ಬೆಳಗಾವಿಯ ಹೆಸ್ಕಾಂ ಕಚೇರಿಯ ಮುಂದೆ ರೈತರ ಧರಣಿ…

ಬೆಳಗಾವಿಯ ಹೆಸ್ಕಾಂ ಕಚೇರಿಯ ಮುಂದೆ ರೈತರ ಧರಣಿ..

ಬೆಳಗಾವಿ : ಗುರುವಾರ ನಗರದ ಹೆಸ್ಕಾಂ ವಿಭಾಗೀಯ ಕಚೇರಿಯ ಎದುರಿಗೆ ಬೆಳಗಾವಿ ಗ್ರಾಮೀಣ ಭಾಗದ ರೈತರು ತಮಗೆ ಸಮರ್ಪಕವಾದ ವಿದ್ಯುತ್ ಪೂರೈಕೆ ಆಗಿಲ್ಲ ಎಂದು ಹೆಸ್ಕಾಂ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು..

ಹೆಸ್ಕಾಂ (ಕೆಇಬಿ) ಯವರು ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ, ದಿನಕ್ಕೆ ಕೇವಲ ಎರಡು ಮೂರು ಗಂಟೆ ಮಾತ್ರ ವಿದ್ಯುತ್ ನೀಡುವರು, ಇದರಿಂದ ನಮ್ಮ ಭತ್ತದ ಬೆಳೆ ಅಪಾರ ಪ್ರಮಾಣದಲ್ಲಿ ಹಾಳಾಗುತ್ತಿದೆ, ಈ ಸಮಸ್ಯೆಗೆ ಆದಷ್ಟೂ ಬೇಗ ಪರಿಹಾರ ನೀಡಬೇಕು ಎಂದು ಪ್ರತಿಭಟನೆಯ ಮೂಲಕ ರೈತರು ತಮ್ಮ ಮನವಿ ಮಾಡಿಕೊಂಡರು..

ಈ ವೇಳೆ ಮಾತನಾಡಿದ ರೈತ ಚಳುವಳಿಗಾರ ಅಪ್ಪಾಸಾಹೇಬ ದೇಸಾಯಿ ಅವರು, ತಾಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತಿದೆ, ಈ ವರ್ಷ ಮಳೆಯ ಅಭಾವ ಇರುವದರಿಂದ, ರೈತರು ಬೋರ್ ವೆಲಗಳನ್ನೆ (ಕೊಳವೆ ಭಾವಿ) ಅವಲಂಬಿಸಿದ್ದಾರೆ, ಆದರೆ ಸಮರ್ಪಕ ವಿದ್ಯುತ್ ಇಲ್ಲದ ಕಾರಣ ಬೆಳೆಗೆ ನೀರು ಒದಗಿಸಲಾಗಿದೆ, ಬೆಳೆ ಒಣಗಿ ಹೋಗುತ್ತಿದೆ, ಇದರಿಂದ ಕಡೊಲಿ, ದೇವಗಿರಿ, ಜಾಪರವಾಡಿ, ಕೆದನುರ, ಹಾಗೂ ಮನ್ನಿಕೇರಿ ಗ್ರಾಮಗಳ ರೈತರು ಅತಿಯಾದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಮ್ಮ ಸಂಕಟ ಹೇಳಿಕೊಂಡಿದ್ದಾರೆ..

ಇನ್ನು ಈ ಸಮಸ್ಯೆಗೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂಮಿನ ಮುಖ್ಯ ಅಭಿಯಂತರರು ಆದ ವಿ, ಪ್ರಕಾಶ ಅವರು, ಈಗ ಮಳೆ ಕಡಿಮೆ ಆಗಿರುವದರಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿದ್ಯುಶ್ಯಕ್ತಿಯ ಉತ್ಪಾದನೆ ಕಡಿಮೆ ಆಗಿ, ಸಮಸ್ಯೆ ಆಗಿದೆ, ಈ 15 ದಿನಗಳ ಮುಂಚೆ ನಾವು ಆ ಗ್ರಾಮಗಳಿಗೆ ಸರಿಯಾಗಿ ವಿದ್ಯುತ್ ನೀಡುತ್ತಿದ್ದೇವು, ಈಗಲೂ ಏನೂ ಸಮಸ್ಯೆ ಇಲ್ಲ ಬೇರೆ ಮೂಲಗಳಿಂದ ನಾವು ಆ ಗ್ರಾಮಗಳಿಗೆ ಮೊದಲಿನ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಮಾಡುತ್ತೇವೆ, ಬರುವ ಸೋಮವಾರದಿಂದ ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು..

ಈ ವೇಳೆ ಮುಖ್ಯ ಅಭಿಯಂತರರ ಜೊತೆಯಲ್ಲಿ, ಅಧೀಕ್ಷಕ ಅಭಿಯಂತರರಾದ ಪ್ರವೀಣಕುಮಾರ ಚಿಕಾಡೆ, ಸಹಾಯಕ ಅಭಿಯಂತರರು, ಹಾಗೂ ಹೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..