ಜನವಿರೋಧಿ ಹಾಗೂ ಬಹಳ ದಿನಗಳಿಂದ ಒಂದೇ ಸ್ಥಳದಲ್ಲಿ ಇರುವವರ ವರ್ಗಾವಣೆ ಮಾಡಬೇಕಾಗುತ್ತದೆ..!!!

ಜನವಿರೋಧಿ ಹಾಗೂ ಬಹಳ ದಿನಗಳಿಂದ ಒಂದೇ ಸ್ಥಳದಲ್ಲಿ ಇರುವವರ ವರ್ಗಾವಣೆ ಮಾಡಬೇಕಾಗುತ್ತದೆ..!!!

ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲುತ್ತದೆ..!!!

ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮ ಸ್ಥಳಾಂತರ ವರಿಷ್ಠರ ನಿರ್ಣಯ..!!!

ಸಚಿವ ಸತೀಶ ಜಾರಕಿಹೋಳಿ ಹೇಳಿಕೆ..!!!

ಬೆಳಗಾವಿ : ಸೋಮವಾರ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೋಳಿ ಅವರು, ಬಹಳ ವರ್ಷಗಳವರೆಗೆ ಒಂದೇ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರನ್ನು ಸಾರ್ವಜನಿಕರ ಅಪೇಕ್ಷೆಯಂತೆ ವರ್ಗಾವಣೆ ಮಾಡುವದಕ್ಕೆ ನಮ್ಮ ಸರ್ಕಾರ ಹಿಂಜರಿಯುವುದಿಲ್ಲ ಎಂದಿದ್ದಾರೆ..

ಬೆಳಗಾವಿಯ ಮಹಾನಗರ ಪಾಲಿಕೆ ಹಾಗೂ ಇತರ ಇಲಾಖೆಗಳ ವರ್ಗಾವಣೆ ವಿಷಯಗಳ ಕುರಿತಾಗಿ, ರಾಜಕೀಯವಾಗಿ ನಾನಾ ತರಹದ ಊಹಾಪೋಹಗಳು ನಡೆದದ್ದು, ಅದಕ್ಕೆಲ್ಲ ಸ್ಪಷ್ಟತೆ ನೀಡಿದ ಸಚಿವರು, ಸಾರ್ವಜನಿಕರ ಕಾರ್ಯದಲ್ಲಿ ನಿರಾಸಕ್ತಿ ತೋರುವ ಯಾವುದೇ ಸಿಬ್ಬಂದಿ ಇದ್ದರೂ ಅವರನ್ನು ಬೇರೆ ಕಡೆಗೆ ಕಲಿಸುವುದು ಗ್ಯಾರೆಂಟಿ ಎಂದರು..

ಇನ್ನು ಜಿಲ್ಲೆಯಲ್ಲಿ ನಡೆಯಬೇಕಾದ ಗೃಹಲಕ್ಷ್ಮಿ ಯೋಜನೆಯ ಚಾಲನಾ ಕಾರ್ಯಕ್ರಮವು, ಮೈಸೂರಿಗೆ ಸ್ಥಳಾಂತರವಾಗಿದ್ದು ವರಿಷ್ಠರ ತೀರ್ಮಾನದಂತೆಯೇ ಹೊರತು ಬೇರಾವ ಕಾರಣವಿಲ್ಲ ಎಂದರು, ಕ್ಯಾಬಿನೆಟ್ ಅಲ್ಲಿ ಈ ವಿಷಯ ಚರ್ಚೆ ಆಗಿ, ರಾಹುಲ್ ಗಾಂಧಿ ಅವರೂ ಕೂಡ ಸೂಚಿಸಿದ್ದರಿಂದ ಈ ಕಾರ್ಯಕ್ರಮ ಮೈಸೂರಿಗೆ ಸ್ಥಳಾಂತರ ಆಗಿದೆ, ಜೊತೆಗೆ ಕೇರಳದಲ್ಲಿ ರಾಹುಲ್ ಗಾಂಧಿಯವರ ಕಾರ್ಯಕ್ರಮ ಇರುವದರಿಂದ ಎರಡೂ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗುದೆಂಬ ಕಾರಣಕ್ಕೆ ಈ ಬದಲಾವಣೆ ವರಿಷ್ಠರು ಮಾಡಿದ್ದಾರೆ ಎಂಬ ಮಾಹಿತಿ ನೀಡಿದರು..

ಇನ್ನು ಬೆಳಗಾವಿಯ ಕಾಡಾ ಕಚೇರಿಯಲ್ಲಿ ಕೆಲಸವಿಲ್ಲದೇ ಸಿಬ್ಬಂದಿ ಖಾಲಿ ಕುಳಿತಿರುವ ಬಗ್ಗೆ ಮಾತನಾಡಿದ ಅವರು, ಆದಷ್ಟೂ ಬೇಗ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದಿದ್ದಾರೆ.

ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸುಮಾರು 20 ಸ್ಥಾನ ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಡಿಸಿದ ಅವರು, ಚಿಕ್ಕೋಡಿ ಹಾಗೂ ಬೆಳಗಾವಿ ಮತಕ್ಷೇತ್ರದಿಂದ ಹಲವಾರು ಆಕಾಂಕ್ಷಿಗಳು ಇದ್ದರೆ ಎಂದರು..

ಇನ್ನು ತಮ್ಮ ಕ್ಷೇತ್ರದಲ್ಲಿ ಅಂಬೇಡ್ಕರ ವಸತಿ ಶಾಲೆಯ ಕಟ್ಟಡಕ್ಕೆ ಸುಮಾರು ಹತ್ತು ಎಕರೆ ಜಾಗವನ್ನು ನೀಡಿದ ಬಗ್ಗೆ ಮಾಹಿತಿ ನೀಡಿದ ಅವರು, ಎಸ್ಟು ದಿನ ಖಾಸಗಿ ಕಟ್ಟಡದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು, ಕಟ್ಟಡ ಸಿದ್ದವಾದ ನಂತರ ಹೊಸ ಸ್ವಂತ ಕಟ್ಟಡದಲ್ಲಿ ಅಧ್ಯಯನ ಮಾಡುತ್ತಾರೆ ಎಂದರು..

ಇನ್ನು ಈ ಸುದ್ದಿಗೋಷ್ಠಿಯಲ್ಲಿ ಸಚಿವರ ಜೊತೆಗೆ, ವಿನಯ ನಾವಲಗಟ್ಟಿ, ಕಿರಣ್ ಸಾಧುಣವರ, ಮತ್ತಿತರ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..