ಮಾಹಿತಿ ನೀಡದ ಅಧಿಕಾರಿಗೆ ಬಿಸಿ ಮುಟ್ಟಿಸಿದ ರಾಜ್ಯ ಮಾಹಿತಿ ಆಯುಕ್ತರು..
ಮಾಹಿತಿ ಹಕ್ಕು ಅಧಿಕಾರಿಗೆ 20 ಸಾವಿರ ದಂಡ..
ರಾಜ್ಯ ಮಾಹಿತಿ ಆಯುಕ್ತರು, ಬೆಳಗಾವಿ ಪೀಠದಿಂದ ದಂಡದ ಆದೇಶ..
ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಓಬಳಾಪುರ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಎಂ ಡಿ ಬಡಿಗೇರ ಅವರು ಮೇಲ್ಮನವಿ ಮಾಹಿತಿ ಅರ್ಜಿದಾರರಾದ ಶ್ರೀನಿವಾಸಗೌಡ ಪಾಟೀಲ ಅವರಿಗೆ ಸರಿಯಾದ ಸಮಯಕ್ಕೆ ಮಾಹಿತಿಯನ್ನು ಒದಗಿಸದೇ ಇರುವ ಕಾರಣಕ್ಕೆ ಸುಮಾರು 20ಸಾವಿರ ದಂಡ ವಿಧಿಸಿದ ಆದೇಶವನ್ನು ಹೊರಡಿಸಲಾಗಿದೆ.
ರಾಮದುರ್ಗ ತಾಲೂಕಿನ ಓಬಳಾಪುರ ಗ್ರಾಮದ ನಿವಾಸಿ ಶ್ರೀನಿವಾಸಗೌಡ ಪಾಟೀಲ ಎಂಬ ಮಾಹಿತಿ ಹಕ್ಕು ಕಾರ್ಯಕರ್ತರು ಕೇಳಿದ ಮಾಹಿತಿಯನ್ನು ನೀಡದ ಕಾರಣಕ್ಕೆ ಮೇಲ್ಮನವಿ ಸಲ್ಲಿಸಿದ್ದರು, ಅದರ ಕುರಿತಾಗಿ 25/01/2020 ರಂದು ಸಮಗ್ರ ವಿಚಾರಣೆ ನಡೆದು, ಮಾಹಿತಿ ಅಧಿಕಾರಿಯು ಮೇಲ್ಮನವಿದಾರರು ಕೋರಿದ ಮಾಹಿತಿಯನ್ನು ಒದಗಿಸಿ, ಆ ವರದಿಯನ್ನು ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 18(3)(ಎ)ಅನ್ವಯ ಆಯೋಗದ ವಿಚಾರಣೆಗೆ ಮೇಲ್ಮನವಿ ಅಧಿಕಾರಿ ಖುದ್ದು ಹಾಜರಿರಬೇಕಿತ್ತು, ಜೊತೆಗೆ ವರದಿ ಸಲ್ಲಿಸಬೇಕಿತ್ತು, ಆಯೋಗದ ಆದೇಶವನ್ನು ಪಾಲನೆ ಮಾಡಬೇಕಿತ್ತು, ಇದಾವುದನ್ನು ಮಾಡದ ಪ್ರತಿವಾದಿಯಾದ ಎಂ ಡಿ ಬಡಿಗೇರ, ಕಾರ್ಯದರ್ಶಿ ಗ್ರಾಮ ಪಂಚಾಯತಿ ಹೊಸಕೇರಿ (ಮೊದಲು ಗ್ರಾಮಪಂಚಾಯತಿ ಓಬಳಾಪುರ) ಇವರ ಮೇಲೆ ಮಾಹಿತಿ ಹಕ್ಕು ಅಧಿನಿಯಮದ 2005ರ ಕಲಂ 20(1)ರ ಅಡಿಯಲ್ಲಿ ಕ್ರಮವನ್ನು ಜರುಗಿಸಿ ದಂಡವನ್ನು ವಿಧಿಸಲಾಗಿದೆ..
