ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ವಿಶೇಷವಾಗಿ ಆಚರಣೆಯಾದ ರಾಷ್ಟ್ರೀಯ ರಕ್ತದಾನ ದಿನಾಚರಣೆ…

ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ವಿಶೇಷವಾಗಿ ಆಚರಣೆಯಾದ ರಾಷ್ಟ್ರೀಯ ರಕ್ತದಾನ ದಿನಾಚರಣೆ..

ರಕ್ತ ಸಂಗ್ರಹಣಾ ಸಂಚಾರಿ ವಾಹನಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿಗಳು…

ಕೋಟಿ ಹಣಕ್ಕಿಂತ ರಕ್ತದಾನ ಮಹತ್ವದ್ದು..

ಡಾ ರವಿ ಪಾಟೀಲ್ ಹೇಳಿಕೆ..

ಬೆಳಗಾವಿ : ಶುಕ್ರವಾರ ವಿಶ್ವ ಹೃದಯ ದಿನಾಚರಣೆ ದಿನಾಚರಣೆ ಹಾಗೂ ವಿಶ್ವ ರಕ್ತದಾನ ದಿನಾಚರಣೆ ಮುಂಗಡವಾದ ಆಚರಣೆಯನ್ನು ಬೆಳಗಾವಿಯ ವಿಜಯಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ಹಾಗೂ ಬೆಳಗಾವಿ ಬ್ಲಡ ಬ್ಯಾಂಕಗಳ ಸಹಯೋಗದಲ್ಲಿ ಅರ್ಥಪೂರ್ಣವಾಗಿ ನಡೆದಿದೆ..

ಜಿಲ್ಲಾ ಆರೋಗ್ಯ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ರಕ್ತದಾನದ ಮಹತ್ವ ತಿಳಿಸುವ ಈ ವಿಶೇಷ ಕಾರ್ಯಕ್ರಮವನ್ನು ದ್ವೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು, ಅಕ್ಟೋಬರ್ ಒಂದನೆಯ ತಾರಿಕಿಗೆ ಇರುವ ವಿಶ್ವ ರಕ್ತದಾನ ದಿನಾಚರಣೆಯ ಅಂಗವಾಗಿ ಜರುಗಿದ ಈ ವಿಶೇಷ ಕಾರ್ಯಕ್ರಮದಲ್ಲಿ ರಕ್ತ ಸಂಗ್ರಹಣೆಯ ಮೊಬೈಲ್ ವಾಹನಕ್ಕೆ ಚಾಲನೆಯನ್ನು ಕೂಡಾ ನೀಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಕೋಣೆ ಅವರು, ಬೆಳಗಾವಿ ಜಿಲ್ಲೆಯಲ್ಲಿ ಬಿಮ್ಸ್ ಸೇರಿ ಒಟ್ಟು 14 ರಕ್ತ ಸಂಗ್ರಹಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ 56 ಲಕ್ಷ ಜನರ ಪ್ರಮಾಣಕ್ಕೆ ಹೋಲಿಸಿದರೆ ಇನ್ನು ಹಲವು ಕಡೆಗೆ ರಕ್ತ ಸಂಗ್ರಹ ಕೇಂದ್ರಗಳು ಆಗಬೇಕು, ಮುಖ್ಯವಾಗಿ ಚಿಕ್ಕೋಡಿ, ರಾಯಭಾಗ, ಗೋಕಾಕ್ ಪ್ರದೇಶಗಳಲ್ಲಿ ಕೇಂದ್ರಗಳ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಡಾ ಗಿರೀಶ್ ಬುಡರ್ಕಟ್ಟಿ ಅವರು ಇನ್ನು ಸ್ವಲ್ಪ ಪ್ರಯತ್ನ ಮಾಡಿ, ಮತ್ತಷ್ಟು ಜನರಿಗೆ ಜೀವದಾನ ಮಾಡುವ ಕಾರ್ಯ ಮಾಡಲಿ ಎಂದರು..

