ಬೆಳಗಾವಿಯಲ್ಲಿ ಜನಮನ ಗೆದ್ದ “ರಫಿ ಕೆ ರಂಗ, ರಿಯಾಜ್ ಕೆ ಸಂಗ” ಎಂಬ ಸುಮಧುರ ಸಂಗೀತ ಸಂಜೆ…

ಬೆಳಗಾವಿಯಲ್ಲಿ ಜನಮನ ಗೆದ್ದ “ರಫಿ ಕೆ ರಂಗ ರಿಯಾಜ್ ಕೆ ಸಂಗ” ಎಂಬ ಸುಮಧುರ ಸಂಗೀತ ಸಂಜೆ…

ಬೆಳಗಾವಿ : ಸೋಮವಾರ ಸಂಜೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಏರ್ಪಡಿಸಲಾದ “ರಫಿ ಕೆ ರಂಗ ರಿಯಾಜ್ ಕೆ ಸಂಗ” ಎಂಬ ಸಂಗೀತ ಕಾರ್ಯಕ್ರಮದಿಂದ ಸಂಗೀತ ಲೋಕವೇ ಸೃಷ್ಟಿಯಾದ ವಾತಾವರಣ ನಿರ್ಮಾಣವಾಗಿತ್ತು..

ಸೋಮವಾರ ಸಂಜೆ 6.30 ಕ್ಕೆ ಕಾರ್ಯಕ್ರಮದ ವೇಳೆ ನಿಗದಿಯಾಗಿದ್ದು, ಸಂಜೆ 5 ಗಂಟೆಯಿಂದಲೇ ಜನಜಂಗುಳಿ ಜಮೆ ಆಗಿದ್ದು, 6 ಗಂಟೆ ಹೊತ್ತಿಗೆ ಕುಮಾರ ಗಂಧರ್ವ ರಂಗಮಂದಿರ ಪೂರ್ತಿ ತುಂಬಿ, ಜನರು ಸ್ಥಳಾವಕಾಶ ಇಲ್ಲದೇ ಹೊರಗೆ ನಿಲ್ಲುವಂತಹ ಪರಿಸ್ಥಿತಿ ಉದ್ಭವವಾಗಿ, ಇನ್ನೂ ದೊಡ್ಡ ಹಾಲ್ ವ್ಯವಸ್ಥೆ ಮಾಡಿದ್ದರೆ ಅನುಕೂಲ ಆಗುತ್ತಿತ್ತೇನೋ ಎಂಬ ತಲೆಬಿಸಿ ಆಯೋಜಕರನ್ನು ಕಾಡುತ್ತಿತ್ತು..

ಕೊನೆಗೆ ಅತಿಯಾದ ಜನಸಂದನಿ ನಿಯಂತ್ರಿಸಲು ಹೆಚ್ಚುವರಿ ಆಸನಗಳನ್ನು ತಂದು, ಹೊರಗಡೆ ಇರಸಿ, ಕಿಟಕಿಗಳ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡಿದ ಸಂಗೀತ ಪ್ರಿಯರು, ಅದರಲ್ಲೂ ಸ್ವಲ್ಪ ತಡವಾಗಿ ಬಂದವರು ಹೊರಗಡೆಯೂ ಚೆನ್ನಾಗಿ ಹಾಡುಗಳು ಕೇಳುತ್ತಿವೆ, ಇಲ್ಲಿಯೇ ನಿಂತು ಕೇಳಿಸಿಕೊಂಡರಾಯಿತು ಎಂದು ಸಮಾಧಾನ ಪಟ್ಟ ಪ್ರೇಕ್ಷಕರು ಹಲವರಿದ್ದರು..

ಸತೀಶ ಜಾರಕಿಹೊಳಿ ಫೌಂಡೇಶನ್ ಆಯೋಜನೆ ಮಾಡಿದ ಈ ಸಂಗೀತ ಕಾರ್ಯಕ್ರಮವನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರು ಉದ್ಘಾಟನೆ ಮಾಡಿದ್ದು, ಸೇರಿರುವ ಅಪಾರ ಜನಸಾಗರಕ್ಕೆ ಸಂತಸ ವ್ಯಕ್ತ ಪಡಿಸಿದರು..

