ಇದೇ ರವಿವಾರ 13ರಂದು ಶೈಕ್ಷಣಿಕ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ..!!!

ಇದೇ ರವಿವಾರ 13ರಂದು ಶೈಕ್ಷಣಿಕ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ..!!!

ಬಸವರಾಜ್ ಅರವಳ್ಳಿ ಹೇಳಿಕೆ..!!!

ಬೆಳಗಾವಿ : ಜಿಲ್ಲೆಯಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು, ಶೈಕ್ಷಣಿಕ ಸಾಧನೆ ಮಾಡಿದ ಜಿಲ್ಲೆಯ ಪ್ರತಿಭಾನ್ವಿತ ಮಕ್ಕಳನ್ನು ಗುರ್ತಿಸಿ, ಅಂತವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡುವುದರ ಮೂಲಕ, ವಿಧ್ಯಾರ್ಥಿ ಸಮೂಹಕ್ಕೆ ಪ್ರೇರಣೆ ನೀಡುವ ಕಾರ್ಯ ಮಾಡುತ್ತಿರುವ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯವನ್ನು ಎಲ್ಲರೂ ಮೆಚ್ಚುವಂತಾಗಿದೆ..

ಬೆಳಗಾವಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಅರವಳ್ಳಿ ಅವರ ಮುಂದಾಳತ್ವದಲ್ಲಿ, ಜಿಲ್ಲೆಯೆಲ್ಲೆಡೆ ಇಂತಹ ಸಮಾಜಮುಖಿ ಕಾರ್ಯಗಳು ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಸಮುದಾಯದ ಹೆಸರಿನಿಂದ ಲಾಭಾ ಮಾಡಿಕೊಳ್ಳುವ ಜನರ ಮಧ್ಯ, ತಮ್ಮ ಸಮುದಾಯದ ಮಕ್ಕಳ ಭವಿಷ್ಯದ ಭದ್ರತೆಗಾಗಿ ಅಳಿಲು ಸೇವೆ ಮಾಡುತ್ತಿರುವ ಇಂತಹ ಮಾನವೀಯ ಮೌಲ್ಯ ಇರುವ ಅಧ್ಯಕ್ಷರು ಶೋಷಿತ ಸಮಾಜಕ್ಕೆ ತುಂಬಾ ಅವಶ್ಯಕವಾಗಿದ್ದಾರೆ..

ಜಿಲ್ಲೆಯ ಮಾದಿಗ ಸಮುದಾಯದ ಬಡ, ಶೋಷಿತ ಕುಟುಂಬದ ಮಕ್ಕಳು ಶೈಕ್ಷಣಿಕ ಸಾಧನೆ ಮಾಡಿರುತ್ತಾರೆ, ಅಂತವರಿಗೆ ನಾವು ಸಹಕಾರ ನೀಡಿ, ಪ್ರೋತ್ಸಾಹಿಸಿ ಮುಂದೆ ಸಾಧನೆ ಮಾಡುವ ಹಾಗೆ ಪ್ರೇರೇಪಿಸಬೇಕು, ನಮ್ಮ ಸಮುದಾಯಕ್ಕೆ ನಾವು ಏನಾದರೂ ಒಳ್ಳೆಯದು ಮಾಡಬೇಕು ಎಂಬ ಅಭಿಪ್ರಾಯ ಇಟ್ಟುಕೊಂಡು, ತಮ್ಮ ಅಧ್ಯಕ್ಷೀಯ MRHS ಸಂಘಟನೆಯ ಮೂಲಕ, ಇಂದು ಶೈಕ್ಷಣಿಕ ಸಾಧನೆ ಮಾಡಿದ, ಸಮುದಾಯದ ಮಕ್ಕಳಿಗೆ ಪುರಸ್ಕಾರ ಮಾಡುವಂತಹ ಮಹತ್ ಕಾರ್ಯ ಮಾಡುತ್ತಿದ್ದಾರೆ..

ಇದೆ ರವಿವಾರ 13/08/2023 ರಂದು, ನಗರದ ಸರ್ಕ್ಯುಟ್ ಹೌಸ್ ಅಲ್ಲಿ ಬೆಳಿಗ್ಗೆ 10 ಗಂಟೆಗೆ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಜಿಲ್ಲೆಯಿಂದ ಆಯ್ದ, ಸಮುದಾಯದ 16 ಎಸೆಸೆಲ್ಸಿ ವಿಧ್ಯಾರ್ಥಿಗಳಿಗೆ ಹಾಗೂ 5 ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಲಿದ್ದು, ಸಾಧನೆಗೈದ ವಿಧ್ಯಾರ್ಥಿಗಳ ಪಾಲಕರು ಇದರಲ್ಲಿ ಭಾಗಿಯಾಗುತ್ತಿರುವದು ವಿಶೇಷ..

ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಬಸವರಾಜ್ ಅರವಳ್ಳಿ ಅವರು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದು, ಪ್ರತಿ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಆ ಮೂಲಕ ನಮ್ಮ ಸಮುದಾಯದ ಮಕ್ಕಳು ಉತ್ತಮ ಶಿಕ್ಷಿತರಾಗಿ, ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ಹೊಂದಲಿ ಎಂಬ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ..

ವರದಿ ಪ್ರಕಾಶ ಕುರಗುಂದ..