ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಬೇಡಿ…

ಬರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಬೇಡಿ..

ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ರವಿ ಪಾಟೀಲ್ ಮನವಿ..

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಸಾಮಾನ್ಯವಾಗಿ ಈ ಜಿಲ್ಲೆಯ ಬಹುತೇಕ ತಾಲೂಕುಗಳು ಪ್ರತಿವರ್ಷ ಬರ ಪೀಡಿತ ತಾಲೂಕುಗಳೆಂದೇ ಗೂರ್ತಿಸಿಕೊಂಡಿದ್ದು, ಈ ವರ್ಷ ಜಿಲ್ಲೆಯಲ್ಲಿ ತುಂಬಾ ಕಡಿಮೆ ಮಳೆ ಆಗಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ..

ಬರಪೀಡಿತರ ಪರಿಹಾರದ ವಿಷಯವಾಗಿ ಇಂದು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಆಗಮಿಸಿದ ನೇಗಿಲಯೋಗಿ ರೈತ ಸೇವಾ ಸಂಘದ ಸದಸ್ಯರು, ಜಿಲ್ಲಾಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಮನವಿ ನೀಡಿದ್ದು, ಈ ವೇಳೆ ಸಂಘದ ರಾಜ್ಯಾಧ್ಯಕ್ಷರಾದ ರವಿ ಪಾಟೀಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ಬೇಡಿಕೆ ತಿಳಿಸಿದರು..

2019 ರಿಂದ 2022ರ ವರೆಗೆ ರಾಜ್ಯದಲ್ಲಿ ಅತಿವೃಷ್ಠಿ, ಅನಾವೃಷ್ಟಿ, ನೆರೆಹಾವಳಿ ಬಂದು 2 ವರ್ಷ ಇಡೀ ರಾಜ್ಯಾದ್ಯಂತ ಹಸಿ ಬರಗಾಲ ಉಂಟಾಯಿತು, ಅನೇಕ ಜಾನುವಾರು, ಮನುಷ್ಯರ ಪ್ರಾಣ ಹಾನಿ ಯಾಗಿ, ಶೇಕಡಾ 90 ರಷ್ಟು ಬೆಳೆಹಾನಿ ಆಗಿ, ರೈತರ ಪರಿಸ್ಥಿತಿ ಕಂಗಾಲಾಗಿತ್ತು, ಆಗಿನ ಸರ್ಕಾರ ರೈತರಿಗೆ ಪರಿಹಾರ ಹಣವನ್ನು ಬಿಡುಗಡೆ ಮಾಡಿದಾಗ, ಅನೇಕ ಜಿಲ್ಲೆ, ತಾಲೂಕುಗಳಲ್ಲಿ ಅಧಿಕಾರಿಗಳು ತಮ್ಮ ನಿರ್ಲಕ್ಷ ಹಾಗೂ ತಾರತಮ್ಯದ ಧೋರಣೆ ಮಾಡಿ, ನಿಜವಾದ ರೈತ ಪಲಾನುಭವಿಗಳಿಗೆ ಪರಿಹಾರ ಸಿಗಲಿಲ್ಲ..

ಸರ್ಕಾರದ ಅಧಿಕಾರಿಗಳ ಈ ಪಕ್ಷಪಾತದ ಕಾರ್ಯದಿಂದ ಎಷ್ಟೋ ರೈತ ಕುಟುಂಬಗಳು ಸಂಕಷ್ಟಕ್ಕೆ ತುತ್ತಾದವು, ಕಾರಣ ಈ ಸಲದ ಪರಿಹಾರ ಹಂಚಿಕೆಯಲ್ಲಿ ಹಿಂದೆ ನಡೆದ ತಾರತಮ್ಯದ ಕೆಟ್ಟ ಪದ್ಧತಿ ಮರುಕಳಿಸಬಾರದು, ಎಲ್ಲಾ ರೈತರಿಗೂ ಸಮಾನವಾಗಿ, ಪಾರದರ್ಶಕವಾಗಿ ಬರ ಪರಿಹಾರದ ಸಹಾಯಧನ ಹಂಚಿಕೆ ಆಗಬೇಕು ಎಂದರು..

ಈ ವರ್ಷ ಕೇಂದ್ರ ಸರ್ಕಾರದಿಂದ ಸುಮಾರು 420 ಕೋಟಿ ಹಣ ಬರ ಪರಿಹಾರ ಸಹಾಯಧನದ ರೂಪದಲ್ಲಿ ಜಿಲ್ಲೆಗೆ ಬಂದಿದ್ದು, ರಾಜ್ಯ ಸರ್ಕಾರವೂ ಕೂಡ ಅನುದಾನ ಬಿಡುಗಡೆ ಮಾಡುವುದೆಂದು ಜಿಲ್ಲಾಧಿಕಾರಿ ಅವರು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, ಕಾರಣ ಬಂದಂತ ಅನುದಾನವನ್ನು ರೈತರಲ್ಲಿ ಯಾವ ಬೇಧನಾವ ಮಾಡದೆ, ಉತ್ತಮ ರೀತಿಯಲ್ಲಿ ಪಾರದರ್ಶಕವಾಗಿ ಅನುದಾನ ಹಂಚಿಕೆ ಮಾಡುವಂತೆ, ಪ್ರತಿ ತಾಲೂಕಿನ ತಹಶೀಲ್ದಾರಗಳಿಗೆ, ಅಲ್ಲಿಯ ಕೃಷಿ ಅಧಿಕಾರಿಗಳಿಗೆ ಆದೇಶ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಇಡೀ ನಾಡಿನ ರೈತರ ಪರವಾಗಿ ಮನವಿ ನೀಡಿದ್ದಾರೆ..


ವರದಿ ಪ್ರಕಾಶ್ ಕುರಗುಂದ..