ರೈತ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ..
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ..
ಬೆಳಗಾವಿ : ಶುಕ್ರವಾರ ನಗರದ ಉತ್ತರ ಹಾಗೂ ದಕ್ಷಿಣ ಮಂಡಲದ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಹತ್ತಿರ ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ನಡೆದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು..

ಈ ವೇಳೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಅವರು ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತ ವಿರೋಧಿ ಆಡಳಿತ ಮಾಡುತ್ತಿದ್ದು, ರಾಜ್ಯದ ರೈತ ಸಮುದಾಯದ ಕಂಗೆನ್ನಿಗೆ ಗುರಿಯಾಗಿದೆ ಎಂದರು, ರಾಜ್ಯದಲ್ಲಿ ಸುಮಾರು ನೂರರಿಂದ ನೂರಾ ಇಪ್ಪತ್ತು ರೈತರು ಆತ್ಮಹತ್ಯಾ ಮಾಡಿಕೊಂಡಿರುವ ಸಂಗತಿ ತಿಳಿದಿದ್ದು, ವಿರೋಧ ಪಕ್ಷವಾಗಿ ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸಿ, ನಾವು ರೈತರ ಪರವಾಗಿ ಅವರ ಬೆಂಬಲಕ್ಕೆ ನಿಲ್ಲುತ್ತೆವೆ ಎಂದರು..
ಬಿಜೆಪಿ ಸರ್ಕಾರದಲ್ಲಿ ನಾವು ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಅವೆಲ್ಲವನ್ನೂ ಈಗ ಇವರು ರದ್ದು ಮಾಡಿದ್ದಾರೆ, ಅದು ರಾಜ್ಯದ ರೈತರಿಗೆ ಮಾಡಿದ ಅನ್ಯಾಯ ಎಂದ ಅವರು, ಬರಗಾಲ ಹಾಗೂ ಮುಂದೆ ಬರುವ ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ, ಸರ್ಕಾರ ಆದಷ್ಟೂ ಬೇಗ ಎಚ್ಚೆತ್ತುಕೊಂಡು ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಇಲ್ಲವೆಂದರೆ ವಿರೋಧ ಪಕ್ಷವಾಗಿ ಬಿಜೆಪಿ ತಮಗೆ ತಕ್ಕ ಪಾಠ ಕಲಿಸುತ್ತದೆ ಎಂದಿದ್ದಾರೆ..

ಈ ಸಂದರ್ಭದಲ್ಲಿ ಬೆಳಗಾವಿ ನಗರ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಅನಿಲ ಬೇನಕೆ, ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸಂಜಯ ಪಾಟೀಲ್, ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಶಶಿಮೌಳಿ ಕುಲಕರ್ಣಿ, ಬಿಜೆಪಿ ರಾಜ್ಯ ವಕ್ತಾರರಾದ ಎಂ.ಬಿ ಜಿರಲಿ, ಬೆಳಗಾವಿ ನಗರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಕಲ್ಲಪ್ಪ ಶಹಾಪೂರಕರ, ದಾದಾಗೌಡ ಬಿರಾದಾರ, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಸಾಣಿಕೊಪ್ಪ, ಬಾಹುಬಲಿ ದೊಡ್ಡನ್ನವರ , ನಗರ ಸೇವಕರಾದ ಸಾರಿಖಾ ಕೇತರೆ, ಸಾರಿಖಾ ಪಾಟೀಲ, ಶ್ರೇಯಸ್ಸ ನಾಕಾಡಿ, ಪ್ರಸಾದ ದೇವರಮನಿ ಮಾಧ್ಯಮ ಪ್ರಮುಖ ಶರತ ಪಾಟೀಲ, ಮಹಾಂತೇಶ ವಕ್ಕುಂದ, ರುದ್ರಣ್ಣ ಚಂದರಗಿ, ಗೀತಾ ಕೋಳಿ, ಮಹಾದೇವಿ ಹಿರೇಮಠ, ಗೀತಾ ಸುತಾರ, ವಿನೋದ ಲಂಗೋಟಿ ಸೇರಿದಂತೆ ಪದಾಧಿಕಾರಿಗಳು, ರೈತರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಾಗುಂದ..