ಸಂತಿಬಸ್ತವಾಡ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ..

ಸಂತಿಬಸ್ತವಾಡ ಗ್ರಾಮದಲ್ಲಿ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ..

ಗ್ರಾಮದಲ್ಲಿ ನೂರಕ್ಕೆ ನೂರರಷ್ಟು ಲಸಿಕೆ ಕಾರ್ಯ ಆಗಬೇಕು..

ಭರ್ಮಾ ಗುಡಮಕೇರಿ, ಗ್ರಾಮ ಪಂಚಾಯತಿ ಸದಸ್ಯರು, ಸಂತಿ ಬಸ್ತವಾಡ..

ಬೆಳಗಾವಿ : ತಾಲೂಕಿನ ಸಂತಿಬಸ್ತವಾಡ ಗ್ರಾಮದ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಪಲ್ಸ ಪೊಲಿಯೊ ಲಸಿಕೆ ಅಭಿಯಾನದ ಕಾರ್ಯಕ್ರಮವು ಜರುಗಿದ್ದು, ಮಕ್ಕಳು ದೀಪ ಬೆಳಗಿಸುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀ ಪರಶುರಾಮ ಚನ್ನಿಕುಪ್ಪಿರವರು ಮಕ್ಕಳಿಗೆ ಲಸಿಕೆಯನ್ನು ಹಾಕುವುದರೊಃದಿಗೆ ಲಸಿಕಾ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಭರ್ಮಾ ದು. ಗುಡುಂಕೇರಿ ಮಾತನಾಡಿ
ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಪೊಲಿಯೊ ಲಸಿಕೆ ಹಾಕಿಸಿಕೊಳಲು ಅರಿವು ನೀಡಲಾಗಿದೆ. ಗ್ರಾಮದಲ್ಲಿ ನೂರಕ್ಕೆ ನೂರರಷ್ಟು ಲಸಿಕೆಯನ್ನು ಹಾಕಬೇಕು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಬೇಕು ಎಂದು ಹೇಳಿದರು.

ಮತ್ತೊಬ್ಬ ಗ್ರಾಮ ಪಂಚಾಯತ್ ಸದಸ್ಯರಾದ ಬಸಪ್ಪಾ ಈ. ಬೀರಮುತ್ತಿ ಮಾತನಾಡಿ ಮಕ್ಕಳಿಗೆ ಸರಕಾರದಿಃದ ಸಿಗುವ ಎಲ್ಲಾ ಸೌಲಭ್ಯಗಳನ್ನು ತಲುಪಿಸಲು ಸರಿಯಾಗಿ ಅರಿವು ನೀಡಬೇಕು. ಮಕ್ಕಳಿಗೆ ಸರ್ಕಾರದಿಂದ ಮಕ್ಕಳ ಆರೋಗ್ಯಕ್ಕೆ ಸಂಬಂದಿಸಿದ ಎಲ್ಲಾ ಲಸಿಕೆಗಳನ್ನು ತಪ್ಪದೆ ಹಾಕಿಸಿಕೊಂಡು ಮಾರನಾಂತಿಕ ಕಾಯಿಲೆಗಳಿಂದ ರಕ್ಷಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಲ್ಪೂರಿ ಜಿಡ್ಡಿಮನಿ, ಗ್ರಾಮ ಪಂಚಾಯತ್ ಸದಸ್ಯರುಗಳಾದ ವಿಠ್ಠಲ ಅಂಕಲಗಿ, ಸುವರ್ಣ ಅಂಕಲಗಿ, ಮಹಾದೇವಿ ನಾಯಕ, ಪುಷ್ಪಾ ಕಾಂಬಳೆ, ಮಲ್ಪೂರಿ ರಾಮಾ ವನ್ನೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತೆ ಸರಸ್ವತಿ ಗುರವ, ಆರೋಗ್ಯ ಕಾರ್ಯಕರ್ತೆ ಜುಬೇದಾ ಸನದಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯ ಕರ್ತೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾ ಸಿದ್ದನ್ನವರ ಸ್ವಾಗತಿಸಿದರು. ರಾಜಶ್ರೀ ಹೊಳೆಪ್ಪಗೋಳ ವಂದಿಸಿದರು.

ವರದಿ ಭರ್ಮಾ ಗುಡಮಕೇರಿ..

Leave a Reply

Your email address will not be published. Required fields are marked *