ಇನ್ನು ವಿಜಯಾ ಆಸ್ಪತ್ರೆಯ ಪ್ರಮುಖರಾದ ಡಾ ರವಿ ಪಾಟೀಲ್ ಅವರು ಮಾತನಾಡಿ, ಚಂದ್ರಕಾಂತ ಬುಡರ್ಕಟ್ಟಿ ಹಾಗೂ ಡಾ ಗಿರೀಶ್ ಬುಡರ್ಕಟ್ಟಿ ಅವರ ಸೇವೆ, ಕೊಡುಗೆಯನ್ನು ನಾನೊಬ್ಬನೇ ಅಲ್ಲಾ ಇಡೀ ವೈದ್ಯ ಲೋಕವೇ ಮೆಚ್ಚುವಂತಹದ್ದು ಎಂದರು, ನಮ್ಮಲ್ಲಿ ಕೋಟಿಯಷ್ಟು ಹಣ ಇರಬಹುದು, ಆದರೆ ಸಮಯಕ್ಕೆ ಸರಿಯಾಗಿ ರಕ್ತದ ಪೂರೈಕೆ ಮಾಡದಿದ್ದರೆ, ವೈದ್ಯರಾದ ನಾವು ಏನು ಮಾಡಲು ಆಗದು, ಅಂತಹ ಕ್ಲಿಷ್ಟಕರ ಸಮಯದಲ್ಲಿ ತಮ್ಮ ರಕ್ತ ಸಂಗ್ರಹಣಾ ಕೇಂದ್ರದಿಂದ ರಕ್ತದ ಪೂರೈಕೆ ಮಾಡಿ, ಇಂದು ಲಕ್ಷಾಂತರ ಜೀವಗಳನ್ನು ಬದುಕುಳಿಸಿದ ಪುಣ್ಯ ಈ ಬುಡರ್ಕಟ್ಟಿ ಕುಟುಂಬಕ್ಕೆ ಸೇರುತ್ತದೆ ಎಂದರು, ಈಗಾಗಲೇ ರಾಜ್ಯದಲ್ಲಿ ಸುಮಾರು ಆರೇಳು ಕೇಂದ್ರಗಳನ್ನು ಹೊಂದಿ, ರಕ್ತ ಪೂರೈಕೆ ಮಾಡುತ್ತಾ ಜನ ಸೇವೆ ಮಾಡಿ, ಜೀವದಾನ ಮಾಡುವ ಈ ಕುಟುಂಬದಿಂದ ಇಂದು, ರಕ್ತ ಸಂಗ್ರಹಣೆಯ ಮೊಬೈಲ್ ವಾಹನಕ್ಕೆ ಚಾಲನೆಯನ್ನು ನೀಡಿದ್ದು ವಿಶೇಷ, ಇಂತ ಸೇವೆಗೆ ಇಡೀ ನಮ್ಮ ವೈದ್ಯ ಲೋಕದಿಂದ ಅವರಿಗೊಂದು ಕೃತಜ್ಞತೆ ಎಂದರು..

ಇನ್ನು ತಾಲೂಕು ಆರೋಗ್ಯ ಅಧಿಕಾರಿ ಶಿವಾನಂದ ಮಾಸ್ತಿಹೊಳಿ ಅವರು ಮಾತನಾಡಿ, ರಕ್ತವು ಯಾವುದೇ ಫ್ಯಾಕ್ಟರಿಯಲ್ಲಿ ಉತ್ಪಾದನೆ ಆಗಿ, ಅಂಗಡಿಯಲ್ಲಿ ಸಿಗುವ ವಸ್ತುವಲ್ಲ, ಅದು ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನ ಜೀವ ಉಳಿಸುವಲ್ಲಿ ನೀಡುವ ಮಹಾ ದಾನ ಎಂದು, ರಕ್ತದಾನದ ಮಹತ್ವ, ರಕ್ತದಾನ ಮಾಡಿದರೆ ಆಗುವ ಪ್ರಯೋಜನಗಳನ್ನು ವಿವರವಾಗಿ ತಿಳಿಸುವ ಮೂಲಕ ರಕ್ತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು..

