ಮಣ್ಣಿನಲ್ಲಿ ಹೊರಹೊಮ್ಮಿದ ಮಾತೃಭಾಷೆಯ ಮುದ್ದುಮಕ್ಕಳ ಕಲಾ ಕೌಶಲ್ಯ
ಬೆಳಗಾವಿ : ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಮೇರೆಗೆ ಮಕ್ಕಳ ಸಂಭ್ರಮದ ಶನಿವಾರವನ್ನು ಬ್ಯಾಗ್ ರಹಿತ ದಿನವನ್ನಾಗಿ ಆಯೋಜಿಸಲಾಯಿತು..
ಪ್ರತಿ ತಿಂಗಳು 3 ನೆ ಶನಿವಾರ ಬ್ಯಾಗ ರಹಿತ ಶಾಲಾ ದಿನ ಎಂದು ಸೂಚಿಸಲಾಗಿದ್ದು, ಅದರ ಪ್ರಕಾರ 19 ಆಗಸ್ಟ್ , ಶನಿವಾರದಂದು ನಗರದ ಎನ್ ಎಸ್ ಪೈ ಪ್ರಾಥಮಿಕ ಶಾಲೆಯಲ್ಲಿ ಹೆಮ್ಮೆಯಿಂದ ಕ್ಲೇ ಮಾಡಲಿಂಗ್ ಹಾಗೂ ಮಣ್ಣಿನ ಕೈ ಕೆಲಸ ರೂಪಕಗಳ ಸ್ಪರ್ಧೆ ಏರ್ಪಡಿಸಿ, ಅರ್ಥ ಪೂರ್ಣವಾಗಿ ಸಂಯೋಜಿಸಲಾಗಿತ್ತು..

1 ರಿಂದ 7ನೆಯ ತರಗತಿ ಮಕ್ಕಳಿಗೆ ಆಯಾ ವರ್ಗವಾರೂ ಸ್ಪರ್ಧೆ ನಡೆಸಿ, ಉತ್ತಮ 3 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ, ಅವರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು..
ಮಕ್ಕಳು ಬಹಳ ಹುರುಪಿನಿಂದ ಭಾಗವಹಿಸಿದ್ದು,
ವಿಧ್ಯಾರ್ಥಿಗಳು ತಮಗೆ ಬೇಕಾದ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಬಂದು, ಶಿಸ್ತಿನಿಂದ ಎರಡು ಗಂಟೆಗಳ ಅವಧಿಯಲ್ಲಿ ತಮ್ಮ ಪ್ರತಿಭೆ ಹಾಗೂ ಕೌಶಲ್ಯದ ಕೈಚಳಕದಿಂದ ಅತ್ಯಂತ ಆಕರ್ಷಣೀಯ ರೂಪಕಗಳನ್ನು
ಮಾಡಿದರು..

ಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶ್ರೀಮತಿ ರಾಧಿಕಾ ನಾಯಿಕ ಅವರು ಮಕ್ಕಳ ಕಾರ್ಯಗಳನ್ನು ವೀಕ್ಷಣೆ ಮಾಡಿ, ಮಕ್ಕಳ ಕಲೆ, ಜಾಣ್ಮೆ, ಕೌಶಲ್ಯ, ತಾಳ್ಮೆಯಿಂದ ಮಾಡಿರುವ ಸೋಗಸಾದ ಮತ್ತು ಆಕರ್ಷಣೀಯವಾದ ರೂಪಕಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ,
ಮಕ್ಕಳಿಗೆ ಸ್ಪೂರ್ತಿ ಮತ್ತು ಪ್ರೋತ್ಸಾಹ ನೀಡಿದರು..
ನಿಜಕ್ಕೂ ಮಕ್ಕಳಲ್ಲಿ ಅಡಗಿರುವ ಸುಪ್ತ ಕಲೆಯು, ಸ್ಪರ್ಧೆಯ ಮೂಲಕ ಹೊರಹೊಮ್ಮಿದ್ದು, ನೋಡಲು ವಿಸ್ಮಯ ಹಾಗೂ ಹೆಮ್ಮೆ ಅನಿಸುವಂತೆ ಇತ್ತು,
ಬಾಲವಾಡಿ ವಿಭಾಗ ಮಕ್ಕಳಿಗೆ ಭರತ ನಾಟ್ಯದ ಬಗ್ಗೆ ಕಲಿಸುವ ಚಟುವಟಿಕೆ ಮಾಡಿದ್ದು, ಮುದ್ದು ಮಕ್ಕಳನ್ನು ನೋಡುವದೆ ಸಂತಸದ ಸನ್ನಿವೇಶವಾಗಿತ್ತು ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ..

ಎನ್ ಎಸ್ ಪೈ ಎಂಬ ಮಾತೃಭಾಷೆಯಲ್ಲಿ ವಿಧ್ಯಾಭ್ಯಾಸ ನೀಡುವ ಪ್ರಾಥಮಿಕ ಶಾಲೆಯು ಹಲವು ವೈಶಿಷ್ಟ್ಯ ಕಾರ್ಯಗಳಿಂದ ತನ್ನದೇ ಆದ ಗುಣಮಟ್ಟವನ್ನು ಕಾಯ್ದುಕೊಂಡ ಬಂದ ಜ್ಞಾನ ದೆಗುಳಬಾಗಿದ್ದು, ಇಲ್ಲಿ ವಿಧ್ಯೆಯೊಂದಿಗೆ ಉತ್ತಮ ಸಂಸ್ಕಾರವನ್ನೂ ಕೂಡಾ (ಮಕ್ಕಳು) ವಿಧ್ಯಾರ್ಥಿಗಳು ಪಡೆಯುವದು ವಿಶೇಷ..
ವರದಿ ಪ್ರಕಾಶ ಕುರಗುಂದ…