ಮಹಾನಗರ ಪಾಲಿಕೆಯಲ್ಲಿ ಶೃದ್ಧಾ ಭಕ್ತಿಯಿಂದ ಗಣೇಶ ಹಬ್ಬದ ಆಚರಣೆ…

ಮಹಾನಗರ ಪಾಲಿಕೆಯಲ್ಲಿ ಶೃದ್ಧಾ ಭಕ್ತಿಯಿಂದ ಗಣೇಶ ಹಬ್ಬದ ಆಚರಣೆ..

ಆಚರಣೆಯ ಅಂಗವಾಗಿ ಸತ್ಯನಾರಾಯಣ ಪೂಜೆ ಹಾಗೂ ಮಹಾಪ್ರಸಾದದ ಆಯೋಜನೆ..

ಸಂಭ್ರಮದ ಹಬ್ಬದ ಸಡಗರಕ್ಕೆ ಸಾಕ್ಷಿಯಾದ ಬೆಳಗಾವಿ ಪಾಲಿಕೆ..

ಬೆಳಗಾವಿ : ಬುಧವಾರ ದಿನಾಂಕ 27 ರಂದು ಬೆಳಗಾವಿಯ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಜನಜಾತ್ರೆಯ ವಾತಾವರಣ ಸೃಷ್ಟಿಯಾಗಿದ್ದು, ಎಲ್ಲಿ ನೋಡಿದರೂ ಗಣೇಶ ಹಬ್ಬದ ಸಡಗರ, ಸಂಭ್ರಮದ ವಾತಾವರಣವೇ ಕಂಗೊಳಿಸುತ್ತಿತ್ತು..

ಪಾಲಿಕೆಯ ಆಯುಕ್ತರ ಮಾರ್ಗದರ್ಶನದಲ್ಲಿ, ಸಿಬ್ಬಂದಿಗಳೆಲ್ಲರೂ ಸೇರಿಕೊಂಡು, ಗಣೇಶ ಪ್ರತಿಷ್ಠಾಪನೆಯ ದಿನದಿಂದ ಇಂದಿನವರೆಗೂ, ವಿವಿಧ ರೀತಿಯಲ್ಲಿ ಪೂಜೆ, ಪುನಸ್ಕಾರ ಮಾಡುತಾ, ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ಅರ್ಥಪೂರ್ಣವಾಗಿ ಗಣೇಶ ಹಬ್ಬದ ಆಚರಣೆಯನ್ನು ಮಾಡಿದ್ದು, ಇಂದು ಮುಂಜಾನೆ 9 ಗಂಟೆಯಿಂದಲೇ ಶ್ರೀ ಸತ್ಯನಾರಾಯಣ ಪೂಜೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು..

ಪಾಲಿಕೆಯ ಆಯುಕ್ತರನ್ನು ಒಳಗೊಂಡಂತೆ ಪಾಲಿಕೆಯ ಎಲ್ಲಾ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷವಾಗಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿ ದೈವಕೃಪೆಗೆ ಪಾತ್ರರಾದರು ಎಂಬ ಭಾವನೆ ಮೂಡುವಂತಿತ್ತು, ಸುಮಾರು 9-30 ರಿಂದ 11-30ರ ವರೆಗೆ ನಡೆದ ಪೂಜಾ ಕಾರ್ಯದ ನಂತರ ಪಾಲಿಕೆಯ ಸಿಬ್ಬಂದಿಗಳು, ಮಹಾಪ್ರಸಾದ ವ್ಯವಸ್ಥೆಯ ಸಿದ್ಧತೆಯತ್ತ ನಿರತರಾದರು..

ಪಾಲಿಕೆಯ ಆಯುಕ್ತರಾದ ಅಶೋಕ್ ದುಡಗುಂಟಿ, ಉಪಆಯುಕ್ತೆ ಆಡಳಿತ, ಭಾಗ್ಯಶ್ರೀ ಹುಗ್ಗಿ, ಉಪ ಆಯುಕ್ತೆ ಅಭಿವೃದ್ದಿ, ಲಕ್ಷ್ಮಿ ನಿಪ್ಪಾಣಿಕರ, ಉಪ ಆಯುಕ್ತೆ ಕಂದಾಯ, ರೇಷ್ಮಾ ತಾಳಿಕೋಟೆ, ಇವರ ಯೋಜನೆಯ ಪ್ರಕಾರ ಪಾಲಿಕೆಯ ನಗರ ಸೇವಕರಿಗೆ, ವಿವಿಧ ಬೇರೆಬೇರೆ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗೆ, ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ, ಪತ್ರಕರ್ತರಿಗೆ, ಸಮಾಜದ ಮುಖಂಡರು, ಹಾಗೂ ಸಾರ್ವಜನಕರಿಗೆ ಈ ವಿಶೇಷ ಪೂಜಾ ಹಾಗೂ ಮಹಾಪ್ರಸಾದದ ಕಾರ್ಯಕ್ರಮಕ್ಕೆ ಸ್ನೇಹಮಯ ಆತ್ಮೀಯ ಕರೆಯೋಲೆ ನೀಡಿದ್ದು, ಆತ್ಮೀಯ ಆಮಂತ್ರಣಕ್ಕೆ ಸರ್ವರೂ ಹಾಜರಿದ್ದು, ಸಡಗರದ ವಾತಾವರಣಕ್ಕೆ ಸಾಕ್ಷಿಯಾಗಿದ್ದರು…