ಓಬಳಾಪುರ ಗ್ರಾಮದಲ್ಲಿ ಕಾರ್ಯ ನಿರ್ವಹಿಸುವಾಗ ಮೆಲ್ಮಾನವಿದಾರರಿಗೆ ಮಾಹಿತಿ ಒದಗಿಸಿಲ್ಲ, ದಂಡದ ಕ್ರಮ ಜರುಗಿಸುವಲ್ಲಿ ಯಾವುದೇ ಸಮಜಾಯಿಸಿ ಸಲ್ಲಿಸದೇ ಇರುವದನ್ನು ಗಂಭೀರವಾಗಿ ಪರಿಗಣಿಸಿ ಜೊತೆಗೆ ಪ್ರತಿವಾದಿಯಿಂದ ಲಿಖಿತ ಸಮಜಾಯಿಸಿ ಏನು ಇಲ್ಲದಿರುವದರಿಂದ ಪ್ರತಿವಾದಿ ಎಂ ಡಿ ಬಡಿಗೇರ ಕಾರ್ಯದರ್ಶಿ ಗ್ರಾಮ ಪಂಚಾಯತಿ ಹೊಸಕೇರಿ ಇವರು ದಂಡನೆಗೆ ಅರ್ಹರು ಎಂದು ರಾಜ್ಯ ಮಾಹಿತಿ ಹಕ್ಕು ಆಯುಕ್ತರು ಬೆಳಗಾವಿ ಪೀಠ ಆದೇಶ ಹೊರಡಿಸಿದ್ದಾರೆ.
ಆಯೋಗದ ಆದೇಶಗಳನ್ನು ಪಾಲನೆ ಮಾಡದೇ ನಿರ್ಲಕ್ಷ್ಯ ಧೋರಣೆ ತೋರಿ, ಉದ್ದೇಶಪೂರ್ವಕವಾಗಿ ಮಾಹಿತಿ ನೀಡಲು ವಿಳಂಬ ಮಾಡಿದ್ದಾರೆಂದು ಪರಿಗಣಿಸಿ ಪಂಚಾಯತಿ ಕಾರ್ಯದರ್ಶಿ ಹೊಸಕೇರಿ ಅವರಿಗೆ 15ಸಾವಿರ ದಂಡ ವಿಧಿಸಿದ ಆದೇಶ ಹೊರಡಿಸಿದ್ದು ಜೊತೆಗೆ ಇಷ್ಟು ದಿವಸ ಅರ್ಜಿದಾರರು ಅನುಭವಿಸಿದ ಕಷ್ಟ ಮತ್ತು ಇತರೆ ವೆಚ್ಚಗಳಿಗಾಗಿ 5 ಸಾವಿರ ರೂ ಪರಿಹಾರವನ್ನು 15 ದಿನಗಳ ಒಳಗಾಗಿ ನೀಡುವಂತೆ ಆದೇಶ ಮಾಡಲಾಗಿದೆ..
ಈ ವೇಳೆ ಮಾಹಿತಿ ಹಂಚಿಕೊಂಡ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀನಿವಾಸಗೌಡ ಪಾಟೀಲ ಅವರು, ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳಿಗೆ ಇದೊಂದು ಎಚ್ಚರಿಕೆ ಗಂಟೆ, ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ, ನ್ಯಾಯ ಸಿಗುವದು ಸ್ವಲ್ಪ ತಡ ಆಗಬಹುದು, ನಮ್ಮ ಹೋರಾಟ ಮಾತ್ರ ಯಾವತ್ತೂ ದಣಿಯುವದಿಲ್ಲ, ಆಯೋಗದಿಂದ ಬರುವ ಇಂತಹ ಸಮಾಜಮುಖಿ ಆದೇಶಗಳು ನಮ್ಮಂತವರ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬುತ್ತವೆ, ಮಾಹಿತಿ ಹಕ್ಕು ಅರ್ಜಿಗೆ ಸರಿಯಾಗಿ ಸ್ಪಂದನೆ ನೀಡದ ಅಧಿಕಾರಿಗೆ ಬಿಸಿ ಮುಟ್ಟಿಸಿದ ಆಯೋಗದ ಆದೇಶಕ್ಕೆ ಧನ್ಯವಾದಗಳು ಎಂದರು..
ವರದಿ ಪ್ರಕಾಶ ಬಸಪ್ಪ ಕುರಗುಂದ..