72ರ ವಯಸ್ಸಿನಲ್ಲಿಯೂ ದಾಖಲೆ ಬರೆದ ಸೂಪರಸ್ಟಾರ್ ರಜನಿಕಾಂತ್..
ಬೆಳಗಾವಿ : ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಎಂದರೆ ತಮಿಳುನಾಡು ಅಷ್ಟೇ ಅಲ್ಲಾ, ಇಡೀ ದೇಶವೇ ಅವರ ಚಿತ್ರ ವೀಕ್ಷಣೆಗೆ ಕಾದು ಕುಳಿತುಕೊಳ್ಳುವಷ್ಟು ಪ್ರಭಾವ ಇರುವ ಸೂಪರ್ ಸ್ಟಾರ ನಟ..
ಅದೇ ರೀತಿ, ಕಳೆದ ಮೂರು ವಾರಗಳ ಮುಂಚೆ ರಜನಿಕಾಂತ್ ಅಭಿನಯದ ಜೈಲರ್ ಎಂಬ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ತೆರೆಕಂಡು, ಇಡೀ ದೇಶ ಹಾಗೂ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ಕಂಡು ಮೂರನೇ ವಾರದಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ..

ತೆರೆಕಂಡ ಮೊದಲ ದಿನವೇ ಪ್ರೇಕ್ಷಕರ ಅಭಿಪ್ರಾಯದ ಮೇರೆಗೆ ಜೈಲರ್ ಚಿತ್ರ ಹಿಟ್ ಲಿಸ್ಟಿನಲ್ಲಿ ಸೇರಿದ್ದು, ಉತ್ತಮ ಕಥಾಹಂದರ, ರಜನಿ ಸ್ಟೈಲ್, ಸಿನಿಮಾದ ತಾಂತ್ರಿಕ ಕೆಲಸಗಳಿಂದ ಜನಮನ ಗೆದ್ದಿತ್ತು, ದಿನದಂದು ದಿನಕ್ಕೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾ, ಗಳಿಕೆಯಲ್ಲಿಯೂ ದಾಖಲೆ ಬರೆಯುತ್ತಾ ಮುನ್ನಡೆದಿದೆ..
ನೆಲ್ಸನ್ ಎಂಬ ಯವಕ ಚಿತ್ರಕತೆ ಮತ್ತು ನಿರ್ದೇಶನ ಮಾಡಿದ್ದು, ಕಲಾನಿಧಿ ಮಾರನ್ ಚಿತ್ರಕ್ಕೆ ಹಣ ಹಾಕಿದ್ದಾರೆ, ಅನಿರುದ್ಧ ಅವರ ಸಂಗೀತ ಎಲ್ಲರನ್ನೂ ಗೆಲ್ಲುತ್ತದೆ, ಉತ್ತಮ ಕಲಾವಿದರು ನಟಿಸಿದ ಈ ಚಿತ್ರ ಅದ್ಬುತವಾಗಿ ಮೂಡಿಬಂದು ಗೆದ್ದಿದೆ..

ಕೇವಲ ಗೆಲುವು ಅಷ್ಟೇ ಪಡೆಯದೇ ಚಿತ್ರರಂಗದಲ್ಲಿ ಹೊಸ ದಾಖಲೆ ಕೂಡಾ ಮಾಡಿದೆ, ಬಾಹುಬಲಿ ಭಾಗ 2, ಹಾಗೂ ಕೆಜಿಎಫ್ ಚಾಪ್ಟರ್ 2, ಚಿತ್ರಗಳ ದಾಖಲೆಯನ್ನು ಜೈಲರ್ ಚಿತ್ರ ಸರಿಗಟ್ಟಿದೆ, ತಮ್ಮ 72 ರ ವಯಸ್ಸಿನಲ್ಲಿಯೂ ಕೂಡಾ ರಜನಿ ಅವರು ಎಂತಹ ರೆಕಾರ್ಡ್ ಆದರೂ ಬ್ರೇಕ್ ಮಾಡುವೆನು ಎಂದು ಸಾಭಿತು ಮಾಡಿದಂತಾಗಿದೆ..
ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಈ ಎಲ್ಲಾ ಐದು ರಾಜ್ಯಗಳಲ್ಲಿ 50 ಕೋಟಿ ಗಳಿಕೆ ಮಾಡಿದ ಮೂರನೇ ಚಿತ್ರ ಜೈಲರ್ ಆಗಿ ದಾಖಲೆ ಬರೆದಿದೆ,, ಈ ಹಿಂದೆ ಈ ದಾಖಲೆಯನ್ನು ಬಾಹುಬಲಿ 2, ಹಾಗೂ ಕೆಜಿಎಫ್ ಚಾಪ್ಟರ್ 2 ಮಾಡಿದ್ದವು.. ಜೊತೆಗೆ ಜೈಲರ್ ಚಿತ್ರ 500 ಕೋಟಿ ಗಳಿಕೆಯೊಂದಿಗೆ ಬಾಕ್ಸ್ ಆಫೀಸನಲ್ಲಿಯೂ ಕೂಡಾ ರೆಕಾರ್ಡ್ ಮಾಡಿದೆ ಎನ್ನಬಹುದು…

ಸೂಪರ್ ಸ್ಟಾರ್ ರಜನಿಯೊಂದಿಗೆ, ಮಲೆಯಾಳಂನ ಮೋಹನಲಾಲ, ಕನ್ನಡದ ಶಿವಣ್ಣ, ಹಿಂದಿಯ ಜಾಕಿಷ್ರೂಪ್, ಬೆಂಗಾಲಿಯ ನಟ, ತೆಲುಗು ಚಿತ್ರರಂಗದ ಹಾಸ್ಯನಟ ಸುನಿಲ್, ಇವರೆಲ್ಲ ಸಾತ್ ನೀಡಿದ್ದು, ವಿಲ್ಲನ್ ಪಾತ್ರ ಮಾಡಿದ ವಿನಾಯಕ್, ರಮ್ಯಕೃಷ್ಣ, ತಮನ್ನಾ, ಯೋಗಿಬಾಬು, ಕನ್ನಡದ ನಟ ಕಿಶೋರ್ ಎಲ್ಲರೂ ಉತ್ತಮ ಅಭಿನಯ ನೀಡಿದ್ದು ಚಿತ್ರ ಅದ್ಬುತ ಯಶಸ್ವಿ ಕಂಡು, 72ರ ರಜನಿಯ ಖದರ್ ಮತ್ತೆ ಜೋರಾಗಿದೆ ಎನ್ನಬಹುದು..
ವರದಿ ಪ್ರಕಾಶ ಕುರಗುಂದ..