ಮಗನ‌ ಅಂತ್ಯಕ್ರಿಯೆಗೆ ತಾಯಿ ಪರದಾಟ…

ಮಗನ‌ ಅಂತ್ಯಕ್ರಿಯೆಗೆ ತಾಯಿ ಪರದಾಟ…

ಸಹಾಯಕ್ಕೆ ದೌಡಾಯಿಸಿ ಮಾನವೀಯತೆ ಮೆರೆದ ಗಂಗಾಧರ ಪಾಟೀಲ ಆಂಡ್ ಟೀಂ..

ಬೆಳಗಾವಿ : ಅನಾರೋಗ್ಯದಿಂದ ಮೃತಪಟ್ಟಿದ್ದ ಮಗನ ಅಂತ್ಯಕ್ರಿಯೆ ಮಾಡಲು ಪರದಾಡುತ್ತಿದ್ದ ವಯಸ್ಸಾದ ತಾಯಿ ಸಹಾಯಕ್ಕೆ ಸಮಾಜ ಸೇವಕ ಗಂಗಾಧರ ಪಾಟೀಲ ಮತ್ತು ಅವರ ತಂಡ ಸಹಾಯಕ್ಕೆ ದೌಡಾಯಿಸಿದ್ದು, ತಾವೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಳಗಾವಿಯ ಗೋಂಧಳಿ ಗಲ್ಲಿಯ ನಿವಾಸಿ ಕಿರಣ ಕಿತವಾಡಕರ(54) ಮೂರು ದಿನಗಳ ಹಿಂದೆ ಅವರ ಮನೆಯಲ್ಲೆ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಶವಕ್ಕೆ ಇಲಿ ಮತ್ತು ಹುಳುಗಳು ಕಚ್ಚಿ ವಾಸನೆ ಬರುತ್ತಿತ್ತು. ಮನೆಯಲ್ಲಿ ವಯಸ್ಸಾದ ಕಿರಣ ತಾಯಿ ಒಬ್ಬರೆ ಇದ್ದರು. ಮಗನ ಅಂತ್ಯಕ್ರಿಯೆ ಹೇಗೆ ಮಾಡುವುದು ಅಂತಾ ಕಣ್ಣೀರು ಹಾಕುತ್ತಿದ್ದರು‌. ಈ ವಿಷಯವನ್ನು ಸ್ಥಳೀಯರು ಗಂಗಾಧರ ಪಾಟೀಲ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ತಮ್ಮ ತಂಡದೊಂದಿಗೆ ತಕ್ಷಣ ಸ್ಥಳಕ್ಕೆ ಆಗಮಿಸಿ, ನಿಮ್ಮ ಜೊತೆಗೆ ನಾವಿದ್ದೇವೆ ಅಂತಾ ಅಜ್ಜಿಗೆ ಧೈರ್ಯ ತುಂಬಿದ್ದಾರೆ.

ನಂತರ ಶವ ಹೊರ ತೆಗೆದು, ಪೂಜೆ ಪುನಸ್ಕಾರ ಮಾಡಿದ ಬಳಿಕ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಯುವಕರ ಕಾರ್ಯಕ್ಕೆ ಅಜ್ಜಿ ಕೃತಜ್ಞತೆ ಸಲ್ಲಿಸಿದ್ದು, ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಈ ಪುಣ್ಯ ಕಾರ್ಯದ ವೇಳೆ ಗಂಗಾಧರ ಪಾಟೀಲ ಜೊತೆಗೆ ಶಂಕರ ಪಾಟೀಲ, ನಿಜಾರ್ ಅಹ್ಮದ್, ವಿನಾಯಕ ಪೂಜಾರಿ, ನಿಖಿಲ್ ಗಂಟಾನೆ, ಸೌರಭ ಗಾವಡೆ, ನಿತಿನ್ ಕಿಲ್ಲೇಕರ್, ಪ್ರಸಾದ ಪಡಕುಡೆ, ಓಂಕಾರ್ ಸಾಥ್ ಕೊಟ್ಟಿದ್ದಾರೆ‌.

Leave a Reply

Your email address will not be published. Required fields are marked *