ಶಿಕ್ಷಕಿ ಸಚಿತಾ ಭುಜಂಗ ಅನಗೋಳಕರ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿಯ ಗರಿ..
ಬೆಳಗಾವಿ : ನಗರದ ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಪ್ರತಿಷ್ಠಾನದ ವತಿಯಿಂದ, ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ನಿಮಿತ್ತವಾಗಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ ನೀಡುವ, ಸೇವಾರತ್ನ ಪ್ರಶಸ್ತಿಯನ್ನು ನಗರದ ಜೈನ ಹೇರಿಟೇಜ್ ಶಾಲೆಯ ಶಿಕ್ಷಕಿಯಾದ ಸಚಿತಾ ಭುಜಂಗ ಅನಗೋಳ್ಕರ್ ಅವರಿಗೆ ನೀಡಿ ಗೌರವಿಸಲಾಗಿದೆ.
ರವಿವಾರ ದಿನಾಂಕ 25/01/2026ರಂದು ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿದ, ವಿಶ್ವದ ದೊಡ್ಡಣ್ಣ ಹಾಗೂ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉದ್ಯಮಿ ವಿಜಯ ಸಂಕೇಶ್ವರ ಇವರಿಬ್ಬರ 75 ನೇ ವರ್ಷದ ಹುಟ್ಟುಹಬ್ಬದ ನಿಮಿತ್ತವಾಗಿ ಸಚಿತಾ ಭುಜಂಗ ಅನಗೋಳರ್ ಅವರಿಗೆ “ಶಿಕ್ಷಣ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬೆಳಗಾವಿ ನಗರದ ಜೈನ ಶಿಕ್ಷಣ ಸಂಸ್ಥೆಗಳಾದ ಶ್ರೀ ಮಹಾವೀರ ಭಗವಾನ ಹಾಗೂ ಜೈನ ಹೇರಿಟೇಜ್ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಇವರು ಎಂಎ ಬಿಎಡ ಪದವೀಧರೆ, ತಮ್ಮ ಶಾಲೆಗಳಲ್ಲಿ ಅಧ್ಯಯನ ಮಾಡುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಭವಿಷ್ಯದಲ್ಲಿ ಉತ್ತಮ ಸಮಾಜದ ನಿರ್ಮಾಣಕ್ಕೆ ಶೈಕ್ಷಣಿಕವಾಗಿ ತಮ್ಮ ಕೊಡುಗೆಯನ್ನು ನೀಡಿರುವದನ್ನು ಪರಿಗಣಿಸಿ,
ಶಿಕ್ಷಕಿ ಸಚಿತಾ ಭುಜಂಗ ಅನಿಗೋಳಕರ ಅವರಿಗೆ “ಶಿಕ್ಷಣ ರತ್ನ” ಪ್ರಶಸ್ತಿಯನ್ನು ಆದಿತ್ಯ ಮಿಲ್ಕ ಬೆಳಗಾವಿ ಮತ್ತು ಶ್ರೀಮತಿ ರತ್ನಾಬಾಯಿ ಹಾಗೂ ಶ್ರೀ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನೀಡಿ ಗೌರವಿಸಲಾಗಿದೆ.
ವರದಿ ಪ್ರಕಾಶ ಬಿ ಕೆ..