ಅಶ್ಲೀಲ, ದ್ವಂದ್ವಾರ್ಥ ಅಸಭ್ಯ ಜಾನಪದ ಗೀತೆಗಳಿಗೆ ಬ್ರೇಕ್ ಹಾಕುವಂತೆ ಆಗ್ರಹಿಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ..

ಅಶ್ಲೀಲ, ದ್ವಂದ್ವಾರ್ಥ ಅಸಭ್ಯ ಜಾನಪದ ಗೀತೆಗಳಿಗೆ ಬ್ರೇಕ್ ಹಾಕುವಂತೆ ಆಗ್ರಹಿಸಿ ಪ್ರಾದೇಶಿಕ ಆಯುಕ್ತರಿಗೆ ಮನವಿ..

ಉತ್ತರ ಕರ್ನಾಟಕದ ಸಂಸ್ಕೃತಿ ಸಾಹಿತ್ಯ ಹಾಳು ಮಾಡುವ ಕಾರ್ಯಕ್ಕೆ ಕಡಿವಾಣ ಹಾಕಿ..

ಶ್ರೀನಿವಾಸಗೌಡ ಪಾಟೀಲ್, ಸಾಮಾಜಿಕ ಕಾರ್ಯಕರ್ತರು..

ಬೆಳಗಾವಿ : ಉತ್ತರ ಕರ್ನಾಟಕದ ಜಾನಪದ ಕಲೆಯೂ ದೇಶವ್ಯಾಪ್ತಿ ತನ್ನ ಹೆಸರು ಮಾಡಿಕೊಂಡಿದೆ. ಆದರೆ ಇತ್ತಿಚಿಗೆ ಹೊಸದಾಗಿ ಜಾನಪದ ಹಾಡುಗಳನ್ನು ಹಾಡುತ್ತಿರುವ ಕೆಲವರು ಕಾನೂನುಬಾಹಿರ ಅಶ್ಲೀಲ, ಅಸಭ್ಯ ಗೀತೆಗಳನ್ನು ರಚಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಜಾನಪದ ಗೀತೆಗಳೆಂದು ಬಿಂಬಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ, ಸಾಮಾಜಿಕ ಸ್ವಾಸ್ಥ್ಯ ಅಶಾಂತಿ ಮಾಡಿ ಉತ್ತರ ಕರ್ನಾಟಕ ಸಂಸ್ಕೃತಿ ಹಾಳು ಮಾಡುತ್ತಿರುವವರ ವಿರುದ್ದ ಕ್ರಮ ಕೈಗೊಳಬೇಕೆಂದು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಹಾಗೂ ಗಡಿನಾಡು ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷರು ಬಲರಾಮ ಅವರ ನೇತ್ರತ್ವದಲ್ಲಿ ಪ್ರಾದೇಶಿ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.

ಬಾಗಲಕೋಟ, ವಿಜಯಪುರ, ಬೆಳಗಾವಿ ಸೇರಿದಂತೆ ಉಕ ಭಾಗದ ಜಿಲ್ಲೆಗಳಲ್ಲಿಯೂ ಸಾಮಾಜಿಕ ಸ್ವಾಸ್ಥ್ಯ, ಅಶಾಂತಿ ಸೃಷ್ಟಿಸುವ ಕಾನೂನುಬಾಹಿರ ಅಶ್ಲೀಲ ಅಸಭ್ಯ ಹಾಡುಗಳನ್ನು ರಚಿಸಿ, ಸಾರ್ವಜನಿಕ ಸ್ಥಳಗಳಾದ ಜಾತ್ರೆ, ಉತ್ಸವ, ಧಾರ್ಮಿಕ ಸಭೆಗಳಲ್ಲಿ ಜಾನಪದ ಹೆಸರಿನಲ್ಲಿ ದ್ವಂದ್ವಾರ್ಥ ಗೀತೆಗಳ ಪ್ರಸಾರ ಫೇಸ್ಟುಕ್, ಯೂಟ್ಯೂಬಗಳಲ್ಲಿ ಹರಿ ಬಿಟ್ಟು ಜನತೆಗೆ ತಪ್ಪು ಸಂದೇಶ ರವಾನಿಸುತ್ತಿರುವುದನ್ನು ಆರೋಪಿಸಿ ಪ್ರಾದೇಶಿಕ ಆಯುಕ್ತರಿಗೆ ಮನನ ಸಲ್ಲಿಸಿದರು.

