ಗೃಹಲಕ್ಷ್ಮಿ ಯೋಜನೆಯ ಗರಿಷ್ಠ ಸಾಧನೆಯತ್ತ ಬೆಳಗಾವಿ ಜಿಲ್ಲೆ…
ಯೋಜನೆಯ ಯಶಸ್ಸಿಗೆ ಇಲಾಖೆಯ ಸಿಬ್ಬಂದಿಯಿಂದ ಶರವೇಗದ ಕಾರ್ಯವೈಖರಿ..
ಜಿಲ್ಲೆಯ ಪಲಾನುಭವಿಗಳಿಗೆ ಎರಡು ತಿಂಗಳಲ್ಲಿ 339 ಕೋಟಿ ಗ್ರಹಲಕ್ಷ್ಮಿ ಹಣ ಬಿಡುಗಡೆ..
ಜಿಲ್ಲಾ ನಿರೂಪನಾಧಿಕಾರಿಗಳಾದ ರೇವತಿ ಹೊಸಮಠ ಸ್ಪಷ್ಟನೆ..
ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ತರ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನಲ್ಲಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಚಾಲನೆ ದೊರೆತು, ಅದೇ ಸಮಯಕ್ಕೆ ಇಡೀ ರಾಜ್ಯದೆಲ್ಲೆಡೆ ಯೋಜನೆಗೆ ಚಾಲನೆ ಕೊಡುವುದರ ಮೂಲಕ ರಾಜ್ಯಾದ್ಯಂತ ಹಬ್ಬದ ವಾತಾವರಣ ನಿರ್ಮಾಣ ಮಾಡಲಾಗಿತ್ತು..
ಈಗ ಯೋಜನೆಯ ಪಾಲಾನುಭವಿಗಳಿಗೆ ಎರಡನೇ ಕಂತಿನ ಹಣ ಜಮೆ ಆಗುತ್ತಿದ್ದು, ಬಹುತೇಕ ಮಹಿಳೆಯರು ಹಣ ಬಂದ ಖುಷಿಯನ್ನು ಬೇರೆಯವರ ಜೊತೆ ಹಂಚಿಕೊಳ್ಳದೇ, ಮೊಬೈಲ್ ಮೆಸೇಜ್ ನೋಡಿ, ತಲೆ ಮೇಲಿನ ಶೇರಗನ್ನು ಮರೆ ಮಾಡಿ, ಒಳಒಳಗೆ ಸಂತಸದ ನಗು ಬೀರುತ್ತಾ, ಗಂಡನ ಕಡೆ ನೋಡುತ್ತಾ ಬಟ್ಟೆ ಸೋಪ್ ತರಲಿಕ್ಕೆ ಇಪ್ಪತ್ತು ರೂಪಾಯಿ ಕೊಡಿ ಎಂಬ ನೋಟ ಬೀರುವ ನಾರ್ಮಲ್ ನಾರಿಯರಾಗಿ ವರ್ತಿಸುತ್ತಿದ್ದಾರೆ..

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗಳು ಸ್ವತಃ ತವರು ಜಿಲ್ಲೆಯವರೇ ಆಗಿರುವದರಿಂದ ಇಲ್ಲಿಯ ಇಲಾಖಾ ಜಿಲ್ಲಾ ಕಚೇರಿಯ ಸಿಬ್ಬಂದಿಗಳು ಗ್ರಹಲಕ್ಷ್ಮಿ ಯೋಜನೆಯ ಯಶಸ್ಸಿಗೆ ಹಗಲಿರುಳು ಹೋರಾಡುತ್ತಿದ್ದಾರೆ, ಯೋಜನೆಗೆ ಚಾಲನೆ ಸಿಕ್ಕ ದಿನದಿಂದ ಹಿಡಿದು ಇಂದಿನವರೆಗೂ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಮತ್ತು ಅಂಗನವಾಡಿ ಸಿಬ್ಬಂದಿಗಳ ಬಿಡುವಿಲ್ಲದ ಕಾರ್ಯವೈಖರಿಯಿಂದ ಇಂದು ಇಡೀ ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅತೀ ಯಶಸ್ಸು ಕಂಡಿದೆ..
ಈ ಕುರಿತು ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಗಳಾದ ರೇವತಿ ಹೊಸಮಠ ಅವರು ಮಾತನಾಡಿ, ಜಿಲ್ಲೆಯ ಮಹಿಳಾ ಮಣಿಗಳಿಗೆ ಆಗಸ್ಟ್ ತಿಂಗಳ ಮೊದಲನೆಯ ಕಂತಿನಲ್ಲಿ 8,49, 331 ಫಲಾನುಭವಿಗಳಿಗೆ, ಒಟ್ಟು 163 ಕೋಟಿ, 86ಲಕ್ಷ, 62 ಸಾವಿರ ಹಣವನ್ನು ಬಿಡುಗಡೆ ಮಾಡಿದ್ದು, 65, 123 ಫಲಾನುಭವಿಗಳ ಖಾತೆ ರಿಜೆಕ್ಟ್ ಆಗಿದ್ದು, ಈಗ ಎರಡನೇ ಕಂತಿನಲ್ಲಿ ಅವೂ ಕೂಡಾ ಪರಿಷ್ಕರಣೆ ಆಗಿದ್ದು ಅವರಿಗೂ ಕೂಡಾ ಈ ಅಕ್ಟೋಬರ್ ತಿಂಗಳ ಎರಡನೇ ಕಂತಿನಲ್ಲಿ ಹಣ ಜಮೆ ಆಗುತ್ತವೆ ಎಂಬ ಮಾಹಿತಿ ನೀಡಿದ್ದಾರೆ.

