ಪಿಎಚ್ ಡಿ ನೀಡದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನ…
ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಿಎಚ್ ಡಿ ಸ್ಕಾಲರ ವಿದ್ಯಾರ್ಥಿನಿ ಸುಜಾತಾ ಬೆಂಡೆ ನಿದ್ದೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇತ್ತೀಚೆಗೆ ರಾಣಿ ಚನ್ನಮ್ಮ ವಿವಿಯ 14 ನೇ ಘಟಿಕೋತ್ಸವದಲ್ಲಿ ಪಿಎಚ್ ಡಿ ನೀಡದಿದ್ದಕ್ಕೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೋ.ಸಿ ಎಂ ತ್ಯಾಗರಾಜ್ ಹಾಗೂ ರಿಜಿಸ್ಟರ್ ಸಂತೋಷ ಕಾಮಗೌಡ ವಿರುದ್ದ ಆರೋಪ ಮಾಡಿದ್ದಾಳೆ.
ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ಪಿಎಚ್ ಡಿ ಮಾಡುತ್ತಿದ್ದ ವಿದ್ಯಾರ್ಥಿಗೆ ಬೇಕಂತಲೇ ನನ್ನನ್ನು ಟಾರ್ಗೆಟ್ ಮಾಡಿ ಪಿಎಚ್ ಡಿ ಪದವಿ ಕೊಡಲು ನಿರಾಕರಣೆ ಮಾಡಿದ್ದಾರೆ ಎಂದು ಆರೋಪಿದ್ದಾಳೆ.
ಪ್ರೋ ಕೆ ಎಲ್ ಎನ್ ಮೂರ್ತಿ ಅವರು ನನಗೆ ಗೈಡ್ ಮಾಡುತ್ತಿದರು. ಗೈಡ್ ಮೂರ್ತಿಯವರ ಕಿರುಕುಳ ಕುರಿತಾಗಿ ನಾನು ಕುಲಪತಿ ಹಾಗೂ ರಿಜಿಸ್ಟರ್ ಗೆ ದೂರು ನೀಡಿದ್ದೆ, ನಂತರ ಗೈಡ್ ಕಿರುಕುಳ ಸಮಸ್ಯೆ ಬಗೆಹರಿಸಲಾಗಿತ್ತು.
ಎಲ್ಲಾ ಸಮಸ್ಯೆ ಬಗೆಹರಿದರೂ ಕೂಡ ನನಗೆ ಪಿಎಚ್ ಡಿ ಪದವಿ ನೀಡಲಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಆರೋಪಿಸಿದ್ದಾಳೆ.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.