ಹಿಂತಹ ಆಶ್ಲೀಲ ಜಾನಪದ ಹಾಡುಗಳಿಂದ ಸಮಾಜದ ಶಾಂತಿ ಕದಲುವ ವಿಕ್ರತಿ ದುಷ್ಕರ್ಮಿಗಳ ವಿರುದ್ಧ ಮತ್ತು ಅನುಮತಿ ಇಲ್ಲದ್ದಿದ್ದರೂ ಟ್ರಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಅಕ್ರಮ ಧ್ವನಿವರ್ಧಕಗಳಲ್ಲಿ ಅವೇ ಅಶ್ಲೀಲ ಅಸಭ್ಯ ಹಾಡುಗಳನ್ನು ಹಾಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ವಾಹನಗಳಿಂದ ಜನತೆಗೆ ತೊಂದರೆ ಆಗುತ್ತಿದೆ ಹಿಂತವರ ವಿರುದ್ದ ಕೂಡಲೇ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪ್ರಾದೇಶಿಕ ಆಯುಕ್ತರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಗಡಿನಾಡು ಕನ್ನಡಿಗರ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಲರಾಮ ಮಾಸೆನಟ್ಟಿ ಅವರು ಮಾತನಾಡಿ, ಉತ್ತರ ಕರ್ನಾಟಕದ ಜಾನಪದ ಸಾಹಿತ್ಯಕ್ಕೆ ಮೌಲ್ಯವುಳ್ಳ ಇತಿಹಾಸವಿದೆ, ಎನಗಿ ಬಾಳಪ್ಪ, ಹುಕ್ಕೇರಿ ಬಾಳಪ್ಪ, ಚಂದ್ರಶೇಖರ್ ಕಂಬಾರ, ಶಬ್ಬೀರ್ ಡಂಗೆ ಅವರಂತಹ ಸಾಹಿತಿ ಹಾಗೂ ಜಾನಪದ ಕಲಾವಿದರು ಇಡೀ ರಾಜ್ಯವೇ ಮೆಚ್ಚುವಂತಹ, ಸಾಮಾಜಿಕ ಸಂದೇಶ ಸಾರುವ ಗೀತೆಗಳನ್ನು ನೀಡಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ, ಆದರೆ ಈಗಿನ ಹುಡುಗರು ಹಾಡು ಕಟ್ಟಿ ಕೆಲ ಸಮಾರಂಭಗಳಲ್ಲಿ ಹಾಡುವದು ನೋಡಿದರೆ ಅದರಲ್ಲಿ ಒಳ್ಳೆಯ ಸಾಹಿತ್ಯದ ಯಾವ ಅಂಶವೂ ಇರುವದಿಲ್ಲ..

ಬಹುತೇಕ ಹುಡುಗ ಹುಡುಗಿಯರ ಪ್ರೀತಿ ಪ್ರಮ, ಪ್ರಮವೈಫಲ್ಯ, ಸೇಡಿನ, ಶಕ್ತಿ ಪ್ರದರ್ಶನದ, ಯುವ ಸಮೂಹಗಳನ್ನು ಪ್ರಚೋದಿಸುವ ದ್ವಂದ್ವಾರ್ಥದ ಹಾಡುಗಳನ್ನು ರಚಿಸಿ ಹಾಡುವದರಿಂದ ಕನ್ನಡ ಭಾಷೆ ಹಾಗೂ ಉತ್ತರ ಕರ್ನಾಟಕದ ನಮ್ಮ ಸಂಸ್ಕೃತಿಗೆ ಕೆಟ್ಟ ಹೆಸರು ಬರುವದರೊಂದಿಗೆ, ನಮ್ಮ ಮನೆ ಮಕ್ಕಳು ಇದನ್ನು ಕಲಿತು ತಪ್ಪು ಸಾಹಿತ್ಯದ ಕಡೆಗೆ ಮನಸೋಲುತ್ತಿದ್ದಾರೆ ಇದನ್ನು ನಿಯಂತ್ರಿಸುವುದು ತುಂಬಾ ಅವಶ್ಯಕವಾಗಿದೆ, ಇದರ ವಿರುದ್ಧ ನಮ್ಮ ಗಡಿನಾಡು ಕನ್ನಡಿಗರ ಸೇನೆ ನಿರಂತರ ಹೋರಾಟ ಮಾಡುತ್ತದೆ ಎಂದಿದ್ದಾರೆ..

ಈ ವೇಳೆ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರು ಬಲರಾಮ ಮಾಸೆನಟ್ಟಿ, ಬುದ್ದ ಬಸವ ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಕೆಳಗೆರಿ, ಆನಂದ ಬಿಲಾವರ ಸೇರಿದಂತೆ ಮತ್ತಿತರರು ಇದ್ದರು.

ವರದಿ ಪ್ರಕಾಶ ಬಿ ಕೆ..