ಇನ್ನು ಎರಡನೇ ಕಂತಿನಲ್ಲಿ ಜಿಲ್ಲೆಯ 8,49,902 ಫಲಾನುಭವಿಗಳಲ್ಲಿ, 8, 48, 274 ಫಲನುಭವಿಗಳಿಗೆ, ಒಟ್ಟು 169 ಕೋಟಿ, 65 ಲಕ್ಷ, 48 ಸಾವಿರ ಹಣವನ್ನು ಜಮೆ ಮಾಡಿದ್ದು, 1628 ಜನರ ಬ್ಯಾಂಕ್ ಖಾತೆಗಳಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಅಂತವರಿಗೆ ಹಣ ಸಂದಾಯ ಆಗಿಲ್ಲ, ಮುಂದೆ ಅವರ ಸಮಸ್ಯೆ ಕೂಡಾ ಬಗೆ ಹರಿಯುತ್ತೆ ಎಂದರು..
ಇನ್ನು ಇನ್ನುವರೆಗೂ ನೊಂದಣಿ ಆಗಿಲ್ಲದ ಮಹಿಳೆಯರು ಸೇವಸಿಂಧು ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಬಹುದು, ಕರ್ನಾಟಕ ಒನ್, ಬೆಳಗಾವಿ ಒನ್, ಗ್ರಾಂ ಒನ್, ಬಾಪೂಜಿ ಸೇವಾ ಕೇಂದ್ರ ಇತರ ಕಡೆ, ನೊಂದಣಿ ಮಾಡಿಯೂ ಇನ್ನೂ ಹಣ ಜಮೆ ಆಗಿಲ್ಲದವರಿಗೆ ಬ್ಯಾಂಕ್ ಖಾತೆಯ ಕೆಲ ನಿಯಮಗಳಿಂದ ತೊಂದರೆ ಆಗಿದೆ, ಅದಕ್ಕಾಗಿ ನಮ್ಮ ಸಿಬ್ಬಂದಿಗಳ ಮೂಲಕ ಅಂತಹ ಸಮಸ್ಯೆ ಇರುವ ಮಹಿಳೆಯರನ್ನು ಗುರ್ತಿಸಿ, ಅವರಿಗೆ ಪೋಸ್ಟ್ ಆಫೀಸ್ ನಲ್ಲಿ ಹೊಸ ಖಾತೆ ತೆರೆಯಲು ಸೂಚನೆ ನೀಡಲಾಗಿದೆ..
ಅಂಚೆ ಕಚೇರಿಯಲ್ಲಿ ಈಗಾಗಲೇ ನಾಲ್ಕು ದಿನಗಳಿಂದ ಬ್ಯಾಂಕ ಖಾತೆ ತೆರೆಯುವ ಕಾರ್ಯ ನಡೆದಿದ್ದು, ಇಲ್ಲಿಯವರೆಗೆ 1200 ಖಾತೆಗಳು ತೆರೆದಿದ್ದು, ಅಂಚೆ ಇಲಾಖೆಯು ಇದರಲ್ಲಿ ನಮ್ಮ ಇಲಾಖೆಗೆ ತುಂಬಾ ಸಹಕಾರಿಯಾಗಿ ಕಾರ್ಯ ಮಾಡುತ್ತಿದ್ದು, ಎಲ್ಲಾ ಮಹಿಳೆಯರಿಗೂ ಈ ಗೃಹಲಕ್ಷ್ಮಿ ಯೋಜನೆಯ ಲಾಭ ಸಿಗಬೇಕೆನ್ನುವದು ನಮ್ಮೆಲ್ಲರ ಆಶಯ ಎಂದರು..

ಯೋಜನೆಯ ಲಾಭ ಪಡೆಯದೇ ಉಳಿದಿರುವ ಹಾಗೂ ಏನಾದರೂ ಸಮಸ್ಯೆ ಎದುರಿಸುವ ಮಹಿಳೆಯರು ನೇರವಾಗಿ ತಮ್ಮ ಕಚೇರಿಗೆ ಆಗಮಿಸಿ ತಮ್ಮ ಸಮಸ್ಯೆ ಪರಿಹರಿಸಿಕೊಂಡು ಹೋಗಬಹುದು ಎಂದ ಅವರು, ಇಲಾಖೆಯ ಅನುದಾನ ಇದೆ, ಎಲ್ಲರೂ ಅದರ ಉಪಯೋಗ ಪಡೆಯಿರಿ, ಸ್ವಲ್ಪ ನಿಧಾನವಾದರೂ ಎಲ್ಲರಿಗೂ ಸೌಲಭ್ಯ ಸಿಗುತ್ತದೆ, ಏಕೆಂದರೆ ಸಚಿವರ ಮಾರ್ಗದರ್ಶನದಂತೆ ನಮ್ಮ ಇಲಾಖೆಯ ಸಿಬ್ಬಂದಿಗಳು ಹಾಗೂ ಅಂಗನವಾಡಿ ಸಿಬ್ಬಂದಿ ತುಂಬಾ ಶ್ರಮಪಟ್ಟು ಕಾರ್ಯ ಮಾಡುತ್ತಿದ್ದು ಈ ಯೋಜನೆ ಅತ್ಯದ್ಬುತ ಮಟ್ಟದಲ್ಲಿ ಯಶಸ್ವಿ ಆಗುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ..

ವರದಿ ಪ್ರಕಾಶ ಕುರಗುಂದ..