ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಗಸ್ಟ್ ತಿಂಗಳಲ್ಲಿ, 50ಕೋಟಿ, 69ಲಕ್ಷ, 49ಸಾವಿರದ 260ರೂಪಾಯಿ ಹಣ ಡಿಬಿಟಿ ಮೂಲಕ ಗ್ರಾಹಕರ ಖಾತೆಗೆ ಜಮೆ..

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಗಸ್ಟ್ ತಿಂಗಳಲ್ಲಿ, 50ಕೋಟಿ, 69ಲಕ್ಷ, 49ಸಾವಿರದ 260ರೂಪಾಯಿ ಹಣ ಡಿಬಿಟಿ ಮೂಲಕ ಗ್ರಾಹಕರ ಖಾತೆಗೆ ಜಮೆ..

5 ಕೆಜಿ ಅಕ್ಕಿ ಬದಲಾಗಿ ಹಣ ನೀಡುವ ಅನ್ನಭಾಗ್ಯ ಯೋಜನೆಗೆ ಯೋಜನೆಯ ಸದುಪಯೋಗ ಪಡೆದುಕೊಳ್ಳಿ..

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಬೆಳಗಾವಿ : ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಕ ಮಾಹಿತಿ ಹಂಚಿಕೊಂಡ ಬೆಳಗಾವಿಯ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು, ಜಿಲ್ಲೆಯ ಎಲ್ಲಾ ಪಡಿತರ ಪಲಾನುಭವಿಗಳು ಆಗಸ್ಟ್ ತಿಂಗಳಲ್ಲಿ ಜಮೆಯಾದ ಅನ್ನಭಾಗ್ಯದ ಹಣವನ್ನು dbt ಮೂಲಕ ತಮ್ಮ ಖಾತೆಗಳಿಗೆ ಜಮೆ ಆಗುವಂತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ..

ಸರ್ಕಾರವು ಜುಲೈ 2023ರ ತಿಂಗಳಿನಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ, ಪಡಿತರದ ಜೊತೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿದ ಗ್ಯಾರೆಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದು, ಉಳಿದ 5, ಕೆಜಿ ಅಕ್ಕಿಯ ಬದಲಾಗಿ, ಹಣವನ್ನು ಫಲಾನುಭಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಗೆ (ಡಿಬಿಟಿ)ಯ ಮೂಲಕ ಹಣ ವರ್ಗಾವಣೆಗೆ ಚಾಲನೆ ನೀಡಿದ್ದು, ಜುಲೈ ತಿಂಗಳಲ್ಲಿ ಫಲಾನುಭವಿಗಳಿಗೆ ನಿಯಮಾನುಸಾರ 46,54, 18, 520 ರೂಪಾಯಿಗಳನ್ನು ಫಲಾನುಭವಿಗಳಿಗೆ DBT ಮೂಲಕ ಅವರ ಖಾತೆಗೆ ಯಶಸ್ವಿಯಾಗಿ ಜಮೆ ಮಾಡಿದ್ದು, ಈ ತಿಂಗಳೂ ಕೂಡಾ ಗ್ರಾಹಕರು ಅದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ..

ಅದೇ ರೀತಿ ಆಗಸ್ಟ್ ತಿಂಗಳಲ್ಲಿಯೂ ಕೂಡಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಉತ್ತಮ ಕಾರ್ಯನಿರ್ವಹಣೆ ಮಾಡಿದ್ದು, ಗ್ರಾಹಕರ ಬ್ಯಾಂಕ್ ವ್ಯವಹಾರದ ಸಣ್ಣ ಪುಟ್ಟ ಲೋಪದೋಷಗಳನ್ನು ಸರಿಪಡಿಸಿ, ಈ ತಿಂಗಳು ಒಟ್ಟು 50 ಕೋಟಿ, 69ಲಕ್ಷ, 49ಸಾವಿರದ ಚಿಲ್ಲರೆ ಹಣವನ್ನು ಪಾಲಾನುಭವಿಗಳ ಖಾತೆಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿ ಇದ್ದು, ಈಗಾಗಲೇ ಸುಮಾರು 31,ಲಕ್ಷ ರೂಪಾಯಿಗಳನ್ನು ಗ್ರಾಹಕರ ಖಾತೆಗೆ ಜಮೆ ಆಗಿದೆ ಎಂಬ ಮಾಹಿತಿ ನೀಡಿದ್ದಾರೆ, ಉಳಿದವರು ಕೂಡಾ ಆದಷ್ಟೂ ಬೇಗ DBT ಮೂಲಕ ತಮ್ಮ ಖಾತೆಗೆ ಹಣ ಜಮೆ ಮಾಡಿಕೊಳ್ಳುವ ಕಾರ್ಯ ಮಾಡಬೇಕು ಎಂಬ ಸಲಹೆ ನೀಡಿದ್ದಾರೆ..

ನೇರ ನಗದು ವರ್ಗಾವಣೆಗೆ (DBT) ಪ್ರಕ್ರಿಯೆಗೆ ಗ್ರಾಹಕರು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಮತ್ತು ಮೊಬೈಲ್ ಸಂಖ್ಯೆಯನ್ನು ಲಿಂಕ್ (kyc) ಮಾಡಿರಬೇಕು, ಆ ಬ್ಯಾಂಕ ಖಾತೆ ಸಕ್ರಿಯವಾಗಿ ಇರಬೇಕು, ಅದೇರೀತಿ ಕಳೆದ ಮೂರು ತಿಂಗಳಿಂದ ಒಮ್ಮೆಯಾದರೂ ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ನೀಡಿ, ಪಡಿತರ ಪಡೆದಿರಬೇಕು, ಹಣ ಖಾತೆಗೆ ಬಂದಿರುವ ಬಗ್ಗೆ ಮೊಬೈಲ್ ಮೆಸ್ಸೇಜ್ ಬರುತ್ತದೆ, ಒಂದುವೇಳೆ ಗ್ರಾಹಕರಿಗೆ ಏನಾದರೂ ಸಮಸ್ಯ ಇದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ನಗರದ ಆಹಾರ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ನೀಡಿದ್ದಾರೆ…

ವರದಿ ಪ್ರಕಾಶ ಕುರಗುಂದ..