ಜಿಲ್ಲೆಯ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯಗಳು…

ಜಿಲ್ಲೆಯ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯಗಳು..

ಪ್ರಜೆಗಳೇ ಪರಮಾಧಿಕಾರಿಗಳು ಎಂಬ ಸಂದೇಶಕ್ಕಾಗಿ ಈ ಗಣರಾಜ್ಯೋತ್ಸವ ಆಚರಣೆ..

ಜಿಲ್ಲಾಧಿಕಾರಿ ಮೊಹಮ್ಮದ ರೋಷನ್..

ಬೆಳಗಾವಿ : ಗಣರಾಜ್ಯ ಎಂದರೆ ಸರ್ಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶೇಷ್ಠ ಅಲ್ಲಾ, ಜನರು ಶ್ರೇಷ್ಠರು, ಸಾರ್ವಜನಿಕರೇ ಸುಪ್ರೀಂ, ನಾವೆಲ್ಲ ಜನರಿಗೋಸ್ಕರ ಸಮಾನತೆಯಿಂದ ಕಾರ್ಯ ಮಾಡಬೇಕು, ಸಂವಿಧಾನದಲ್ಲಿ ನಮಗೆ ಈ ಪ್ರಜಾಸತ್ತಾತ್ಮಕತೆ ನೀಡಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಹೇಳಿದ್ದಾರೆ..

ಸೋಮವಾರ ದಿನಾಂಕ 26/01/2026 ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಗಣರಾಜ್ಯೋತ್ಸವದ ಮಹತ್ವ ಹಾಗೂ ಅದು ಪ್ರಾರಂಭವಾದ ದಿನಗಳ ಬಗ್ಗೆ ಮಾತನಾಡಿ, ಜಿಲ್ಲೆಯ ಜನತೆಗೆ 77ನೇ ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದರು.

ದೇಶದಲ್ಲಿ ಸ್ವಾತಂತ್ರ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಾಚರಣೆಯನ್ನು ಎಲ್ಲರೂ ಒಂದಾಗಿ ಆಚರಣೆ ಮಾಡುತ್ತೇವೆ, ಯಾವುದೇ ಬೇದಬಾವ ಇಲ್ಲದೇ ಈ ಎರಡೂ ಹಬ್ಬಗಳನ್ನು ನಾವು ಆಚರಣೆ ಮಾಡುತ್ತೇವೆ, ಅದೇ ರೀತಿ ನಮ್ಮ ರಾಜ್ಯದಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತೇವೆ, 26ನೇ ಜನೆವರಿ ನಮಗೆ ಯಾಕೆ ಮುಖ್ಯ ಎಂದರೆ, ನಾವು ನಮ್ಮ ಸಂವಿದಾನವನ್ನು 1949ರಲ್ಲಿಯೇ ನಮಗೆ ಅರ್ಪಿಸಿಕೊಂಡಿದ್ದೆವು, ಆದರೆ 1950 ಜನೆವರಿ 26 ರಂದು ಗಣರಾಜ್ಯೋತ್ಸವ ಎಂದು ಘೋಷಣೆ ಮಾಡಿದ್ದೇವೆ, ಕಾರಣವೆಂದರೆ, 20 ವರ್ಷಗಳ ಹಿಂದೆ, ಅಂದರೆ ಜನೆವರಿ 26 1930ರಲ್ಲಿ ಪೂರ್ಣ ಸ್ವರಾಜ್ಯ ದಿನಾಚರಣೆಯನ್ನು ನಾವು ಆಚರಣೆ ಮಾಡಿದ್ದೆವು, ಅದರ ಸಂಕೇತವಾಗಿ ಜನೆವರಿ 26 1950 ರಂದು ಗಣರಾಜ್ಯೋತ್ಸವ ದಿನಾಚರಣೆಯನ್ನು ನಾವು ಆಚರಣೆ ಮಾಡುತ್ತಿದ್ದೇವೆ ಎಂದಿದ್ದಾರೆ.

ನಾವು ನಮ್ಮ ಸಂವಿಧಾನದ ಮೌಲ್ಯಗಳನ್ನು ಯಾವಾಗಲೂ ಕಾಪಾಡಬೇಕು, ಜಾತಿ, ಮತ, ಕುಲ, ಧರ್ಮ ಈ ಮಾನದಂಡದ ಮೇಲೆ ನಾವು ಯಾವಾಗಲೂ ಯೋಚನೆ ಮಾಡಬಾರದು, ಕಳೆದ ಒಂದೂವರೆ ವರ್ಷಗಳಿಂದ ತಾವು ನನ್ನ ಜೊತೆ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದೀರಿ, ಅಭಿವೃದ್ಧಿಪರ, ರೈತರಪರ ಕಾರ್ಯಗಳು, ದೇವಿ ಯಲ್ಲಮ್ಮಗುಡ್ಡ ಅಭಿವೃದ್ಧಿ ಕಾರ್ಯ, ನಗರ ಸ್ಥಳೀಯ ಸಂಸ್ಥೆಗಳ ಕೆಲಸ, ರಿಂಗರಸ್ತೆ ಕಾರ್ಯ ಇರಬಹುದು ಎಲ್ಲಾ ಮಹತ್ತರ ಕಾರ್ಯ ಮಾಡುವಾಗ ನೀವು ನನ್ನ ಜೊತೆ ಕೈ ಜೋಡಿಸಿದ್ದೀರಾ, ಅದಕ್ಕೆ ತಮಗೆಲ್ಲ ಧನ್ಯವಾದಗಳು ಎಂದರು..

ನಮ್ಮ ಈ ಜಿಲ್ಲಾಧಿಕಾರಿಗಳ ಕಚೇರಿಯ ನವೀಕರಣದ ಕಾರ್ಯ ಪ್ರಾರಂಭವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಿತ್ತಿದೆ, ಎಲ್ಲರೂ ಇದರ ಹೊಸ ವಿನ್ಯಾಸದ ಬಗ್ಗೆ ಪ್ರಸಂಶೆ ಪಟ್ಟಿದ್ದು ಸಂತಸ ತಂದಿದೆ, ನಮ್ಮ ಸಿಬ್ಬಂದಿಗಳು ಚೆನ್ನಾಗಿ ಕಾರ್ಯ ನಿರ್ವಹಿಸಲು, ಒಳ್ಳೆಯ ವಾತಾವರಣದ ಕಚೇರಿಯ ಅವಶ್ಯಕತೆ ಇರುತ್ತದೆ ಆದ ಕಾರಣ ಈ ನವೀಕರಣ ಕಾರ್ಯ ಮಾಡಿದ್ದೇವೆ, ಇಂದು ಹೊಸದಾಗಿ ನಿರ್ಮಿತವಾದ ಕಚೇರಿಯ ಧ್ವಜಾರೋಹಣ ಕಟ್ಟೆಯಲ್ಲಿಯೇ ಧ್ವಜಾರೋಹಣ ಮಾಡಿದ್ದು ಸಂತಸ ತಂದಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *