ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆಗೆ ಕೇಂದ್ರ ತಂಡ ಬೆಳಗಾವಿಯಲ್ಲಿ..
ಅಧಿಕಾರಿಗಳ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ ಸಾರ್ವಜನಿಕರು..
ಶಾಸಕರ ಒತ್ತಡದಿಂದ ಸ್ಮಾರ್ಟ್ ಸಿಟಿಯಲ್ಲಿ ಕಳಪೆ ಕಾಮಗಾರಿ..
ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗೊಡ ಆರೋಪ..
ಬೆಳಗಾವಿ : ರವಿವಾರ ದಿನಾಂಕ 29 ರಂದು, ನಗರದಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ವತಿಯಿಂದ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಭಿವೃದ್ದಿ ಪಡಿಸಲಾದ ವಿಶಿಷ್ಟ ಕಾಮಗಾರಿಗಳ ವೀಕ್ಷಣೆಯ ಕಾರ್ಯ ನಡೆದದ್ದು, ಅದರಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಎಡಿಜಿ (ಮೀಡಿಯಾ) ರಾಜೀವ್ ಜೈನ್ ಹಾಗೂ ರಾಷ್ಟ್ರೀಯ ಪತ್ರಕರ್ತರ ತಂಡ ಭಾಗಿಯಾಗಿತ್ತು..

ಈ ಸಂದರ್ಭದಲ್ಲಿ ಸ್ಥಳೀಯ ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ನಗರದ ನಾಥಪೈ ಉದ್ಯಾನ, ಶಿವಾಜಿ ಉದ್ಯಾನದ ರಸ್ತೆ ಮಾತ್ತು ಗ್ರಂಥಾಲಯ, ವ್ಯಾಕ್ಷಿನ್ ಡಿಪೋದಂತಹ ಭಾಗಗಳಲ್ಲಿ ಆದಂತ ಕಾರ್ಯಗಳನ್ನು ವೀಕ್ಷಣೆ ಮಾಡಿದ ಕೇಂದ್ರ ತಂಡವು, ಸ್ಮಾರ್ಟ್ ಸಿಟಿ ಅಡಿಯಲ್ಲಿ, ವಿವಿಧ ವಿಭಾಗಗಳಲ್ಲಿ ಆದ ಕಾರ್ಯಗಳ ಮಾಹಿತಿ ಪಡೆದು, ತಮ್ಮ ಕೇಂದ್ರ ಮಧ್ಯಮ ತಂಡದಿಂದ ಅವುಗಳ ಮಾಹಿತಿ ಕಲೆಹಾಕುವ ಕಾರ್ಯ ನಡೆಸಿದರು..
ಈ ವೇಳೆ ಸ್ಥಳಕ್ಕೆ ಆಗಮಿಸಿದ ನಗರದ ಕೆಲ ಸ್ಥಳೀಯರು, ಕೇಂದ್ರ ತಂಡದ ಅಧಿಕಾರಿಗಳ ಮುಂದೆಯೇ, ಸ್ಮಾರ್ಟ್ ಸಿಟಿಯ ಕಾಮಗಾರಿಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು, ಸಾಮಾಜಿಕ ಕಾರ್ಯಕರ್ತ ಸುಜಿತ್ ಮೂಳಗೊಡ ಅವರ ನೇತೃತ್ವದ ತಂಡವು, ಸ್ಥಳೀಯ ಜನಪ್ರತಿನಿಧಿಗಳ ಒತ್ತಡ ಮತ್ತು ದೌರ್ಜನ್ಯದಿಂದ, ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅನೇಕ ಯಡವಟ್ಟು ಆಗಿ, ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ, ಅಧಿಕಾರಿಗಳ ಮೇಲೆ ಒತ್ತಡ ಹಾಕಿ, ತಮ್ಮ ಲಾಭಕ್ಕಾಗಿ, ಬೇಕಾಬಿಟ್ಟಿ ಕಾಮಗಾರಿ ಮಾಡಿಸಿ, ಇಡೀ ಸ್ಮಾರ್ಟ್ ಸಿಟಿಯ ಕಾಮಗಾರಿ ಹಳ್ಳ ಹಿಡಿಯುವಂತೆ ಮಾಡಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ..

ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗೊಡ್ ಅವರು ಮಾತನಾಡಿ, ನಗರದ ವ್ಯಾಕ್ಸೀನ್ ಡಿಪೋದಲ್ಲಿ ಇರುವ ಅನೇಕ ಗಿಡಮೂಲಿಕೆ ಇರುವ ಔಷದಿ ಗಿಡಮರ ಕಡೆದು, ಜನೋಪಕಾರಿ ಆಮ್ಲಜನಕ ನೀಡುವ, ನಗರವಾಸಿಗಳ ವಾಯುವಿಹಾರಕ್ಕೆ ಇರುವ ನೈಸರ್ಗಿಕ ವನವನ್ನು ನಾಶ ಮಾಡಿ, ಅಲ್ಲಿ ಸ್ಮಾರ್ಟ್ ಸಿಟಿಯ ಕಟ್ಟಡ ಕಾಮಗಾರಿ ಮಾಡುವದರ ವಿರುದ್ಧ ತುಂಬಾ ಜನಾಕ್ರೋಶ ಇತ್ತು, ಆದರೂ ಇಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು ಶಾಸಕರ ದಬ್ಬಾಳಿಕೆ ಎಂದಿದ್ದಾರೆ..

ಕೇಂದ್ರ ತಂಡ ಇಲ್ಲಿಗೆ ಬಂದು, ಅಧಿಕಾರಿ ಹಾಗೂ ಜನಪ್ರತಿನಿಧಿ ಹೇಳಿದ, ಸುಂದರ ಕಾಣುವ ವಿಷಯಗಳನ್ನು ಅಷ್ಟೇ ವರದಿ ಮಾಡಿಕೊಂಡು ಹೋಗುವ ಬದಲಿಗೆ, ಇಲ್ಲಿಯ ಸಮಸ್ಯೆಗಳು, ಕಳಪೆ ಕಾಮಗಾರಿಗಳು, ಅಧಿಕಾರದ ದುರ್ಬಳಕೆ, ದಬ್ಬಾಳಿಕೆ, ಅವೈಜ್ಞಾನಿಕ ಕಾರ್ಯವೈಖರಿಗಳನ್ನು ಕೂಡಾ ಕೇಂದ್ರಕ್ಕೆ ತಲುಪಿಸಿ ಎಂದು ತಮ್ಮ ಅಳಲನ್ನು ತೋಡಿಕೊಂಡರು..
ಈ ಸಂದರ್ಭದಲ್ಲಿ ನಗರ ಪರಿಸರವಾದಿಗಳು, ಪ್ರಗತಿಪರರು, ಸಾಮಾಜಿಕ ಕಾರ್ಯಕರ್ತರು, ಕಾಂಗ್ರೆಸ್ ಪಕ್ಷದ ಪದಾಧಿಕಾರಿ, ಸದಸ್ಯರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು..

ವರದಿ ಪ್ರಕಾಶ ಕುರಗುಂದ..