ಇನ್ನು ಕಾರ್ಯಕ್ರಮದ ಕೇಂದ್ರ ಬಿಂದು ಆದ ಗಿರೀಶ್ ಬುಡರ್ಕಟ್ಟಿ ಅವರು ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತ, ಇಂದು ಮೊಬೈಲ್ ರಕ್ತ ಸಂಗ್ರಹಣಾ ವಾಹನಕ್ಕೆ ಮಾನ್ಯರಿಂದ ಚಾಲನೆ ದೊರಕಿದ್ದು, ಇದರಿಂದ ಆಸಕ್ತ ಸಾರ್ವಜನಿಕರು ಇದ್ದ ಸ್ಥಳದಲ್ಲಿಯೇ ನಾವು ಹೋಗಿ ರಕ್ತ ಸಂಗ್ರಹಣೆ ಮಾಡಿಕೊಂಡು ಬರುವ ಕಾರ್ಯ ಆಗುತ್ತದೆ, ಇನ್ನೂ ಜಿಲ್ಲೆ ಹಾಗೂ ರಾಜ್ಯದಲ್ಲಿ ಹಲವಾರು ಕೇಂದ್ರಗಳನ್ನು ತೆರೆದು ಆ ಮೂಲಕ ರಕ್ತದ ಕೊರತೆಯಿಂದ ಯಾರೂ ಕೂಡಾ ತಮ್ಮ ಜೀವನ ಕಳೆದುಕೊಳ್ಳಬಾರದೆನ್ನುವದು ನಮ್ಮ ಆಶಯ ಎಂದರು..

ಈಗಾಗಲೇ ನಾವು ರಾಜ್ಯದ ಎಲ್ಲಾ ಕಡೆಗೆ ಸಂಚರಿಸಿ, ವಿಶೇಷ ಸಂದರ್ಭಗಳಲ್ಲಿ ರಕ್ತ ಸಂಗ್ರಹಣೆ ಮಾಡಿ, ಅವಶ್ಯಕವಿದ್ದವರಿಗೆ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದು, ಇನ್ನು ಈ ಕಾರ್ಯದಲ್ಲಿ ಹೆಚ್ಚಿನ ಬೆಳವಣಿಗೆಯೊಂದಿಗೆ, ಜನಸೇವೆ ಮಾಡುವದು ನಮ್ಮ ಬ್ಲಡ್ ಬ್ಯಾಂಕಗಳ ಸದುದ್ದೇಶ ಎಂದರು..

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಕೋಣೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಯಾದ ಡಾ ಚಾಂದನಿ ದೇವಿ, ತಾಲೂಕು ಆರೋಗ್ಯಾಧಿಕಾರಿ ಶಿವಾನಂದ ಮಾಸ್ತಿಹೊಳ್ಳಿ, ವಿಜಯಾ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರನ ನಿರ್ದೇಶಕರಾದ ಡಾ ರವಿ ಪಾಟೀಲ್, ಬೆಳಗಾವಿ ಬ್ಲಡ್ ಬ್ಯಾಂಕಿನ ಪ್ರಮುಖರಾದ ಚಂದ್ರಕಾಂತ ಬುಡರ್ಕಟ್ಟಿ, ಗಿರೀಶ ಬುಡರ್ಕಟ್ಟಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಅಧ್ಯಕ್ಷರಾದ ಎಸ್ ಬಿ ಕುಲ್ಕರ್ಣಿ, ರೋಟರಿ ಕ್ಲಬ್ ಅಧ್ಯಕ್ಷರಾದ ಸತೀಶ್ ನಾಯ್ಕ್, ವಿ ಎಂ ಹಿರೇಮಠ, ಡಾ ಸೋಮಶೇಖರ ಪೂಜೇರಿ, ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು..

ವರದಿ ಪ್ರಕಾಶ ಕುರಗುಂದ…