ಪಾಲಿಕೆಯಲ್ಲಿ ಕಳೆದ ಸುಮಾರು 35 ವರ್ಷಗಳಿಗಿಂತಲೂ ಹಿಂದಿನಿಂದ ಗಣೇಶ ಪ್ರತಿಷ್ಟಾಪನೆ, ಹಾಗೂ ಮಹಾಪ್ರಸಾದದ ಆಯೋಜನೆಯನ್ನು ರೂಢಿಸಿಕೊಂಡು ಬಂದಿದ್ದು, ಈ ವರ್ಷವೂ ಕೂಡಾ ಅತ್ಯಂತ ವ್ಯವಸ್ಥಿತವಾಗಿ, ಸೊಗಸಾಗಿ ಆಯೋಜನೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸುಮಾರು ಐದಾರು ಊಟದ ಕೌಂಟರಗಳನ್ನು ಮಾಡಿದ್ದು, ಬಂದ ಸಾವಿರಾರು ಜನರಿಗೆ ಯಾವುದೇ ಕೊರತೆ, ತೊಂದರೆ ಆಗದಂತೆ, ಸಮಾಧಾನ ಹಾಗೂ ಶಿಸ್ತಿನಿಂದ ಪ್ರಸಾದ ಪಡೆಯುವಂತ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಪಾಲಿಕೆಯ ಸಿಬ್ಬಂದಿಗಳು ಮಾಡಿದ್ದು, ಮಧ್ಯಾಹ್ನ 1- 30 ರಿಂದ ಸಂಜೆ 4 ಗಂಟೆವರೆಗೆ ಪ್ರಸಾದ ಪಡೆಯುವ ಕಾರ್ಯ ಜಾರಿಯಲ್ಲಿತ್ತು..

ಸ್ಥಳೀಯ ಉತ್ತರದ ಶಾಸಕರು, ಪಾಲಿಕೆಯ ನಗರ ಸೇವಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಹಾರ ಇಲಾಖೆಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳು, ಇನ್ನು ಹಲವು ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ, ಪತ್ರಕರ್ತರು, ಸಾರ್ವಜನಿಕರು ಈ ಕಾರ್ಯದಲ್ಲಿ ಭಾಗಿಯಾಗಿ ಸಂತಸಪಟ್ಟರು..

ಇನ್ನು, ಗಣೇಶ ಮಂಟಪದಲ್ಲಿ ತಳಿರು ತೋರಣಗಳಿಂದ ಅಲಂಕಾರಗೊಂಡ, ಪೂಜಾ ಸನ್ನಿವೇಶ, ಇತ್ತ ಆಯುಕ್ತರು ಆದಿಯಾಗಿ, ಪಾಲಿಕೆಯ ಪುರುಷ ಸಿಬ್ಬಂದಿಗಳು ಒಂದೇ ವಿಧವಾದ ಉಡುಪು ಧರಿಸಿದರೆ, ಮಹಿಳಾ ಸಿಬ್ಬಂದಿಗಳು ಹಬ್ಬದ ಉಡುಗೆ ತೊಟ್ಟು, ಎಲ್ಲಾ ಸಿಬ್ಬಂದಿ ಒಕ್ಕಟ್ಟಾಗಿ ಕೆಲಸ ಮಾಡುತ್ತಾ, ಒಟ್ಟಿಗೆ ಸೇರಿ ಫೋಟೋ ತೆಗೆಸಿಕೊಳ್ಳುವ ಅವರ ಖುಷಿಯು, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವಂತಿತ್ತು…

ವರದಿ ಪ್ರಕಾಶ ಕುರಗುಂದ..