ಶೃದ್ಧಾ ಭಕ್ತಿಯಿಂದ ಜರುಗಿದ ಸತ್ಯನಾರಾಯಣ ಪೂಜಾ ಕಾರ್ಯ..!!!

ಶೃದ್ಧಾ ಭಕ್ತಿಯಿಂದ ಜರುಗಿದ ಸತ್ಯನಾರಾಯಣ ಪೂಜಾ ಕಾರ್ಯ..!!!

ನಾಡಿಗೆ ಮಳೆಯಾಗಿ, ಜನಕಲ್ಯಾಣವಾಗಲು ಈ ವಿಶೇಷ ಪೂಜೆ..!!!

ಬೆಳಗಾವಿಯ ಹೆಸ್ಕಾಂ ಸಿಬ್ಬಂದಿಯ ಅಭಿಮತ..!!!

ಬೆಳಗಾವಿ : ಶ್ರಾವಣ ಮಾಸದ ಕೊನೆಯ ಸೋಮವಾರವಾದ ಇಂದು, ಬೆಳಗಾವಿಯ ನೆಹರು ನಗರದ, ಹೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಸತ್ಯನಾರಾಯಣ ಪೂಜೆಯನ್ನು ವಿಶೇಷವಾಗಿ ಹಮ್ಮಿಕೊಂಡು, ಸಿಬ್ಬಂದಿಯ ಶಿಸ್ತಿನ ಆಯೋಜನೆಯಿಂದ ಶ್ರದ್ಧಾ ಭಕ್ತಿಯಿಂದ ಜರುಗಿದೆ..

ಬೆಳಿಗ್ಗೆಯಿಂದಲೇ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಎಲ್ಲರೂ ಸೇರಿ, ಪೂಜೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡು, ಸಕಲ ಸಿದ್ಧತೆಯಿಂದ ಅಚ್ಚುಕಟ್ಟಾಗಿ ಪೂಜಾ ವೇದಿಕೆಯನ್ನು ಸಿದ್ಧಗೊಳಿಸಿದ್ದರು..

ಮಧ್ಯಾಹ್ನದ ಹೊತ್ತಿಗೆ ಸಿಬ್ಬಂದಿಗಳು, ಅವರ ಪರಿವಾರದವರು, ಸ್ಥಳೀಯರು, ಹಾಗೂ ಪ್ರಮುಖರು ಆಗಮಿಸಿ ಪೂಜೆಯಲ್ಲಿ ಭಾಗಿಯಾಗಿ, ದೇವರಿಗೆ ನಮಿಸಿ, ತಮ್ಮ ಕೋರಿಕೆಗಳನ್ನು ಕೇಳಿಕೊಳ್ಳುವ ಸನ್ನಿವೇಶ ಸಾಮಾನ್ಯವಾಗಿತ್ತು, ಬೆಳಗಾವಿ ನಗರಕ್ಕೆ ಸಾಕಷ್ಟು ಮಳೆ ಬರಲಿ, ಆ ಮೂಲಕ ಜನಸಮುದಾಯದ ಕಲ್ಯಾಣವಾಗಬೇಕು ಎಂಬ ಉದ್ದೇಶದಿಂದ ಈ ಪೂಜೆ ಮಾಡುವದಾಗಿ ಕೆಲ ಸಿಬ್ಬಂದಿಗಳು ತಿಳಿಸಿದರು..

ಇನ್ನು ಮಧ್ಯಾಹ್ನ ಕ್ಷೇತ್ರದ ಶಾಸಕರಾದ ರಾಜು ಶೇಟ ಅವರು ಆಗಮಿಸಿ, ದೇವರಿಗೆ ನಮಸ್ಕರಿಸಿ, ಪ್ರಸಾದ ಪಡೆದು, ಈ ರೀತಿಯಾದ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡ ಹೆಸ್ಕಾಂ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸಿದರು..

ಇನ್ನು ಈ ಪೂಜಾ ಕಾರ್ಯಕ್ರಮ ಇದೇ ವರ್ಷ ಪ್ರಾರಂಭವಾಗಿದ್ದು, ಉತ್ತಮ ಆಯೋಜನೆಯೊಂದಿಗೆ ಸುಮಾರು 1500 ಜನರಿಗೆ ಆಗುವಷ್ಟು ಮಹಾಪ್ರಸಾದದ ವ್ಯವಸ್ಥೆ ಮಾಡಿದ್ದು, ಬಹುತೇಕ ಜನರು ಆಗಮಿಸಿ, ದೇವರ ಕೃಪೆಗೆ ಪಾತ್ರರಾಗಿ, ಪ್ರಸಾದ ಸೇವನೆ ಮಾಡಿರುವ ಮಾಹಿತಿಯಿದೆ..

ಈ ಸಂಧರ್ಭದಲ್ಲಿ ಹೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯ ನಗರ ಸೇವಕರು, ಈ ಪೂಜಾ ಕಾರ್ಯದ ಕುರಿತಾಗಿ ಈ ಕೆಳಗಿನಂತೆ ಮಾತನಾಡಿದ್ದು, ಇಂತಹ ಒಳ್ಳೆಯ ಸಮಾಜಮುಖಿ ಕಾರ್ಯಗಳು ಇಲಾಖೆಯಿಂದ ನಡೆದಿದ್ದು ತುಂಬಾ ಸಂತಸದ ವಿಷಯ ಎಂದರು..

ಹೆಸ್ಕಾಂ ಉಪವಿಭಾಗದ ಈ ಪೂಜಾ ಕಾರ್ಯಕ್ರಮಕ್ಕೆ, ಸ್ಥಳೀಯ ಶಾಸಕರು, ನಗರ ಸೇವಕರು, ಸಂಘಟನೆಯ ಮುಖಂಡರು, ಗುತ್ತಿಗೆದಾರರು, ಉದ್ದಿಮೆದಾರರು, ಸಮಾಜದ ಪ್ರಮುಖರು ಹಾಗೂ ಇಲಾಖಾ ಸಿಬ್ಬಂದಿಗಳು ಹಾಜರಿದ್ದು, ಅರ್ಥಪೂರ್ಣವಾದ ಪೂಜಾ ಕಾರ್ಯಕ್ಕೆ ಸಾಕ್ಷಿಯಾದರು..

ವರದಿ ಪ್ರಕಾಶ ಕುರಗುಂದ..