ಬೆಳಗಾವಿಯಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಲಸಿಕಾ ಅಭಿಯಾನ..
ಶಾಸಕರಾದ ರಾಜು (ಆಸೀಫ್) ಸೇಠ ಅವರಿಂದ ಚಾಲನೆ..

ಬೆಳಗಾವಿ : ದಿನಾಂಕ 30/09/2023 ರಂದು ಬೆಳಗಾವಿ ನಗರದಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿ ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ರೇಬಿಸ್ ಲಸಿಕಾ ಅಭಿಯಾನವನ್ನು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ಆಸೀಫ್ ಸೇಠ್ ರವರು ಉದ್ಘಾಟಿಸಿದರು.

ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯರಾದ ಶ್ರೀ ರಾಜೇಂದ್ರ ಜೈನ ರವರು ಪೆಟ್ ಶಾಪ್ ಮಾಲೀಕರಿಗೆ ತಾತ್ಕಾಲಿಕ ನೋಂದಣಿ ಪತ್ರ ಹಾಗೂ ಪ್ರಾಣಿ ಕಲ್ಯಾಣ್ ಸ್ವಯಂ ಸೇವಾ ಸಂಸ್ಥೆಯವರಿಗೆ ಪ್ರಥಮ್ ಚಿಕಿತ್ಸಾ ಕೀಟಗಳನ್ನು ವಿತರಿಸಿದರು.

125 ಶ್ವಾನಗಳಿಗೆ ಉಚಿತವಾಗಿ ರೇಬೀಸ್ ರೋಗದ ವಿರುದ್ಧ ಲಸಿಕೆ ಹಾಕಲಾಯಿತು.
ಬೆಳಗಾವಿ ಜಿಲ್ಲೆ ಉಪ ನಿರ್ದೇಶಕರು (ಆಡಳಿತ ) ಡಾ ರಾಜೀವ್ ಕುಲೆರ್, ಬೆಂಗಳೂರು ಉಪ ನಿರ್ದೇಶಕರು ಡಾ ಜಯಪ್ರಕಾಶ್,
ಮುಖ್ಯ ಪಶುವೈಧ್ಯಾದಿಕಾರಿ (ಆಡಳಿತ ) ಡಾ ಆನಂದ ಪಾಟೀಲ್ ಉಪಸ್ಥಿತರಿದ್ದರು.

ವರದಿ ಪ್ರಕಾಶ ಕುರಗುಂದ..