ಪಾಲಿಕೆಯ ಅಧಿಕಾರಿಗಳ ಕಾರ್ಯ ವೈಖರಿಗೆ ಅಸಮಾಧಾನಗೊಂಡ ನಗರ ಸೇವಕ ರವಿ ಧೋತ್ರೆ…
ಪಾಲಿಕೆ ಅಧಿಕಾರಿಗಳು ಬೇಜವಾಬ್ದಾರಿತನಕ್ಕೆ ಪ್ರಸಿದ್ಧರು..
ನಗರ ಸೇವಕ ರವಿ ದೋತ್ರೆ..
ಬೆಳಗಾವಿ : ಮಂಗಳವಾರ ನಗರದ ಪಾಲಿಕೆಯ ಸ್ಥಾಯಿಸಮಿತಿ ಸಭೆಯ ಸಭಾಗೃಹದಲ್ಲಿ ನಡೆದ ಪಾಲಿಕೆಯ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿಯ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಕಾರ್ಯಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿ, ಅಧಿಕಾರಿಗಳಿಗೆ ಇನ್ನಾದರೂ ಜನರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಿರಿ ಎಂದು ಕಿವಿಮಾತನ್ನು ನಗರ ಸೇವಕರಾದ ರವಿ ದೋತ್ರೆ ಅವರು ಹೇಳಿದ್ದಾರೆ..

ಅಭಿವೃದ್ಧಿ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಬೇಕಾದ ಒಟ್ಟು ಹನ್ನೊಂದು ಕಾರ್ಯಸೂಚಿಗಳು ಇದ್ದಿದ್ದು, ಸಮಿತಿಯ ಅಧ್ಯಕ್ಷರಾದ ವೀಣಾ ವಿಲಾಸ ಜೋಶಿ ಹಾಗೂ ಆಡಳಿತ ಪಕ್ಷದ ಅಧ್ಯಕ್ಷರಾದ ರಾಜಶೇಖರ ಡೋಣಿ, ನಗರ ಸೇವಕರ ಸಹಮತದಂತೆ ಅನುಮೋದನೆ ಮಾಡಲಾಗುತ್ತಿತ್ತು, ನಗರದಲ್ಲಿ ಬೆಳಕಿನ ವ್ಯವಸ್ಥೆ, ಬೀದಿ ದೀಪಗಳ ಹಾಕುವ, ಆರ್ಸಿಸಿ ಚರಂಡಿ ನಿರ್ಮಾಣದ, ಪಾಲಿಕೆ ಕಚೇರಿಯಲ್ಲಿ ವಿದ್ಯುತ್ ಸುಧಾರಣೆ, ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದರ ಕುರಿತಾಗಿ ಚರ್ಚೆ ಆಗಿ, ಅನುಮೋದನೆ ನೀಡಲಾಗಿತ್ತು..
ಸಭೆಯ ಮಧ್ಯದ ಅವಧಿಯಲ್ಲಿ ಆಗಮಿಸಿದ ನಗರ ಸೇವಕ ರವಿ ದೊತ್ರೆ ಅವರು, ನಗರದ ಹಲವು ಸ್ಥಳಗಳಲ್ಲಿ ಕೆಲಸ ಬಾಕಿ ಇರುವ ಹಾಗೂ ಸಾರ್ವಜನಿಕರ ಕಾರ್ಯಗಳು ಬಾಕಿ ಇರುವ ಕುರಿತಾಗಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದು, ಅಧಿಕಾರಿಗಳು ಉತ್ತರಿಸದೇ ಮೌನಕ್ಕೆ ಶರಣಾಗಿದ್ದು ಅವರ ಬೇಜವಾಬ್ದಾರಿಗೆ ಸಾಕ್ಷಿಯಾದಂತೆ ಇತ್ತು..