ಕಾರ್ಯಕ್ರಮ ಉದ್ಘಾಟನೆ ಮಾಡಿ, ಮಾತನಾಡಿದ ಸಚಿವರು, ನಮ್ಮ ಒತ್ತಡದ ಯಾಂತ್ರಿಕ ಜೀವನದಲ್ಲಿ ಇಂತಹ ಸಂಗೀತಮಯ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದ್ದು, ಸಂಗೀತ ಮತ್ತು ಸಾಹಿತ್ಯದಿಂದ ಮನೋಲ್ಲಾಸ ಉಂಟಾಗಿ, ಜೀವನವೇ ಸುಮಧುರವಾಗುತ್ತದೆ ಎಂಬ ಧಾಟಿಯಲ್ಲಿ ಮಾತನಾಡಿದರು..

ಈ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬೆಳಗಾವಿಯ ಸಂಗೀತ ಪ್ರಿಯರು, ತಮ್ಮ ಸಿಳ್ಳೆ ಹಾಗೂ ಚಪ್ಪಾಳೆ ಮೂಲಕ ಕಲಾವಿದರನ್ನು ಹುರಿದುಂಬಿಸುತ್ತ, ಕಾರ್ಯಕ್ರಮವನ್ನು ತುಂಬಾ ಯಶಸ್ವಿಯಾಗುವಂತೆ ಮಾಡಿದರು..

ಸತೀಶ ಜಾರಕಿಹೊಳಿ ಫೌಂಡೇಶನ್ ಆಯೋಜನೆ ಮಾಡಿದ ಈ ಸಂಗೀತ ಕಾರ್ಯಕ್ರಮವನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರು ಉದ್ಘಾಟನೆ ಮಾಡಿದ್ದು, ಸೇರಿರುವ ಅಪಾರ ಜನಸಾಗರಕ್ಕೆ ಸಂತಸ ವ್ಯಕ್ತ ಪಡಿಸಿದರು.. ಕಾರ್ಯಕ್ರಮ ಉದ್ಘಾಟನೆ ಮಾಡಿ, ಮಾತನಾಡಿದ ಸಚಿವರು, ನಮ್ಮ ಒತ್ತಡದ ಯಾಂತ್ರಿಕ ಜೀವನದಲ್ಲಿ ಇಂತಹ ಸಂಗೀತಮಯ ಕಾರ್ಯಕ್ರಮಗಳ ಅವಶ್ಯಕತೆ ತುಂಬಾ ಇದ್ದು, ಸಂಗೀತ ಮತ್ತು ಸಾಹಿತ್ಯದಿಂದ ಮನೋಲ್ಲಾಸ ಉಂಟಾಗಿ, ಜೀವನವೇ ಸುಮಧುರವಾಗುತ್ತದೆ ಎಂಬ ಧಾಟಿಯಲ್ಲಿ ಮಾತನಾಡಿದರು..

ಈ ವಿಶೇಷ ಸಂಗೀತ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಬೆಳಗಾವಿಯ ಸಂಗೀತ ಪ್ರಿಯರು, ತಮ್ಮ ಸಿಳ್ಳೆ ಹಾಗೂ ಚಪ್ಪಾಳೆ ಮೂಲಕ ಕಲಾವಿದರನ್ನು ಹುರಿದುಂಬಿಸುತ್ತ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗುವಂತೆ ಮಾಡಿದರು. ಈ ಸಂಗೀತ ಕಾರ್ಯಕ್ರಮದಲ್ಲಿ ಮಾನ್ಯ ಸಚಿವರ ಜೊತೆಗೆ, ಶಾಸಕರಾದ ವಿಶ್ವಾಸ ವೈದ್ಯ, ಗಣೇಶ ಹುಕ್ಕೇರಿ, ರಾಹುಲ್ ಜಾರಕಿಹೊಳಿ, ಲಕ್ಷ್ಮಣರಾವ್ ಚಿಂಗಳೆ ಇನ್ನೂ ಹಲವಾರು ಗಣ್ಯರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..