ನಾಳೆ ದೀಪಾವಳಿ ರಜೆಯ ನಿಮಿತ್ತ ಬೆಳಗಾವಿ ಮೃಗಾಲಯ ತೆರೆದಿರುತ್ತದೆ..
ವನ್ಯ ಸಂಕುಲ, ನಿಸರ್ಗದೊಂದಿಗೆ ಹಬ್ಬ ಆಚರಿಸಲು ಸುಸಂದರ್ಭ..
ರಜಾದಿನವೂ ಕೈ ಬೀಸಿ ಕರೆಯುತ್ತಿದೆ ಬೆಳಗಾವಿಯ ಕಿರು ಮೃಗಾಲಯ..
ಬೆಳಗಾವಿ : ನಗರಕ್ಕೆ ಸಮೀಪ ಇರುವ ಅರಣ್ಯ ಇಲಾಖೆಯ, ಬೆಳಗಾವಿಯ ರಾಣಿ ಚೆನ್ನಮ್ಮ ಕಿರು ಮೃಗಾಲಯವು ನಾಳೆ ಅಂದರೆ ಮಂಗಳವಾರ ಚಾಲೂ ಇರುತ್ತದೆ ಎಂಬ ಮಾಹಿತಿಯನ್ನು ಬೆಳಗಾವಿಯ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ..

ಸಾಮಾನ್ಯವಾಗಿ ವಾರದ ಪ್ರತಿ ಮಂಗಳವಾರ ಮೃಗಾಲಯಕ್ಕೆ ರಜೆ ಇರುತ್ತಿದ್ದು, ಈಗ ದೀಪಾವಳಿ ಹಬ್ಬದ ರಜೆ ಮಂಗಳವಾರವೇ ಬಂದಿರುವ ಕಾರಣ, ಪ್ರವಾಸಿಗರಿಗೆ ಹಾಗೂ ಬೆಳಗಾವಿ ನಗರವಾಸಿಗಳಿಗೆ ತಮ್ಮ ರಜಾ ದಿನವನ್ನು ಸೊಗಸಾಗಿ ಕಳೆಯಲು, ಈ ಸುಂದರ ಹಾಗೂ ಆಕರ್ಷಕವಾದ ಕಿರು ಮೃಗಾಲಯವನ್ನು (ಚಾಲೂ) ತೆರೆದಿಟ್ಟು, ಬರುವ ಜನರಿಗೆ ತಮ್ಮ ರಜಾ ದಿನವನ್ನು ವನ್ಯ ಸಂಕೂಲದೊಂದಿಗೆ ಕಳೆಯಲು ಅವಕಾಶ ಮಾಡಿಕೊಟ್ಟಿದೆ..

ಆದ ಕಾರಣ ಸಾರ್ವಜನಿಕರು ಬೆಳಗಾವಿಯ ಈ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ತಮ್ಮ ಕುಟುಂಬ ಸಮೇತರಾಗಿ ಬಂದು, ಇಲ್ಲಿ ವೈವಿಧ್ಯಮಯ ಪ್ರಾಣಿ, ಪಕ್ಷಿ, ಗಿಡಮರಗಳು, ಜಲಚರಗಳು, ನಿಸರ್ಗ ಸೌಂದರ್ಯವನ್ನು ಸವಿದು ಹೋಗುವ ಅವಕಾಶವನ್ನು ಬೆಳಗಾವಿಗರು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದು ಅರಣ್ಯ ಇಲಾಖೆಯ ಅಭಿಮತ…
ವರದಿ ಪ್ರಕಾಶ ಕುರಗುಂದ..