ಬೀದಿ ದೀಪಗಳನ್ನು ಸರಿಯಾಗಿ ವ್ಯವಸ್ಥೆ ಮಾಡಿಲ್ಲದ, ನಗರ ಸೇವಕರ ಮನೆ ಮುಂದೆಯೇ ಕತ್ತಲು ಇರುವುದರ ಬಗ್ಗೆ, ಸರಿಯಾಗಿ ನಗರದಲ್ಲೇ ಸಂಚರಿಸಿ ಸಮಸ್ಯೆ ಆಲಿಸದೇ ಇರುವದು, ಪ್ರಶ್ನೆ ಕೇಳಿದರೆ ಅಭಿವೃದ್ದಿ ವಿಭಾಗದ ಸೂಪರಿದೆಂಟ್ ಎಂಜಿನಿಯರ್ ಮೌನ ಆಗುತ್ತಾರೆ, ಇಲ್ಲಾ ಸಭೆಯಿಂದ ಎದ್ದು ಹೋಗುತ್ತಾರೆ, ಇಂತಹ ಅಧಿಕಾರಿಗಳಿಂದ ಯಾವ ರೀತಿ ಸಾರ್ವಜನಿಕ ಕ್ಷೇತ್ರದ ಅಭಿವೃದ್ಧಿ ಆಗುತ್ತೆ ಎಂದು ಪ್ರಶ್ನೆ ಮಾಡಿದರು..
ಸ್ಥಾಯಿ ಸಮಿತಿಯ ಸಭಾಗ್ರಹ ಹೇಗಿರುತ್ತೆ ಎಂಬ ಕಲ್ಪನೆ ನಿಮಗೆ ಇದೆಯಾ? ಎಂದು ತರಾಟೆಗೆ ತಗೆದುಕೊಂಡು ನಗರ ಸೇವಕರು, ಅಧ್ಯಕ್ಷರ ಕೊಠಡಿ ಹೇಗಿದೆ? ಒಂದು ಮಾಯಿಕ್ ಇಲ್ಲಾ, ಒಳ್ಳೆಯ ಕುರ್ಚಿಗಳು ಇಲ್ಲಾ, ಪ್ಯಾನಗಳಿಲ್ಲಾ, ಟೇಬಲ್ ಗಳಿಲ್ಲಾ, ಈ ರೀತಿಯ ಕುಂದುಕೊರತೆ ಇದ್ದಿದ್ದು ನಿಮ್ಮ ಗಮನಕ್ಕೆ ಏಕೆ ಬರಲಿಲ್ಲ, ಸಭೆ ನಡೆಯುವ ಸಭಾಗ್ರಹವೇ ಇಂತಹ ಪರಿಸ್ಥಿತಿ ಇದ್ದಾಗ, ನೀವೇನು ಕೆಲಸ ಮಾಡುತ್ತಿರಿ ಎಂದು ತಮ್ಮ ಅಸಮಾಧಾನ ಹೊರಹಾಕಿದರು..

ಮಹಾಪೌರರು ಕಚೇರಿಯಲ್ಲಿ ಕೂಡಾ ವಿದ್ಯುತ್ ಸಂಪರ್ಕ ಸರಿ ಇಲ್ಲಾ, ಎಸಿ ಕೆಲಸ ಮಾಡ್ತಾ ಇಲ್ಲಾ, ಮೊನ್ನೆ ವಿದ್ಯುತ್ ಹೋದಾಗ ಮೊಬೈಲ್ ಟಾರ್ಚ್ ಹಚ್ಚಿ ಸಭೆ ಮಾಡಿದ್ದೇವೆ, ಜನರೇಟರ್ ಕೆಲ್ಸ ಮಾಡ್ತಾ ಇಲ್ಲಾ, ಮಹಾಪೌರರು ಕಚೇರಿಯ ಪರಿಸ್ಥಿತಿಯೇ ಹೀಗಿರುವಾಗ ನೀವು ಏನು ಕೆಲಸ ಮಾಡುತ್ತಿದ್ದೀರಿ, ನಿಮ್ಮಂತ ಅಧಿಕಾರಿಗಳು ಏಕೆ ಇರಬೇಕು ಎಂದು ಕಿಡಿ ಕಾರಿದರು..
ಈ ಸಭೆಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರ ಜೊತೆಯಲ್ಲಿ ಮಹಾಪೌರರು, ಉಪಮಹಾಪೌರರು, ನಹರಸೇವಕರು, ಅಧಿಕಾರಿಗಳು, ಹಾಗೂ ಪಾಲಿಕೆ ಸಿಬ್ಬಂದಿ ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..