ಹೌಸಫುಲ್ ಹೌಸಫುಲ್ ಗೃಹಲಕ್ಷ್ಮಿ ಹೌಸಫುಲ್…
ಹಣ ಬರೋಲ್ಲ ಎಂದವರು, ಬೆಳಿಗ್ಗೆನೇ ಬಂದು ನಿಲ್ತಾರೆ…
ಬೆಳಗಾವಿ : ಕರ್ನಾಟಕ ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಾದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಮುಖ್ಯವಾಗಿ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಇತ್ತೀಚಿನ ಗೃಹ ಲಕ್ಷ್ಮಿ ಯೋಜನೆಗಳು ಇಂದು ರಾಜ್ಯದೆಲ್ಲೆಡೆ ಜನಜಾತ್ರೆಯನ್ನು ಸೃಷ್ಟಿಸಿವೆ..
ವಿಶೇಷವಾಗಿ ರಾಜ್ಯದ ಮಹಿಳಾ ಮಣಿಗಳಿಗೆ ಶುಕ್ರದೆಸೆ ಶುರುವಾಗಿದೆ ಎಂಬ ವಾತಾವರಣ ನಿರ್ಮಾಣವಾಗಿದ್ದು, ಎಲ್ಲಿ ನೋಡಿದರಲ್ಲಿ ಮಹಿಳೆಯರೆದ್ದೇ ಮಾತಾಗಿದೆ..
ಕಾಂಗ್ರೆಸ್ ಸರ್ಕಾರದ ಪ್ರಮುಖ ನಾಲ್ಕು ಗ್ಯಾರೆಂಟಿಗಳ ಸೌಲಭ್ಯ ಪಡೆದುಕೊಳ್ಳಲು, ಎಲ್ಲರೂ ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್, ಗ್ರಾಮ ಒನ್, ಆನ್ಲೈನ್ ಕೇಂದ್ರ, ಸ್ಥಳೀಯ ಆಡಳಿತ ಕಚೇರಿಗಳು ಹೀಗೆ ಎಲ್ಲಾ ಕಡೆಗೆ ಹೋಗಿ ತಮ್ಮ ಅರ್ಜಿಗಳನ್ನು ಹಾಕುವುದರಲ್ಲಿ ನಿರತರಾಗಿರುವದರಿಂದ ಈ ಎಲ್ಲಾ ಕೇಂದ್ರಗಳಲ್ಲಿ ಜನಜಂಗುಳಿ ತುಂಬಿ ಹೌಸಫುಲ್ ಆದಂತಹ ನೋಟ. ಕಾಣಸಿಗುತ್ತಿದೆ..
ಸರ್ಕಾರದ ಜನಪರ ಯೋಜನೆಗಳು ಸಾಮಾನ್ಯರಿಗೆ ಲಭಿಸುವಂತಾಗಿದೆ ಎಂಬುದು ಒಂದು ಕಡ ಸಂತಸದ ವಿಚಾರವಾದರೆ,,

ಮತ್ತೊಂದೆಡೆ ಕಾಂಗ್ರೆಸ್ ಸರ್ಕಾರದ ಈ ಭರವಸೆ ಎಲ್ಲಾ ಸುಳ್ಳು, ಇಷ್ಟೊಂದು ಹಣ ಎಲ್ಲಿ ಕೊಡಲಿಕ್ಕೆ ಆಗುತ್ತದೆ?? ಜನರಿಗೆ ಇಷ್ಟೊಂದು ಸೌಲಭ್ಯ ನೀಡಿದರೆ ಜನ ಸೋಮಾರಿ ಆಗುತ್ತಾರೆ ಎಂದು, ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ, ಟಿಪ್ಪಣಿ ಮಾಡಿದ ಜನರೇ, ಈಗ ಬೆಳಿಗ್ಗೆ ಆರಕ್ಕೆ ಬಂದು ಕಾಂಗ್ರೆಸ್ ಸರ್ಕಾರದ ಸೌಲಭ್ಯ ಪಡೆಯಲು ನಿಂತಿರುವುದು ವಾಸ್ತವ..
ಅದೇನೇ ಇರಲಿ ದೇಶದಲ್ಲಿ ಯಾರೂ ಮಾಡದ ಸಾಹಸ ಮಾಡಿ, ಜನರಿಗೆ ಇಷ್ಟೊಂದು ಸೌಲಭ್ಯ ನೀಡಿದ ಏಕೈಕ ಸಿಎಂ ಎಂಬ ಹೆಗ್ಗಳಿಕೆ ಬಂದಿರುವುದು ನಮ್ಮ ಇಡೀ ರಾಜ್ಯಕ್ಕೆ ಹೆಮ್ಮೆ,
ಸರ್ಕಾರ ಯಾವುದೇ ಇರಲಿ, ಅದು ಒಳ್ಳೆಯದು ಮಾಡಿದರೆ ಒಳ್ಳೆಯದು ಎನ್ನಬೇಕು, ಒಟ್ಟಿನಲ್ಲಿ ಸಾಮಾನ್ಯ, ಬಡಜನರ ಪರವಾದ ಆಡಳಿತವಿರಬೇಕು ಎಂಬುದೇ ಜನಸಾಮಾನ್ಯರ ಆಶಯ…
ವರದಿ ಪ್ರಕಾಶ ಕುರಗುಂದ..