ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ಸಮಸ್ಯ ಆಲಿಸಿದ ಸಚಿವರು…

ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ಸಮಸ್ಯ ಆಲಿಸಿದ ಸಚಿವರು..

ಬಡ, ಮಧ್ಯಮ ವರ್ಗದ ಜನರ ಜೊತೆ ನಮ್ಮ ಸರ್ಕಾರ ಯಾವತ್ತೂ ಇರುತ್ತದೆ..

ಜನರಿಗೆ ತೊಂದರೆ ಆಗದಂತೆ, ವ್ಯಾಪಾರಿಗಳಿಗೆ ಅನುಕೂಲವಾಗುವ ಹಲವಾರು ಕಾರ್ಯಗಳು ಈಗಾಗಲೇ ನಡೆದಿವೆ..

ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ..

ಬೆಳಗಾವಿ : ತಮ್ಮ ಬಿಡುವಿಲ್ಲದ ಕೆಲಸದ ಒತ್ತಡ, ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಬೇಟಿಯ ನಡುವೆ, ಸಮಯ ಮಾಡಿಕೊಂಡು ರವಿವಾರ ಸಂಜೆ 7 ಗಂಟೆಗೆ ಹನುಮಾನ ನಗರದ (ಟಿ ವಿ ಸೆಂಟರ್) ದಲ್ಲಿರುವ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳಿಗೆ ಭೇಟಿ ನೀಡಿ, ಸಮಸ್ಯ ಆಲಿಸಿ, ಮಾತುಕತೆ ನಡೆಸಿದರು..

ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ಜಿಲ್ಲಾಧ್ಯಕ್ಷರಾದ ಇಮಾಮ್ ಹುಸೇನ್ ಅ ನದಾಫ್ ಹಾಗೂ ನಗರಾಧ್ಯಕ್ಷರಾದ ಪ್ರಸಾದ ರಾ ಕವಳೆಕರ ಅವರ ಕರೆಗೆ ಓಗೊಟ್ಟು ಬಂದ ಸಚಿವರು, ಸುಮಾರು ಹದಿನೇಳು ವಿವಿಧ ಬಗೆಯ ತಿಂಡಿ ತಿನಿಸುಗಳ ಅಂಗಡಿಗಳನ್ನು ವೀಕ್ಷಿಸಿ, ಮಾಲೀಕರೊಂದಿಗೆ ಮಾತುಕತೆ ನಡೆಸಿ, ಅವರ ವಿವಿಧ ಸಮಸ್ಯಗಳನ್ನು ಆಲಿಸಿ, ಪರಿಹಾರ ನೀಡುವುದಾಗಿ ಹೇಳಿದರು..

ಇದೇ ವೇಳೆ ಮಾತನಾಡಿದ ಸಚಿವರು, ಹನುಮಾನ ನಗರದ ಮುಖ್ಯ ವೃತ್ತದಲ್ಲಿ ಮಾಡುತ್ತಿದ್ದ ವ್ಯಾಪಾರ, ಟ್ರಾಫಿಕ್ ಸಮಸ್ಯೆಯಿಂದ ಇಲ್ಲಿಗೆ ಸ್ಥಳಾಂತರವಾಗಿದೆ, ಇಲ್ಲಿಯೂ ವ್ಯಾಪಾರಕ್ಕೆ ಒಳ್ಳೆಯ ವಾತಾವರಣವಿದೆ, ಎಲ್ಲರಿಗೂ ಅನುಕೂಲ ಆಗುವಂತೆ ಕಾರ್ಯ ಮಾಡುವದು ನಮ್ಮ ಕೆಲಸ ಎಂದರು,

ಸ್ಥಳದ ಸಮಸ್ಯ ಇದ್ದಾಗ ವ್ಯಾಪಾರಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಕೂಡಿಕೊಂಡು ಸಮಸ್ಯ ಬಗೆಹರಿಸಿಕೊಂಡು ಹೋಗಬೇಕು, ಈಗ ಹತ್ತು ವರ್ಷಗಳಿಂದ ಅಧಿಕಾರಿಗಳು, ವ್ಯಾಪಾರಿಗಳ ಪರವಾದ ಯಾವುದೇ ವ್ಯವಸ್ಥಿತ ಕಾರ್ಯಗಳನ್ನು ಮಾಡಿಲ್ಲ, ಅವರು ಹಾಗೆ ಮಾಡಿದ್ದು ಸರಿಯಲ್ಲ, ಈಗ ನಾವು ಹೇಳಿದ ಮೇಲೆ ಎಲ್ಲಾ ಕಾರ್ಯಗಳು ಪ್ರಾರಂಭವಾಗಿವೆ ಎಂದಿದ್ದಾರೆ..

ಪಟ್ಟಣ ವ್ಯಾಪಾರಿ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಮಾಡಬೇಕು, ಏಕೆಂದರೆ ಅವರು ವ್ಯಾಪಾರಿಗಳ ಪ್ರತಿನಿಧಿಗಳು, ಅಧಿಕಾರಿಗಳು ವ್ಯಾಪಾರಿಗಳ ಕುರಿತಾಗಿ ಯಾವುದೇ ಕೆಲಸ ಮಾಡುತ್ತಿದ್ದರೂ ಚುನಾಯಿತ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎಂಬ ಸಲಹೆ ನೀಡಿದರು..

ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಮುಂದೆ ಹಲವಾರು ಕಾರ್ಯಕ್ರಮಗಳನ್ನು ನಮ್ಮ ಸರ್ಕಾರದಿಂದ ಹಾಕಿಕೊಳ್ಳುತ್ತೇವೆ, ಅದಕ್ಕೆ ಈಗ ಮಾಡಿರುವ ಕಾರ್ಯವೇ ನಿದರ್ಶನ ಎಂದರು..

ಇನ್ನು ಈ ಸಂಧರ್ಭದಲ್ಲಿ ಸಚಿವರೊಂದಿಗೆ ಸ್ಥಳೀಯ ನಗರ ಸೇವಕರಾದ ಸಂದೀಪ್ ಜಿರಾಗ್ಯಾಳ, ಬೀದಿ ಬದಿ ವ್ಯಾಪಾರಿಗಳ ಜಿಲ್ಲಾಧ್ಯಕ್ಷರಾದ ಇಮಾಮ ಹುಸೇನ್ ನದಾಫ್, ನಗರಾಧ್ಯಕ್ಷರಾದ ಪ್ರಸಾದ್ ಕವಳೆಕರ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ವಿವಿಧ ಇಲಾಖಾ ಸಿಬ್ಬಂದಿಗಳು, ಹನುಮಾನ್ ನಗರದ ವ್ಯಾಪಾರಿಗಳ ಸಮೂಹ, ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಕುರಗುಂದ..