ಕಾಂಗ್ರೆಸ್ ಭವನದಲ್ಲಿ ವಿಜಯದಶಮಿ ಹಾಗೂ ಮಹಾತ್ಮ ಗಾಂಧಿ ಜಯಂತಿಯ ಆಚರಣೆ..
ನಾವು ಗಾಂಧಿ ಮಾರ್ಗದಲ್ಲಿ ಸಾಗಬೇಕು ಗೋಡ್ಸೆ ಮಾರ್ಗದಲ್ಲಿ ಅಲ್ಲ..
ಶಾಸಕ ಆಸಿಫ್ (ರಾಜು) ಸೇಠ್.
ಬೆಳಗಾವಿ : ಭಾರತೀಯರಾದ ನಾವೆಲ್ಲಾ ಒಂದು ಎಂಬ ಸಹಬಾಳ್ವೆಯಿಂದ ಗಾಂಧಿಮಾರ್ಗದಲ್ಲಿ ಸಾಗಬೇಕು ಹೊರತು ಗೋಡ್ಸೆ ಮಾರ್ಗದಲ್ಲಿ ಅಲ್ಲಾ, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಶಾಸಕ ಆಶಿಪ್ (ರಾಜು) ಸೇಠ್ ಅವರು ಹೇಳಿದ್ದಾರೆ.
ಗುರುವಾರ ದಿನಾಂಕ 02/10/2025ರಂದು ನಗರದ ಕಾಂಗ್ರೆಸ್ ಭವನದಲ್ಲಿ ಗಾಂಧಿ ಜಯಂತಿಯ ನಿಮಿತ್ತ ಮಹಾತ್ಮ ಗಾಂಧಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕರು, ಮಹಾತ್ಮಾ ಗಾಂಧಿಜಿ ಆದಿಯಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ತ್ಯಾಗ ಬಲಿದಾನಗಳಿಂದ ನಮಗೆ ಉತ್ತಮ ಜೀವನ ನೀಡಿದ್ದಾರೆ, ಅವರು ಹಾಕಿಕೊಟ್ಟ ಉತ್ತಮ ದಾರಿಯಲ್ಲಿ ನಾವೆಲ್ಲಾ ಸಾಗಬೇಕು ಹೊರತು ಹಿಂಸಾ ಮಾರ್ಗದಲ್ಲಿ ನಡೆಯಬಾರದು ಎಂದಿದ್ದಾರೆ.

ಗಾಂಧಿಜೀ ಅಧ್ಯಕ್ಷರಾದ ಏಕೈಕ ಕಾಂಗ್ರೆಸ್ ಅಧಿವೇಶನ ಅಂದರೆ ಅದು ಬೆಳಗಾವಿಯ ಕಾಂಗ್ರೆಸ್ ಅಧಿವೇಶನ, ಅದರ ಶತಮಾನದ ಸಂಭ್ರಮವನ್ನು ನಾವು ಕಳೆದ ವರ್ಷ ಅತೀ ವಿಜೃಂಭಣೆಯಿಂದ ಮಾಡಿದ್ದೇವೆ, ಅಹಿಂಸಾ ಮಾರ್ಗದಲ್ಲಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ದೊರಕಿದೆ, ಇನ್ನು ನಾವು ಬಹಳ ಮುಂದೆ ಸಾಗಬೇಕಾಗಿದೆ, ಡಾ ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ ಸಂವಿಧಾನದಲ್ಲಿ ನಮಗೆಲ್ಲ ಶಿಕ್ಷಣ, ಸಮಾನತೆ, ನ್ಯಾಯ, ಧರ್ಮಾಚರಣೆ ಎಲ್ಲವೂ ಲಭ್ಯವಾಗಿದೆ ಎಂದಿದ್ದಾರೆ.

ಹಿಂದೆ ಎಲ್ಲಾ ಕಾಂಗ್ರೆಸ್ ನಾಯಕರು ಮುಂಚೂಣಿಯಲ್ಲಿ ನಿಂತು ಬ್ರಿಟಿಷರ ವಿರುದ್ಧ ಕಾದಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಈಗ ಕಾಂಗ್ರೆಸ್ ಕಾರ್ಯಕರ್ತರು ನಾವೆಲ್ಲಾ ಒಗ್ಗಟ್ಟಾಗಿ ದೇಶವನ್ನು ಮುನ್ನಡೆಸಬೇಕಾದ ಸ್ಥಿತಿ ಇದೆ, ಹಿಂದಿನ ನಮ್ಮ ಕಾಂಗ್ರೆಸ್ ನಾಯಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗೋಣ ಎಂದಿದ್ದಾರೆ.
ಇನ್ನು ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಅವರು ಮಾತನಾಡಿ, ಇಡೀ ಜಗತ್ತಿಗೆ ದಾರಿದೀಪ ಆದವರು ಮಹಾತ್ಮ ಗಾಂಧೀಜಿಯವರು, ಅವರ ಸತ್ಯ ಮತ್ತು ಅಹಿಂಸೆಯ ಮಾರ್ಗಗಳು ಎಲ್ಲರಿಗೂ ಮಾದರಿಯಾಗಿವೆ, ಯಾವುದೇ ಅಧಿಕಾರದ ಖುರ್ಚಿಯ ಆಸೆಗೆ ಒಳಗಾಗದೇ ನಿಸ್ವಾರ್ಥತೆಯಿಂದ ದೇಶ ಸೇವೆ ಮಾಡಿದವರು ಗಾಂಧೀಜಿಯವರು, ಅದೇ ರೀತಿ ಸರಳ ಸಜ್ಜನಿಕೆಗೆ ಹೆಸರುವಾಸಿ ಆದ, ತತ್ವ ಸಿದ್ಧಾಂತಗಳ ಮೂಲಕ ತಮ್ಮ ಜೀವನ ನಡೆಸಿದಂತಹ ಪ್ರಧಾನಿ ಎಂದರೆ ಲಾಲ ಬಹದ್ದೂರ ಶಾಸ್ತ್ರಿ ಅವರು, ನಿಷ್ಠುರವಾದ ಗುಣ ಹೊಂದಿರುವ ರಾಜಕಾರಣಿ, ಇಂತಹ ಮಹನೀಯರು ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಇದ್ದರೆಂಬುದು ನಮಗೆ ಹೆಮ್ಮೆ, ಈ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗೋಣ ಎಂದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..