ಬೆಳಗಾವಿಯಲ್ಲಿ ವಿಶ್ವ ಭಾರತಿ ಕಲಾ ಕ್ರೀಡಾ ಪೌಂಡೇಶನ್ ವತಿಯಿಂದ ಮ್ಯಾರಥಾನ್ ಸ್ಪರ್ಧೆ..
ರೈತರು ಮತ್ತು ಸೈನಿಕರಿಗೆ ಕೃತಜ್ಞಾಪೂರಕ ಮುಕ್ತ ಮ್ಯಾರಥಾನ್ ಸ್ಪರ್ಧೆ..
ಬೆಳಗಾವಿ : ಸೋಮವಾರ ದಿನಾಂಕ 06/11/2023 ರಂದು ನಗರದ ಚನ್ನಮ್ಮ ವೃತ್ತದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಳಗಾವಿಯ ವಿಶ್ವ ಭಾರತಿ ಕಲಾ ಕ್ರೀಡಾ ಪೌಂಡೇಶನ್ ಬಳಗದವರು ತಮ್ಮ ಸಂಸ್ಥೆಯ ವತಿಯಿಂದ ವಿನೂತನವಾಗಿ ಏರ್ಪಡಿಸಲಾದ ಮುಕ್ತ ಮ್ಯಾರಥಾನ್ ಓಟದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು..
ರವಿವಾರ ದಿನಾಂಕ 19/11/2023 ರಂದು ಬೆಳಗಾವಿಯ ಗಣೇಶಪೂರದಿಂದ “ಜೈ ಜವಾನ್ ಜೈ ಕಿಸಾನ್” ಎಂಬ ಮುಕ್ತ ಮ್ಯಾರಥಾನ್ 2023 ಪ್ರಾರಂಭವಾಗಿತ್ತು, ದೇಶ ಕಾಯುವ ಸೈನಿಕರು, ಮಾಜಿ ಸೈನಿಕರು ಹಾಗೂ ದೇಶದ ಬೆನ್ನೆಲುಬು, ಅನ್ನದಾತ ರೈತರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಮ್ಯಾರಥಾನ್ ನಡೆಯುತ್ತಿದೆ ಎಂಬ ಮಾಹಿತಿಯನ್ನು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ..

ನಮ್ಮ ಸಂಸ್ಥೆಯು ಈಗಾಗಲೇ ಬೆಳಗಾವಿ ಮತ್ತು ಖಾನಾಪೂರಗಳಲ್ಲಿ ಅನೇಕ ಕ್ರೀಡಾ ಚಟುವಟಿಕೆ ನಡೆಸಿದ್ದು, 25 ಕ್ಕೂ ಹೆಚ್ಚು ಮ್ಯಾರಥಾನ್ ಆಯೋಜಿಸಿ ಯಶಸ್ವಿ ಆಗಿದ್ದು, ಈ ಮ್ಯಾರಥಾನ್ ಕೂಡಾ ಯಶಸ್ವಿ ಆಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ, ರವಿವಾರ ಜರಗುವ ಈ ಮ್ಯಾರಥಾನ್ ಓಟವು ಬೆಳಿಗ್ಗೆ ಆರು ಘಂಟೆಗೆ ಪ್ರಾರಂಭವಾಗುತ್ತದೆ ಎಂದಿದ್ದಾರೆ..
ಈ ಮ್ಯಾರಥಾನ್ ದಲ್ಲಿ ಮೂರು ವಿಭಾಗಗಳು ಇದ್ದು, 1) ಹತ್ತು ಕಿಮೀ ಓಟದಲ್ಲಿ 18 ವಯಸ್ಸಿಗಿಂತ ಹೆಚ್ಚಿನವರು, ಪ್ರವೇಶ ಶುಲ್ಕ 200,
2) ಐದು ಕಿಮೀ ಓಟದಲ್ಲಿ 18 ವಯಸ್ಸಿಗಿಂತ ಚಿಕ್ಕವರು, ಪ್ರವೇಶ ಶುಲ್ಕ 100,
3) ಮೂರು ಕಿಮೀ ಓಟ, ಪನ ಮ್ಯಾರಥಾನ್, ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲಾ, ಪ್ರವೇಶ ಪೀ 50 ರೂಪಾಯಿ,
ಪುರುಷರು ಮತ್ತು ಮಹಿಳೆಯರಿಗೆ ಮೊದಲ ಮೂರು ವಿಜೇತರಿಗೆ 50 ಸಾವಿರದಷ್ಟು ಬಹುಮಾನಗಳನ್ನು ಇರಿಸಲಾಗಿದೆ, ಗರಿಷ್ಠ ವಿಧ್ಯಾರ್ಥಿಗಳು ಭಾಗವಹಿಸುವ ಶಾಲೆಗೆ ವಿಶೇಷ ಬಹುಮಾನ ನೀಡಲಾಗುವುದು ಎಂಬ ಮಾಹಿತಿ ನೀಡಿದ್ದಾರೆ..
ಹೆಚ್ಚಿನ ವಿವರಗಳಿಗಾಗಿ 9371694637,,, 8277436412 ಸಂಖ್ಯೆಗೆ ಸಂಪರ್ಕಿಸಿ…
ವರದಿ ಪ್ರಕಾಶ ಕುರಗುಂದ..