ರಮೇಶ ಜಾರಕಿಹೊಳಿ ಅವರು ಬಿಜೆಪಿಯ ನಾಯಕರು..
ಅವರೊಂದಿಗೆ ನಾವು ಇದ್ದೇವೆ, ಮುಂದೆಯೂ ಇರುತ್ತೇವೆ…
ಮಾಜಿ ಶಾಸಕ ಸಂಜಯ ಪಾಟೀಲ…
ಬೆಳಗಾವಿ : ರಾಜ್ಯಸಭಾ ಸಂಸದರು ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಅವರು ಇಂದು ಬೆಳಗಾವಿ ಮಹಾನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರ ರೈತರಿಗೆ ನೂತನ ವಿದ್ಯುತ್ ಸಂಪರ್ಕವನ್ನು ಸ್ವಂತ ಖರ್ಚಿನಿಂದ ಪಡೆದುಕೊಳ್ಳಬೇಕೆಂಬ ಆದೇಶವನ್ನು ಕೈ ಬಿಡುವಂತೆ ಆಗ್ರಹಿಸಿ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದ ರೈತರಿಗೆ ವಿದ್ಯುತ್ ನೀಡುವ ವಿಚಾರದಲ್ಲಿ ಅನೇಕ ದೋಷಗಳಿದ್ದು, ಇದರ ಭಾರ ರಾಜ್ಯದ ರೈತರ ಮೇಲೆ ಆಗಿದೆ, ಸರ್ಕಾರ ಅವೈಜ್ಞಾನಿಕ ವಿಧಾನದಿಂದ ರೈತರ ಪಂಪ್ಸೆಟ್ ಗಳಿಗೆ ವಿಧ್ಯುತ್ ನೀಡುವದು ವಿಷಾದನೀಯ ಎಂದರು, ಬರ ಘೋಷಣೆ ವಿಷಯದಲ್ಲಿ, ರೈತರ ಆತ್ಮಹತ್ಯಾ ವಿಷಯದಲ್ಲಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಇದ್ದ ರೈತ ಪರ ಯೋಜನೆಗಳನ್ನು ರದ್ದು ಮಾಡಿದ್ದು , ಸಚಿವರುಗಳ ರೈತರ ಬಗೆಗಿನ ನಿರಾಸಕ್ತಿ ಇವೆಲ್ಲ ರೈತರನ್ನು ಸರ್ಕಾರದ ವಿರುದ್ಧ ಸಿಡಿದೇಳುವಂತೆ ಮಾಡುವೆ ಎಂದರು..

ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಹೊಂದಾಣಿಕೆಯ ಕೊರತೆ ಇದೆಯಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕ ಸಂಜಯ ಪಾಟೀಲ ಅವರು, ನಾವೆಲ್ಲ ಒಂದಾಗಿದ್ದೇವೆ, ರಮೇಶ ಜಾರಕಿಹೊಳಿ ಅವರು ಬಿಜೆಪಿಯ ನಾಯಕರು, ನಾವೆಲ್ಲ ಹಿಂದೆಯೂ ಅವರೊಂದಿಗೆ ಇದ್ದೆವು, ಮುಂದೆಯೂ ಇರುತ್ತೇವೆ, ನಾವೇಕೆ ಡಿಕೆಸಿಯನ್ನು ಬೆಂಬಲಿಸಬೇಕು?? ರಮೇಶ ಜಾರಕಿಹೊಳಿ ಅವರ ಜೊತೆಗೆ ನಾವು ಇರುತ್ತೇವೆ ಎಂದರು..

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸಂಜಯ ಪಾಟೀಲ್ ಬೆಳಗಾವಿ ನಗರ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಅನಿಲ್ ಬೇನಕೆ, ಬೆಳಗಾವಿ ನಗರ ಬಿಜೆಪಿ, ಕಲ್ಲಪ್ಪ ಶಹಾಪೂರಕರ, ಸುಭಾಸ ಪಾಟೀಲ, ಸಂದೀಪ ಪಾಟೀಲ, ದಾದಾಗೌಡ ಬಿರಾದಾರ, ಧನಂಜಯ ಜಾಧವ, ಶರದ ಪಾಟೀಲ, ಎಫ್.ಎಸ್ ಸಿದ್ದನಗೌಡರ, ಪ್ರದೀಪ ಸಾಣಿಕೊಪ್ಪ, ಬಾಹುಬಲಿ ದೊಡ್ಡನ್ನವರ, ಮಲ್ಲಿಕಾರ್ಜುನ ಮದನ್ನವರ, ರಾಜು ಡೊಣಿ ಉಪಸ್ಥಿತರಿದ್ದರು.
ವರದಿ ಪ್ರಕಾಶ ಕುರಗುಂದ..