ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ನಾಗರಾಜ ಆರ್ ಗೆ ಸನ್ಮಾನ..
ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರಿಂದ ಕೃತಜ್ಞತೆ
ಬೆಳಗಾವಿ: ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಉಪನಿರ್ದೇಶಕ ನಾಗರಾಜ್ ಆರ್ ಅವರನ್ನು ತಾಲೂಕಿನ ಅಗಸಗೆ ಗ್ರಾಮದ ವಿವಿಧ ಸ್ವ ಸಹಾಯ ಸಂಘಗಳ ಸದಸ್ಯೆಯರು ಶಾಲು ಹೊದೆಸಿ ಫಲ ಪುಷ್ಪ ನೀಡಿ ಸನ್ಮಾನಿಸಿದರು.
ಸೋಮವಾರ ಬೆಳಗಾವಿಯ ಶಿವಾಜಿನಗರದ ಇಲಾಖೆಯ ಕಚೇರಿಯಲ್ಲಿ ಸನ್ಮಾನಿಸಿದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ಸಂಘಕ್ಕೆ ತಲಾ ಒಂದು ಲಕ್ಷ ರೂಪಾಯಿ ಬೀಜಧನ ಎಂದು ನೀಡಲಾಗಿತ್ತು. ಆದರೆ ಅಂಗನವಾಡಿ ಕಾರ್ಯಕರ್ತೆ ರೇಖಾ ಪಾಟೀಲ ಅವರು ಅದನ್ನು ದುರ್ಬಳಕೆ ಮಾಡಿಕೊಂಡಿದ್ದರು. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಡಿಡಿ ನಾಗರಾಜ್ ಆರ್ ಅವರು ಅವ್ಯವಹಾರ ಪತ್ತೆ ಹಚ್ಚಿ ಹಣ ಮರಳಿ ಭರಿಸುವಂತೆ ಆದೇಶ ಹೊರಡಿಸಿ ನಮ್ಮ ಸಂಘಗಳ ನಾಲ್ಕು ಲಕ್ಷ ರೂಪಾಯಿಗಳನ್ನು ಉಳಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.
ಅಲ್ಲದೆ ಬ್ಯಾಂಕ್ ನಿಂದ ಸಂಘದ ಹೆಸರಿನ ಮೇಲೆ ಸಾಲ ತೆಗೆದುಕೊಂಡು ಈಗ ಇಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಕೂಡ ತನಿಖೆ ನಡೆಸಿ ನಮ್ಮನ್ನು ಋಣ ಮುಕ್ತ ಮಾಡಬೇಕು ಎಂದು ಸಂಘದ ಸದಸ್ಯೆಯರು ಡಿಡಿ ನಾಗರಾಜ್ ಆರ್ ಅವರಲ್ಲಿ ಮನವಿ ಮಾಡಿಕೊಡಿದ್ದಾರೆ.
ಡಿಡಿ ನಾಗರಾಜ್ ಆರ್ ಮಾತನಾಡಿ ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮಹಿಳೆಯರ ಮತ್ತು ಮಕ್ಕಳ ಮೇಲೆ ಇಂತಹ ವಂಚನೆ ಪ್ರಕರಣ ಕಂಡು ಬಂದರೆ ಸಂಬಂಧ ಪಟ್ಟವರು ನಿರ್ಭೀತಿಯಿಂದ ದೂರು ನೀಡಬೇಕು. ಅದರ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸುಗಂಧ ಮೇತ್ರಿ, ರೂಪಾ ಕೋಲಕಾರ, ಸುರೇಖಾ ಕೋಲಕಾರ, ಕಲ್ಪನಾ ಮೇತ್ರಿ, ಮಂಗಲ ಕೋಲಕಾರ, ಲಕ್ಷ್ಮಿ ಕೋಲಕಾರ, ಸುಧಾ ಕೋಲಕಾರ, ರಂಜನಾ ಕೋಲಕಾರ ಉಪಸ್ಥಿತರಿದ್ದರು.
ಅಲ್ಲದೇ ಕೆಪಿಸಿಸಿ ಸದಸ್ಯ ಹಾಗೂ ಶಾಸಕರ ಆಪ್ತ ಸಹಾಯಕ ಮಲಗೌಡ ಪಾಟೀಲ, ಕಾಂಗ್ರೆಸ್ ಸೇವಾದಳದ ರಾಜ್ಯ ಜಂಟಿ ಕಾರ್ಯದರ್ಶಿ ಶಿವಪುತ್ರ ಮೇತ್ರಿ, ಜೈ ಭೀಮ್ ಯುವಕ ಮಂಡಳ ಅಧ್ಯಕ್ಷ ಯಲ್ಲಪ್ಪ ಮೇತ್ರಿ, ಶಿವಪುತ್ರ ಕೋಲಕಾರ ಇತರರು ಉಪಸ್ಥಿತರಿದ್ದರು.
ಸಂತೋಷ ಮೇತ್ರಿ