎಂದಿದ್ದಾರೆ.
ಶಾಸಕರಾದ ಅಭಯ ಪಾಟೀಲ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅನಿಲ ಬೆನಕೆ, ಜಿಲ್ಲಾಧ್ಯಕ್ಷರಾದ ಗೀತಾ ಸುತಾರ್ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಧೋನಿ, ಮಾಧ್ಯಮ ಸಂಚಾಲಕರು ಹಾಗೂ ಬೆಳಗಾವಿ ಪಾಲಿಕೆಯ ಆಡಳಿತ ಪಕ್ಷದ ನಾಯಕರಾದ ಹನುಮಂತ ಕೊoಗಾಲಿ ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ.