ಗ್ರಾಹಕ ಸ್ನೇಹಿಯಾದ ಬೆಳಗಾವಿಯ ನ್ಯಾಯಬೆಲೆ ಅಂಗಡಿ..!!!

ಗ್ರಾಹಕ ಸ್ನೇಹಿಯಾದ ಬೆಳಗಾವಿಯ ನ್ಯಾಯಬೆಲೆ ಅಂಗಡಿ..

ಬೆಳಗಾವಿ : ನಗರದ ಬಸವನ ಗಲ್ಲಿಯಲ್ಲಿ ಇರುವ ಆಹಾರ ಮಾತು ನಾಗರಿಕ ಸರಬರಾಜು ಇಲಾಖೆಯ ಅಡಿಯಲ್ಲಿ ಆಹಾರ ಧಾನ್ಯವನ್ನು ವಿತರಣೆ ಮಾಡುವ 192 ಸಂಖ್ಯೆಯ ನ್ಯಾಯಬೆಲೆ ಅಂಗಡಿಯು ತನ್ನ ಗ್ರಾಹಕ ಪರವಾದ ಕಾರ್ಯದಿಂದ ಜನಸ್ನೇಹಿ ನ್ಯಾಯಬೆಲೆ ಅಂಗಡಿ ಎಂದು ಹೆಸರುವಾಸಿಯಾಗಿದೆ..

192 ಸಂಖ್ಯೆಯ ಈ ನ್ಯಾಯಬೆಲೆ ಅಂಗಡಿಯಲ್ಲಿ 1700 ಪಡಿತರ ಚೀಟಿಗಳು ಇದ್ದು, 552 ಬಿಪಿಎಲ್, 1140 ಎಪಿಎಲ್, 08 ಅಂತ್ಯೋದಯ ಕಾರ್ಡುಗಳು ಇದ್ದು, ಪ್ರತಿ ತಿಂಗಳು ವ್ಯವಸ್ಥಿತವಾಗಿ ಗ್ರಾಹಕರಿಗೆ ಆಹಾರ ಧಾನ್ಯ ವಿತರಣೆ ಮಾಡುತ್ತಿದೆ…

ಇತ್ತೀಚೆಗೆ ಸರ್ಕಾರದಿಂದ ಹೊಸ ನಿಯಮ ಜಾರಿಯಾಗಿ, 5ಕೆಜಿ ಅಕ್ಕಿಯ ಬದಲಾಗಿ, 170 ಹಣವನ್ನು ನೀಡುವುದಾಗಿ ಘೋಷಣೆ ಮಾಡಿದಾಗ, ತಮ್ಮ ಬಹುತೇಕ ಗ್ರಾಹಕರ ಮಾಹಿತಿ ಸಂಗ್ರಹ ಮಾಡಿ, ಬ್ಯಾಂಕ್ ಖಾತೆ ಇಲ್ಲದವರಿಗೆ ಅಂಚೆ ಇಲಾಖೆಯ ಸಹಕಾರದಿಂದ ಖಾತೆಯನ್ನು ಮಾಡಿಸಿ, ಕೆವೈಸಿ ಆಗದಿದ್ದ ಗ್ರಾಹಕರಿಗೆ ಸ್ವತಃ ತಮ್ಮ ಅಂಗಡಿಯಲ್ಲಿ ಕೆವೈಸಿ ಮಾಡಿಸಿ, ಗ್ರಾಹಕರಿಗೆ ತಲುಪಬೇಕಾದ ಹಣವನ್ನು ಸಿಗುವಂತೆ ಮಾಡಿದ್ದಾರೆ..

ಇನ್ನು ಅಂಗಡಿಯ ಮಾಲೀಕರಾದ ಕಮಲಾಕಾಂತ ಪೆಡ್ನೇಕರ ಅವರು ಸ್ವತಃ ಕಾಳಜಿ ತಗೆದುಕೊಂಡು ಯಾವುದೇ ಗ್ರಾಹಕರಿಗೂ ತೊಂದರೆ ಆಗದಂತೆ ಕೆವೈಸಿ ಮಾಡುತ್ತಾ, ಅವರ ದಾಖಲಾತಿಗಳನ್ನು ಸಂಗ್ರಹಿಸುತ್ತಾ, ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿ, ಇಲಾಖೆಯ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ..

ಇನ್ನು ಇವರ ನ್ಯಾಯಬೆಲೆ ಅಂಗಡಿಯಲ್ಲಿ ವಯಸ್ಸಾಗಿ ನೆಡೆಯಲಿಕ್ಕೆ ಆಗದ, ಒಬ್ಬರೇ ಸದಸ್ಯರಿರುವ ಸುಮಾರು 20 ಪಡಿತರ ಚೀಟಿಗಳು ಇದ್ದು, ಸ್ವತಃ ಇವರೇ ಗ್ರಾಹಕರ ಮನೆವರೆಗೆ ಹೋಗಿ, ಅವರ ಬೈಯೋಮೆಟ್ರಿಕ್ ಮಾಡಿಕೊಂಡು, ಅಥವಾ ಓಟಿಪಿ ಪಡೆದುಕೊಂಡು ಅಂತಾ ವಯೋವೃದ್ಧರಿಗೆ ಆಹಾರ ಧಾನ್ಯ ಒದಗಿಸುವರು..

ಇನ್ನು ಸರ್ಕಾರದ ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದ ಮೇಲಂತೂ ಎಲ್ಲ ಗ್ರಾಹಕರು ತಮ್ಮ ಪಡಿತರ ಚೀಟಯಲ್ಲಿಯ ಸಮಸ್ಯಗಳನ್ನು ಪರಿಹರಿಸಿಕೊಳ್ಳಲು ನೂರಾರು ಸಂಖ್ಯೆಯಲ್ಲಿ ಅಂಗಡಿಗೆ ಬಂದರೂ, ತಿಂಗಳ ಪೂರ್ತಿ ಅಂಗಡಿಯಲ್ಲೇ ಇದ್ದುಕೊಂಡು, ಗ್ರಾಹಕರಿಗೆ ತಮ್ಮ ಪಡಿತರ ಚೀಟಿಯನ್ನು ಯಾವ ರೀತಿ, ಗ್ರಹಲಕ್ಷ್ಮಿ ಯೋಜನೆಗೆ ಅನುಕೂಲ ಆಗುವಂತೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡಿ, ಸಾಧ್ಯವಾದರೆ ತಮ್ಮ ಅಂಗಡಿಯಲ್ಲಿಯೇ ಗ್ರಾಹಕರ ಸಮಸ್ಯ ಬಗೆಹರಿಸಿ ಕೊಡುತ್ತಿರುವ 192 ಸಂಖ್ಯೆಯ ನ್ಯಾಯಬೆಲೆ ಅಂಗಡಿಯ ಈ ಕಾರ್ಯವೈಖರಿ ಜನಸ್ನೇಹಿಯಾಗಿ ಬೇರೆ ಅಂಗಡಿಗಳಿಗೆ ಮಾದರಿಯಾಗಿದೆ..

ವರದಿ ಪ್ರಕಾಶ ಕುರಗುಂದ..